ಪಶ್ಚಿಮ ಬಂಗಾಳ ಉಳಿಸಿ- ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಕೌಸ್ತವ್ ಬಾಗ್ಚಿ

ಪಶ್ಚಿಮ ಬಂಗಾಳ ಉಳಿಸಿ- ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಕೌಸ್ತವ್ ಬಾಗ್ಚಿ

ಕೋಲ್ಕತ್ತಾ: ಇತ್ತೀಚೆಗೆ ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ನಾಯಕ ಕೌಸ್ತವ್ ಬಾಗ್ಚಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಕೌಸ್ತವ್ ಬಾಗ್ಚಿ ಅವರು ಶನಿವಾರ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ತಮ್ಮ ರಕ್ತದಿಂದ ಬರೆದ ಪತ್ರವನ್ನು ಪ್ರಧಾನಿ ಅವರಿಗೆ ಹಸ್ತಾಂತರಿಸಿದರು.

ಪತ್ರದಲ್ಲಿ, ಪ್ರಧಾನಿ ಮೋದಿಯವರೇ ದಯವಿಟ್ಟು ಪಶ್ಚಿಮ ಬಂಗಾಳವನ್ನು ಕಳ್ಳರಿಂದ ರಕ್ಷಿಸಿ ಎಂದು ಬರೆಯಲಾಗಿದೆ. ಈ ಪತ್ರವನ್ನು ಸ್ವೀಕರಿಸಿದ ಮೋದಿಯವರು ಮತ್ತೆ ಇಂತಹ ಕೆಲಸಗಳನ್ನು ಮಾಡಬೇಡಿ ಎಂದು ಬಾಗ್ಚಿಗೆ ಬುದ್ಧಿ ಹೇಳಿದರು. ಪಕ್ಷದೊಳಗಿನ ಗೌರವದ ಕೊರತೆಯನ್ನು ಉಲ್ಲೇಖಿಸಿ ಬಾಗ್ಚಿ, ಫೆಬ್ರವರಿ 28 ರಂದು ಕಾಂಗ್ರೆಸ್ ತೊರೆದಿದ್ದರು.

ಕಾಂಗ್ರೆಸ್ ಉನ್ನತ ನಾಯಕತ್ವವು ಪಶ್ಚಿಮ ಬಂಗಾಳ ಘಟಕಕ್ಕೆ ಯಾವುದೇ ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಹಾಗಾಗಿ ನನ್ನ ಸ್ವಾಭಿಮಾನವನ್ನು ರಾಜಿ ಮಾಡಿಕೊಳ್ಳಲು ಮತ್ತು ಅದರಲ್ಲಿ ಉಳಿಯಲು ನಾನು ಬಯಸುವುದಿಲ್ಲ ಎಂದು ಅವರು ಪಕ್ಷವನ್ನು ತೊರೆದ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದರು. 2024ರ ಫೆಬ್ರವರಿ 29 ರಂದು ಬಿಜೆಪಿ ಸೇರಿದ್ದರು. ಪ್ರಧಾನಿ ಮೋದಿ ಅವರು ಶನಿವಾರ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದು, ಈ ವೇಳೆ 4,500 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಅನಾವರಣಗೊಳಿಸಿದರು.

Previous Post
ಮೋದಿ ಜಪ ಮಾಡಿದರೆ ಗಂಡನಿಗೆ ರಾತ್ರಿ ಊಟ ನೀಡಬೇಡಿ – ಮಹಿಳೆಯರಿಗೆ ಕ್ರೇಜಿವಾಲ್ ಕರೆ
Next Post
ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಟಿಕೇಟ್ ಗಾಗಿ ಖಾವಿ ಪಟ್ಟು, ಮಾಜಿ ಸಿಎಂಗಳ ಭವಿಷ್ಯ ಹೈಕಮಾಂಡ್ ಕೈಯಲ್ಲಿ

Recent News