ಬಲೂಚಿಸ್ತಾನ್ : ಪಾಕಿಸ್ತಾನದ ಬಲೂಚಿಸ್ತಾನ್ ಮುಸಾಖೆಲ್ ಜಿಲ್ಲೆಯಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ. ಭಯೋತ್ಪಾದಕರು ಪ್ರಯಾಣಿಕರನ್ನು ಬಸ್ನಿಂದ ಕೆಳಗಿಳಿಸಲು ಒತ್ತಾಯಿಸಿದರು ಮತ್ತು ಅವರ ಗುರುತುಗಳನ್ನು ಪರಿಶೀಲಿಸಿದ ನಂತರ ಗುಂಡು ಹಾರಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಸಖೇಲ್ನ ರಾರಶಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಅಂತರ-ಪ್ರಾಂತೀಯ ಹೆದ್ದಾರಿಯನ್ನು ತಡೆದು ಪ್ರಯಾಣಿಕರನ್ನು ಬಸ್ಗಳಿಂದ ಕೆಳಗಿಳಿಸಿದರು ಎಂದು ಸಹಾಯಕ ಕಮಿಷನರ್ ಮುಸಖೈಲ್ ನಜೀಬ್ ಕಾಕರ್ ಉಲ್ಲೇಖಿಸಿ ಡಾನ್ ವರದಿ ಮಾಡಿದೆ. ಮೃತರು ಪಂಜಾಬ್ ಮೂಲದವರು ಎಂದು ಹೇಳಲಾಗಿದೆ, ಇದರ ಜೊತೆಗೆ ಉಗ್ರರು 10 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಇಲ್ಲಿಯವರೆಗೆ ಯಾವುದೇ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಘಟನೆಯನ್ನು ಖಂಡಿಸಿರುವ ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಮೃತರ ಕುಟುಂಬಗಳಿಗೆ ಸಹಾನುಭೂತಿ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಿಸ್ತಾನದ ಫೆಡರಲ್ ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್, ಮುಸಖೈಲ್ ಬಳಿ ಮುಗ್ಧ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ನಡೆಸಿರುವ ದಾಳಿ ಭಯೋತ್ಪಾದಕರು ಕ್ರೂರತೆಯನ್ನು ತೋರಿಸಿದೆ. ಭಯೋತ್ಪಾದಕರು ಮತ್ತು ಅವರ ಸಹಾಯಕರು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಸುಮಾರು ನಾಲ್ಕು ತಿಂಗಳ ಹಿಂದೆ ಇದೇ ರೀತಿಯ ಕ್ರೂರ ಘಟನೆ ನಡೆದಿತ್ತು. ಏಪ್ರಿಲ್ನಲ್ಲಿ ಒಂಬತ್ತು ಪ್ರಯಾಣಿಕರನ್ನು ನೋಶ್ಕಿ ಬಳಿ ಬಸ್ನಿಂದ ಬಲವಂತವಾಗಿ ಹೊರ ಕರೆದು ಬಂದೂಕುಧಾರಿಗಳು ಐಡಿ ತಪಾಸಣೆಯ ಮಾಡಿ, ಗುರುತನ್ನು ಪರಿಶೀಲಿಸಿದ ಬಳಿ ಹತ್ಯೆ ಮಾಡಿದ್ದರು ಎಂದು ಡಾನ್ ವರದಿ ಮಾಡಿದೆ.