ಪ್ರಜ್ವಲ್ ಪೆನ್ ಡ್ರೈವ್ ಹಂಚಿಕೆ ಪ್ರಕರಣ :ಆರೋಪಿಗಳಾದ ನವೀನ ಗೌಡ, ಚೇತನನ್ನು ಬಂಧಿಸಿದ ‘SIT’

ಪ್ರಜ್ವಲ್ ಪೆನ್ ಡ್ರೈವ್ ಹಂಚಿಕೆ ಪ್ರಕರಣ :ಆರೋಪಿಗಳಾದ ನವೀನ ಗೌಡ, ಚೇತನನ್ನು ಬಂಧಿಸಿದ ‘SIT’

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎಸ ಐ ಟಿ ಅಧಿಕಾರಿಗಳು ಆರೋಪಿಗಳಾದ ನವೀನ್ ಗೌಡ ಹಾಗೂ ಚೇತನ್ ನನ್ನು ಬಂಧಿಸಿದ್ದಾರೆ.ಹೈಕೋರ್ಟಿಗೆ ಜಾಮೀನು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇಂದು ಅವರು ಹೈಕೋರ್ಟಿಗೆ ಬಂದಿದ್ದರು.ಈ ವೇಳೆ ನವೀನ ಗೌಡ ಹಾಗೂ ಚೇತನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳು ಹೈಕೋರ್ಟ್ ಗೆ ಬಂದಿದ್ದ ವೇಳೆ ಎಸ್‌ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.ನವೀನ್ ಗೌಡ ಅರೆಸ್ಟ್ ಆಗದ ಬಗ್ಗೆ ಸಾಕಷ್ಟು ಅನುಮಾನ ಹುಟ್ಟು ಹಾಕಿತ್ತು ಈ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಪ್ರಶ್ನೆ ಮಾಡಿದ್ದರು. ಇದೀಗ ಕೊನೆಗೂ ಇಬ್ಬರು ಆರೋಪಿಗಳನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಆರೋಪಿಗಳು. ಹೀಗಾಗಿ ಹೈಕೋರ್ಟ್ ಕಡೆ ಬಂದಿದ್ದ ಇಬ್ಬರನ್ನು ಇದೀಗ ಎಸ್ ಐ ಟಿ ಅಧಿಕಾರಿಗಳು ಬಂಧಿಸಿದ್ದಾರೆ.

Previous Post
ಆರೋಗ್ಯ ಸಮಸ್ಯೆ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್ ಅರ್ಜಿ ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂಕೋರ್ಟ್
Next Post
ಭೂಕುಸಿತ: 2 ಸಾವಿರಕ್ಕೂ ಹೆಚ್ಚು ಮಂದಿ ಸಾವು; ಭಾರತದಿಂದ 1 ಮಿಲಿಯನ್ ಡಾಲರ್ ನೆರವು

Recent News