ಪ್ರಜ್ವಲ್ ವಿಡಿಯೋ ಮೂಲಕ ಬಿಜೆಪಿ ಜೆಡಿಎಸ್ ಮುಗಿಸುವ ಹುನ್ನಾರ ಮಾಡಿದೆ – ಬಿ.ವಿ ಶ್ರೀನಿವಾಸ್ ಆರೋಪ

ಪ್ರಜ್ವಲ್ ವಿಡಿಯೋ ಮೂಲಕ ಬಿಜೆಪಿ ಜೆಡಿಎಸ್ ಮುಗಿಸುವ ಹುನ್ನಾರ ಮಾಡಿದೆ – ಬಿ.ವಿ ಶ್ರೀನಿವಾಸ್ ಆರೋಪ

ನವದೆಹಲಿ : ಬಿಜೆಪಿ ಜೊತೆಗೆ ಕೈ ಜೋಡಿಸಿದ ಪ್ರಾದೇಶಿಕ ಪಕ್ಷಗಳು ನಾಶವಾಗಿವೆ, ತಮಿಳುನಾಡು, ಪಂಜಾಬ್, ಮಹರಾಷ್ಟ್ರದಲ್ಲಿ ಸ್ಥಳೀಯ ಪಕ್ಷಗಳು ಒಡೆದು ಹೋಗಿವೆ. ಈಗ ಕರ್ನಾಟಕದಲ್ಲಿ ಜೆಡಿಎಸ್‌ ಸರದಿ, ಬಿಜೆಪಿ ನಾಯಕರು ಮೈತ್ರಿಕೊಂಡು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕಟ್ಟಿದ ಪಕ್ಷವನ್ನು ವ್ಯವಸ್ಥಿತವಾಗಿ ಮುಗಿಸುತ್ತಿದ್ದಾರೆ ಎಂದು ಯೂತ್ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಆರೋಪಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಮೊದಲು ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಬಿಜೆಪಿ ನಾಯಕರಿಗೆ ಸಿಕ್ಕಿತ್ತು, ಅದನ್ನ ಲೀಕ್ ಮಾಡಿದ್ದು ಬಿಜೆಪಿ ನಾಯಕರು ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ಬಳಸಿಕೊಂಡು ಬಿಜೆಪಿ ಜೆಡಿಎಸ್ ಅನ್ನು ಮುಗಿಸಲು ಹೊರಟಿದ್ದಾರೆ‌. ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿರಬಾರದು ಎನ್ನುವುದು ಬಿಜೆಪಿ ಉದ್ದೇಶ ಹೀಗಾಗೀ ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡು ನಾಶ ಮಾಡುತ್ತಿದ್ದಾರೆ. ಅಕಾಲಿದಳ, ಎಐಎಡಿಎಂಕೆ, ಶಿವಸೇನೆ ರೀತಿಯ ಪರಿಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದರು.

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ ಬಗ್ಗೆ ಮಾತನಾಡಿದ ಅವರು ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ನೆರವಿನಿಂದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದಾರೆ. ಅವರ ಕೈ ಹಿಡಿಯುವ ಕೆಲಸ ಬಿಜೆಪಿ ಮಾಡಿದೆ, ಅವರು ವಾಪಸ್ ಬರಲು ವಿಳಂಬ ಆಗುತ್ತಿರುವುದಕ್ಕೂ ಬಿಜೆಪಿ ಕಾರಣ, ಇದು ಬಿಜೆಪಿ ರಾಜಕೀಯ ಷಡ್ಯಂತ್ರ ಎಂದರು.

ಬೇಟಿ ಬಚಾವ್ ಬೇಟಿ ಪಡಾವ್ ಎನ್ನುವ ಬಿಜೆಪಿ ಎನ್‌ಡಿಎ ನಾಯಕರಿಂದ ಹೆಣ್ಣು ಮಕ್ಕಳ ರಕ್ಷಿಸುವ ಪರಿಸ್ಥಿತಿ ಬಂದಿದೆ.
ವಿಡಿಯೋ ಪ್ರಕರಣದ ವಿಚಾರದಲ್ಲಿ ಮೋದಿ ಅವರ ಮೌನ ಯಾಕೆ ಇತಿಹಾಸದಲ್ಲಿ ಈ ರೀತಿಯ ಘಟನೆ ನೋಡಿರಲಿಲ್ಲ ದಾವಣಗೆರೆಗೆ ಬಂದಿದ್ದ ಮೋದಿ ಈ ಬಗ್ಗೆ ಮಾತನಾಡಬಹುದು ಎಂದುಕೊಂಡಿದ್ದೇವು ಅವರು ಮಾತನಾಡಲಿಲ್ಲ

ಹುಬ್ಬಳ್ಳಿಯಲ್ಲಿ ನೇಹಾ ಮನೆಗೆ ತೆರಳಿದ್ದ ಅಮಿತ್ ಶಾ, ಪ್ರಜ್ವಲ್ ರೇವಣ್ಣರಂದ ಅತ್ಯಚಾರಕ್ಕೊಳಗಾದ ಸಂತ್ರಸ್ತರ ಮನೆಗೆ ಯಾಕೆ ಹೋಗಿಲ್ಲ, ಅರವಿಂದ್ ಲಿಂಬಾವಳಿ ಅವರು ಪಕ್ಷಕ್ಕೆ ಡ್ಯಾಮೇಜ್ ಆಗಿದೆ ಎಂದು ಹೇಳಿದ್ದಾರೆ ಆದರೆ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್‌ ನಿಲುವು ಏನು. ಬಿಜೆಪಿ ನಾಯಕರೇ ರಾಜ್ಯಕ್ಕೆ ಚುನಾವಣಾ ಹೊತ್ತಲ್ಲಿ ಪ್ರಜ್ವಲ್ ಕರೆ ತರುವುದು ಬೇಡ ಎಂದು ಸಲಹೆ ನೀಡಿದ್ದಾರೆ

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡುತ್ತಿದ್ದೇನೆ, ರಾಜ್ಯದ ಮಾನ ಮರ್ಯಾದೆ ಪೆನ್ ಡ್ರೈವ್ ಮೂಲಕ ಹಂಚಿದ್ದಾರೆ ಮೈತ್ರಿ ರದ್ದು ಮಾಡುವ ಮಾತುಗಳು ಕೇಳಿ ಬರ್ತಿದೆ, ಈವರೆಗೂ ಅಧಿಕೃತ ಹೇಳಿಕೆ ಬಂದಿಲ್ಲ. ಈ‌ನಡುವೆ ಬಿಜೆಪಿಯ ಜೆಡಿಎಸ್ ಮುಗಿಸುವ ಕನಸು ನನಸಾಗುತ್ತಿದೆ. ಒಂದು ವೇಳೆ ಮೈತ್ರಿ ರದ್ದಾಗದಿದ್ದರೆ ಪ್ರಜ್ವಲ್ ರೇವಣ್ಣ ಅವರನ್ನ ಬಿಜೆಪಿ ವಾಷಿಂಗ್ ಮಿಷನ್ ನಲ್ಲಿ ಕ್ಲಿನ್ ಮಾಡಲಾಗುತ್ತೆ ಎಂದು ವ್ಯಂಗ್ಯ ಮಾಡಿದರು.

Previous Post
ಚುನಾವಣಾ ಹೊತ್ತಲ್ಲಿ ಇಡಿ ದಾಳಿ, ಜಾರ್ಖಂಡ್‌ನಲ್ಲಿ ಕಂತೆ ಕಂತೆ ಹಣ ವಶಕ್ಕೆ
Next Post
ಮಕ್ಕಳಿಗೆ ತರಗತಿಗಳಲ್ಲಿ ಎಸಿ ವ್ಯವಸ್ಥೆ ಕಲ್ಪಿಸುವ ವೆಚ್ಚವನ್ನು ಪೋಷಕರೇ ಭರಿಸಬೇಕು – ದೆಹಲಿ ಹೈಕೋರ್ಟ್

Recent News