ಪ್ರತಿಭಟನೆ ಮಾಡುವವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಅಮೆರಿಕ!

ಪ್ರತಿಭಟನೆ ಮಾಡುವವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಅಮೆರಿಕ!

ಅಮೆರಿಕದಲ್ಲಿ ಪ್ಯಾಲೆಸ್ತೀನ್ ಪರ ಪ್ರತಿಭಟನೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಅಲ್ಲಿನ ಸರ್ಕಾರಕ್ಕೆ ತಲೆನೋವು ತರಿಸಿದೆ. ಹೀಗಾಗಿ ಇದೀಗ ಅಮೆರಿಕ ಪ್ರತಿಭಟನೆ ಮಾಡುವ ಜನರಿಗೆ ಖಡಕ್ ಎಚ್ಚರಿಕೆ ನೀಡಿದೆ. ಹಾಗಾದ್ರೆ ಅಮೆರಿಕ ನೀಡಿರುವ ಎಚ್ಚರಿಕೆ ಸಂದೇಶವಾದರೂ ಏನು? ಮುಂದೆ ಓದಿ. ಇಸ್ರೇಲ್ & ಹಮಾಸ್ ನಡುವೆ ಆರಂಭವಾಗಿರುವ ಯುದ್ಧದಲ್ಲಿ ಪ್ಯಾಲೆಸ್ತೀನ್ ಜನರು ನಲುಗಿ ಹೋಗಿದ್ದಾರೆ. ಅದ್ರಲ್ಲೂ ಗಾಜಾಪಟ್ಟಿ ನಗರ ಈಗ ಭೂಮಿ ಮೇಲಿನ ನರಕವಾಗಿ ಬದಲಾಗಿ ಹೋಗಿದೆ. ಹೀಗಿದ್ದಾಗ ಅಮೆರಿಕ ಸರ್ಕಾರ ಇಸ್ರೇಲ್ ಪರ ನಿಲ್ಲುತ್ತಿದೆ ಅಂತಾ ಅಮೆರಿಕದಲ್ಲಿ ಪ್ರಜೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.‌ ಇಸ್ರೇಲ್‌ ಸೇನೆ‌ ಹಮಾಸ್‌ ಮೇಲೆ ನಡೆಸುತ್ತಿರುವ ಯುದ್ಧ ನಿಲ್ಲಿಸುವಂತೆ ಒತ್ತಾಯಿಸಿ ಕೆಲ ವಾರಗಳಿಂದ ಅಮೆರಿಕದಲ್ಲಿ ಪ್ರತಿಭಟನೆ‌ ಆರಂಭವಾಗಿದೆ.‌ ಇದು ಅಮೆರಿಕದ ಶಾಂತಿಗೂ ಭಂಗ ತರುತ್ತಿದ್ದು, ಸುಮಾರು 275 ಮಂದಿಯನ್ನು ಪೊಲೀಸರು ಈ ತನಕ ಅರೆಸ್ಟ್ ಮಾಡಿದ್ದಾರೆ. ಇದೇ ಸಮಯದಲ್ಲಿ ಪ್ರತಿಭಟನೆ ಮಾಡುವವರಿಗೆ ಅಮೆರಿಕದಿಂದ ಸೂಚನೆ ಒಂದು ಬಂದಿದೆ.

ಶಾಂತಿಯುತ ಪ್ರತಿಭಟನೆ ಮಾಡಿ! ಹೌದು, ಪ್ಯಾಲೆಸ್ತೀನ್ ಪರವಾಗಿ ಪ್ರತಿಭಟನೆ ಮಾಡುವವರು ಶಾಂತಿಯುತ ಹೋರಾಟವನ್ನು ನಡೆಸಲಿ ಎಂದು ಅಮೆರಿಕ ಎಚ್ಚರಿಕೆ ಸಂದೇಶ ರವಾನಿಸಿದೆ. ದ್ವೇಷ ಭಾಷಣ & ಹಿಂಸಾಚಾರದ ಬೆದರಿಕೆ ಒಪ್ಪಿಕೊಳ್ಳಲು ಆಗಲ್ಲ. ಹೀಗಾಗಿ ಶಾಂತಿಯುತವಾಗಿಯೇ ಪ್ರತಿಭಟನೆ ಮಾಡಿ ಎಂದು ಅಮೆರಿಕ ಸರ್ಕಾರ ಈಗ ಪ್ರತಿಭಟನೆ ಮಾಡುವವರಿಗೆ ಸೂಚನೆ ನೀಡಿದೆ. ಅಲ್ಲದೆ ಪ್ರತಿಭಟನೆ ನಡೆಸುವ ಜನರಿಗೆ ಕಾನೂನು ಮೀರಬೇಡಿ ಎಂದು ಸೂಚಿಸಿದೆ. ಶಾಂತಿಯುತ ಪ್ರತಿಭಟನೆಯ ನಡೆಸುವ ಜನರ ಹಕ್ಕನ್ನ ಗೌರವಿಸುತ್ತೇವೆ. ಆದರೂ ಯೆಹೂದಿ ವಿರೋಧಿ ಭಾಷೆಯನ್ನು ನಾವು ಸಂಪೂರ್ಣ ಖಂಡಿಸುತ್ತೇವೆ ಎಂದಿದೆ ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿ.

ನೂರಾರು ಜನರು ಅಂದರ್! ಅಂದಹಾಗೆ ಅಮೆರಿಕದ ನ್ಯೂಯಾರ್ಕ್‌ನ ಕೊಲಂಬಿಯಾ ವಿವಿ ಅಂಗಳದಲ್ಲಿ ಮೊದಲು ಶುರು ಆಗಿದ್ದ ಪ್ರತಿಭಟನೆಗಳು, ಅಮೆರಿಕದ ಮೂಲೆ ಮೂಲೆಗೂ ಹರಡಿವೆ. ಕೆಲವು ವಿವಿ ಕ್ಯಾಂಪಸ್, ಅಕ್ಷರಶಃ ಹೊತ್ತಿ ಉರಿಯುತ್ತಿವೆ. ಗಲಭೆ ಹತ್ತಿಕ್ಕಲು ಪೊಲೀಸರು ಅಶ್ರುವಾಯು ಬಳಸಿದ್ದಾರೆಂಬ ಮಾಹಿತಿ ಇದೆ. ಮತ್ತೊಂದ್ಕಡೆ ಬೋಸ್ಟನ್‌ನ ಈಶಾನ್ಯ ವಿಶ್ವವಿದ್ಯಾಲಯದಲ್ಲಿ 100 & ಸೇಂಟ್ ಲೂಯಿಸ್‌ ವಾಷಿಂಗ್ಟನ್ ವಿವಿಯಲ್ಲಿ 80, ಅರಿಜೋನಾ ಸ್ಟೇಟ್ ವಿವಿಯಲ್ಲಿ 72 & ಇಂಡಿಯಾನಾ ವಿವಿಯಲ್ಲಿ 23 ಜನ ಪ್ರತಿಭಟನಕಾರರನ್ನ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದ್ದು, ಇದೀಗ ಪರಿಸ್ಥಿತಿ ಭಯಾನಕವಾಗಿದೆ. ಇದೇ ಕಾರಣಕ್ಕೆ ಅಮೆರಿಕ ಸರ್ಕಾರ ಖಡಕ್ ಎಚ್ಚರಿಕೆ ರವಾನೆ ಮಾಡಿದೆ. ಪ್ರತಿಭಟನೆ ಮಾಡುವವರಿಗೆ ಶಾಂತಿ ಕದಡದಂತೆ ಸೂಚನೆ ನೀಡಲಾಗಿದೆ.

Previous Post
ಮಸೀದಿಗೆ ನುಗ್ಗಿ ಧರ್ಮಗುರುವಿನ ಹತ್ಯೆ
Next Post
ಐಪಿಎಲ್ ಇತಿಹಾಸದಲ್ಲಿ ಎರಡು ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ

Recent News