ಪ್ರಧಾನಿ ಮೋದಿ 2 ದಿನ ಫ್ರಾನ್ಸ್ ಪ್ರವಾಸ

ಪ್ರಧಾನಿ ಮೋದಿ 2 ದಿನ ಫ್ರಾನ್ಸ್ ಪ್ರವಾಸ

ಪ್ರಧಾನಿ ಮೋದಿ 2 ದಿನ ಫ್ರಾನ್ಸ್ ಪ್ರವಾಸ ಮಾಡಲಿದ್ದಾರೆ. ಜುಲೈ 14 ರಂದು ನಡೆಯಲಿರುವ ವಾರ್ಷಿಕ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪ್ರಧಾನಿ ಮೋದಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿದಿವೆ.

ಫ್ರಾನ್ಸ್​ ಪ್ರವಾಸದ ಬಗ್ಗೆ ಮೋದಿ ಇಂದು ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

“ಪ್ಯಾರಿಸ್‌ಗೆ ತೆರಳುತ್ತಿದ್ದೇನೆ, ಅಲ್ಲಿ ನಾನು ಬಾಸ್ಟಿಲ್ ಡೇ ಆಚರಣೆಯಲ್ಲಿ ಪಾಲ್ಗೊಳ್ಳುತ್ತೇನೆ. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಇತರ ಫ್ರೆಂಚ್ ಗಣ್ಯರೊಂದಿಗೆ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ. ಇದರ ಜತೆಗೆ ಫ್ರಾನ್ಸ್​ನಲ್ಲಿರುವ ಭಾರತೀಯರೊಂದಿಗೆ ಸಂವಾದ ಮತ್ತು ಅಲ್ಲಿನ ಸಿಇಒಗಳೊಂದಿಗೆ ಮಾತುಕತೆ ನಡೆಸಲಿದ್ದೇನೆ” ಎಂದು ಬರೆದುಕೊಂಡಿರುವುದು ವಿಶೇಷ.

Previous Post
ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ‘ಮೋದಿ’: ‘ಸರ್ಕಾರ ರಚನೆ ಹಕ್ಕು’ ಮಂಡನೆ
Next Post
ಬಿ. ನಾಗೇಂದ್ರ ನೀಡಿದ ರಾಜೀನಾಮೆ ಅಂಗೀಕಾರ ಮಾಡಿದ ರಾಜ್ಯಪಾಲರು

Recent News