ಪ್ರಮುಖ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡು ರಾಜಿ ಮಾಡಿಕೊಳ್ಳದ ಬಿಜೆಪಿ!

ಪ್ರಮುಖ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಂಡು ರಾಜಿ ಮಾಡಿಕೊಳ್ಳದ ಬಿಜೆಪಿ!

ವದೆಹಲಿ: ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಸಂಜೆ 7.15ಕ್ಕೆ ಮತ್ತೊಮ್ಮೆ ಪ್ರಧಾನಿಯಾಗಿ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪೂರ್ಣಬಹುಮತ ಬಾರದ ಕಾರಣ ಬಿಜೆಪಿಯು ಮಿತ್ರಪಕ್ಷಗಳ ಬೆಂಬಲದಿಂದ ಎನ್‌ಡಿಎ ನೇತೃತ್ವದಲ್ಲಿ ಸರ್ಕಾರ ರಚಿಸುತ್ತಿದೆ.

ಹೀಗಾಗಿ ಅನೇಕ ಮಿತ್ರ ಪಕ್ಷಗಳು ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿವೆ. ಆದರೂ ಬಿಜೆಪಿಯೂ ಕೆಲ ಮುಖ್ಯ ಖಾತೆಗಳನ್ನು ತನ್ನಲ್ಲಿಯೇ ಉಳಿಸಿಕೊಂಡು, ಯಾವುದೇ ರಾಜಿ ಇಲ್ಲದೇ ಮುಂದುವರಿಸಲು ಬಯಸಿದೆ ಎನ್ನಲಾಗುತ್ತಿದೆ.

ಪ್ರಮುಖವಾಗಿ, ಕೇಂದ್ರ ಸಂಪುಟದ ಭದ್ರತಾ ಸಮಿತಿ (cabinet committee on security- CCS) ಹೊಂದಿರುವ ಖಾತೆಗಳನ್ನು ಇತರ ಮಿತ್ರ ಪಕ್ಷಗಳಿಗೆ ಹಂಚಲು ಬಿಜೆಪಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎನ್ನಲಾಗಿದ್ದು, ಸಿಸಿಎಸ್ ಸಚಿವ ಸ್ಥಾನವನ್ನು ಬಿಜೆಪಿಯೇ ಉಳಿಸಿಕೊಂಡಿದೆ.

ಬಿಜೆಪಿಯು ಗೃಹ ಖಾತೆ , ರಕ್ಷಣಾ ಇಲಾಖೆ , ವಿದೇಶಾಂಗ ವ್ಯವಹಾರಗಳ ಖಾತೆಗಳನ್ನು ತನ್ನಲ್ಲಿಯೇ ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ.

Previous Post
ಮತ್ತೆ ಮಂತ್ರಿಯಾಗಿ ದಾಖಲೆ ಬರೆದ ಪ್ರಲ್ಹಾದ್‌ ಜೋಶಿ; ಬೆನ್ನು ತಟ್ಟಿ ಆಶೀರ್ವದಿಸಿದ ಬಿಎಸ್‌ವೈ
Next Post
ವರ್ಷದೊಳಗೆ NDA ಸರ್ಕಾರ ಪತನ: ಸಂಜಯ್ ಸಿಂಗ್

Recent News