ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿರುವ ಸುನಿತಾ ವಿಲಿಯಮ್ಸ್ ತಂಡಕ್ಕೆ ಹೊಸ ತಲೆನೋವು, ಆತಂಕಕಾರಿ ‘Spacebug’ ಪತ್ತೆ

ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿರುವ ಸುನಿತಾ ವಿಲಿಯಮ್ಸ್ ತಂಡಕ್ಕೆ ಹೊಸ ತಲೆನೋವು, ಆತಂಕಕಾರಿ ‘Spacebug’ ಪತ್ತೆ

ನವದೆಹಲಿ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ್ದ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ತಂಡಕ್ಕೆ ಹೊಸ ತಲೆನೋವು ಎದುರಾಗಿದ್ದು, ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಭಯಾನಕ ‘Spacebug’ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಇದೇ ಜೂನ್ 6ರಂದು 8 ಮಂದಿ ಇತರ ಸಿಬ್ಬಂದಿಯೊಂದಿಗೆ ಬೋಯಿಂಗ್ ಸಂಸ್ಥೆಯ ಸ್ಟಾರ್ ಲೈನರ್ ರಾಕೆಟ್ ನಲ್ಲಿ ನಾಸಾದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿದ್ದರು. ಈಗಷ್ಟೇ ನಿಲ್ದಾಣದಲ್ಲಿ ಕೆಲಸ ಆರಂಭಿಸಿದ್ದ ಗಗನಯಾತ್ರಿಗಳಿಗೆ ಇದೀಗ ಹೊಸ ತಲೆನೋವು ಎದುರಾಗಿದ್ದು, ನಾಸಾದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಅವರಣದಲ್ಲಿ ಸೂಪರ್ ಬಗ್ ಪತ್ತೆಯಾಗಿದೆ.

ಈ ಬಗ್ಗೆ ಬಾಹ್ಯಾಕಾಶ ತಜ್ಞರು ಮಾಹಿತಿ ನೀಡಿದ್ದು, ”ಐಎಸ್‌ಎಸ್‌ನ ಮುಚ್ಚಿದ ಪರಿಸರದಲ್ಲಿ ವಿಕಸನಗೊಂಡ ಮತ್ತು ಹೆಚ್ಚು ಪ್ರಬಲವಾಗಿರುವ ‘ಎಂಟರ್‌ಬ್ಯಾಕ್ಟರ್ ಬುಗಾಂಡೆನ್ಸಿಸ್’ ಎಂಬ ಹೆಸರಿನ ಬಹು-ಔಷಧ ನಿರೋಧಕ ಬ್ಯಾಕ್ಟೀರಿಯಾವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದು ಬಹು-ಔಷಧ ನಿರೋಧಕವಾಗಿರುವುದರಿಂದ, ಇದನ್ನು ಸಾಮಾನ್ಯವಾಗಿ ‘ಸೂಪರ್ಬಗ್’ ಎಂದು ಕರೆಯಲಾಗುತ್ತದೆ. ಈ ಬ್ಯಾಕ್ಟೀರಿಯಾವು ಉಸಿರಾಟದ ವ್ಯವಸ್ಥೆಗೆ ಸೋಂಕು ತರುತ್ತದೆ ಎಂದು ಹೇಳಿದ್ದಾರೆ. ಅಂತೆಯೇ ಈ ಸ್ಪೇಸ್‌ಬಗ್‌ಗಳು ಬಾಹ್ಯಾಕಾಶ ಜೀವಿಗಳಲ್ಲ, ಆದರೆ ಗಗನಯಾತ್ರಿಗಳು ISS ನಲ್ಲಿ ಕೆಲಸ ಮಾಡಲು ಹೋದಾಗ ಅವರೊಂದಿಗೆ ಅಥವಾ ಅವರೊಂದಿಗಿದ್ದ ವಸ್ತುಗಳೊಂದಿಗೆ ಗುಪ್ತ ಸಹ-ಪ್ರಯಾಣಿಕರಾಗಿ ಪ್ರಯಾಣಿಸಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಈ ಹೊಸ ಬಗ್ ಪತ್ತೆಯಾದ ಹಿನ್ನಲೆಯಲ್ಲಿ ಭಾರತೀಯ ಸಂಜಾತೆ ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ಯುಜೀನ್ “ಬುಚ್” ವಿಲ್ಮೋರ್ ಅವರು ಭೂಮಿಗೆ ಆಗಮಿಸಿದ ಬಳಿಕ ಪ್ರಯೋಗಾಲಯದಲ್ಲಿ ಒಂದು ವಾರ ಕಳೆಯುವ ಸಾಧ್ಯತೆಯಿದೆ. ಅಲ್ಲಿ ಅವರನ್ನು ಸಂಪೂರ್ಣವಾಗಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 

Previous Post
ವರ್ಗಾವಣೆ ವೇಳೆ ತೆರಿಗೆ ಸಂಗ್ರಹದಲ್ಲಿ ಅಧಿಕಾರಿಗಳ ಕಾರ್ಯಕ್ಷಮತೆ ಪರಿಗಣನೆ : ಸಿಎಂ
Next Post
ವಿಮಾನ ಅಪಘಾತದಲ್ಲಿ ಮಲವಿ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಸೇರಿ 9 ಮಂದಿ ಸಾವು: ಅಧ್ಯಕ್ಷರ ಖಚಿತ ಮಾಹಿತಿ

Recent News