ಬಿಜೆಪಿ ಕಚೇರಿಗೆ ಇಂದು ಆಪ್ ಮುತ್ತಿಗೆ ನಾಯಕರನ್ನು ಬಂಧಿಸುವಂತೆ ಬಿಜೆಪಿಗೆ ಕೇಜ್ರಿವಾಲ್ ಸವಾಲು

ಬಿಜೆಪಿ ಕಚೇರಿಗೆ ಇಂದು ಆಪ್ ಮುತ್ತಿಗೆ ನಾಯಕರನ್ನು ಬಂಧಿಸುವಂತೆ ಬಿಜೆಪಿಗೆ ಕೇಜ್ರಿವಾಲ್ ಸವಾಲು

ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಎಪಿ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ನಾಳೆ ಬಿಜೆಪಿ ಕೇಂದ್ರ ಕಚೇರಿಗೆ ತೆರಳುತ್ತಿದ್ದು, ಆಡಳಿತ ಪಕ್ಷವು ಯಾರನ್ನು ಬೇಕಾದರೂ ಬಂಧಿಸಲಿ ಎಂದು ಸವಾಲು ಹಾಕಿದ್ದಾರೆ. ಆಪ್ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹಾಯಕ ಬಿಭವ್ ಕುಮಾರ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ ಬೆನ್ನಲ್ಲೇ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ.

ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು, ಬಿಜೆಪಿ ನಾಯಕರು ಆಪ್ ಪಕ್ಷದ ಹಿಂದೆ ಬಿದ್ದಿದ್ದಾರೆ ಒಬ್ಬರಾದ ಬಳಿಕ ಒಬ್ಬರಂತೆ ನಮ್ಮ ನಾಯಕರನ್ನು ಜೈಲಿಗೆ ಹಾಕಲಾಗುತ್ತಿದೆ, ಮನೀಶ್ ಸಿಸೋಡಿಯ, ಸತ್ಯಂದ್ರ ಜೈನ್, ಸಂಜಯ್ ಸಿಂಗ್ ಮತ್ತು ನನ್ನ ಜೈಲಿಗೆ ಹಾಕಲಾಯಿತು, ಈಗ ನನ್ನ ಆಪ್ ಸಹಾಯಕನನ್ನು ಬಂಧಿಸಲಾಗಿದೆ ಈಗಷ್ಟೆ ಲಂಡನ್ ನಿಂದ ವಾಪಸ್ ಆಗಿರುವ ರಾಘವ್ ಚೆಡ್ಡಾ ಅವರನ್ನು ಬಂಧಿಸಲಿದ್ದಾರಂತೆ, ಸೌರಭ್ ಭಾರಧ್ವಾಜ್ ಮತ್ತು ಅತಿಯನ್ನು ಜೈಲಿಗೆ ಹಾಕಲಾಗುತ್ತದೆ ಎನ್ನಲಾಗುತ್ತಿದೆ

ನಮ್ಮನ್ನು ಎಲ್ಲರನ್ನು ಜೈಲಿಗೆ ಹಾಕಲಾಗುತ್ತಿದೆ, ಅಷ್ಟಕ್ಕೂ ನಮ್ಮ ತಪ್ಪೇನಿದೆ? ದೆಹಲಿ ಬಡ ಜನರಿಗೆ ಒಳ್ಳೆಯ ಶಿಕ್ಷಣ, ಉತ್ತಮ ಆರೋಗ್ಯ, ಕಡಿಮೆ ಬೆಲೆಯಲ್ಲಿ ಔಷಧಿ, ಉಚಿತ 24 ಗಂಟೆಗಳ ನಿರಂತರ ವಿದ್ಯುತ್ ನೀಡುತ್ತಿರುವುದು ನಮ್ಮ ತಪ್ಪಾ? ಇದನ್ನು ಅವರು ಮಾಡಲು ಸಾಧ್ಯವಿಲ್ಲ, ಹೀಗಾಗೀ ನಮ್ಮನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಪ್ರಧಾನಮಂತ್ರಿಗಳು ಒಂದು ರೀತಿಯಲ್ಲಿ ‘ಜೈಲ್ ಕಾ ಕೇಲ್’ ( ಜೈಲಿನ ಆಟ ) ಆಡುತ್ತಿದ್ದಾರೆ, ಹೀಗಾಗೀ ಭಾನುವಾರ ಮಧ್ಯಾಹ್ನ 12 ಗಂಟೆಗೆ ಎಲ್ಲ ಹಿರಿಯ ನಾಯಕರೊಂದಿಗೆ ನಾನು ಬಿಜೆಪಿ ಕಚೇರಿಗೆ ಬರಲಿದ್ದೇವೆ ಯಾರ್ಯರನ್ನ ಜೈಲಿಗೆ ಹಾಕಬೇಕು ಒಟ್ಟಿಗೆ ಜೈಲಿಗೆ ಹಾಕಿ, ನಾವು ಹೆದರುವುದಿಲ್ಲ ಎಂದು ಸವಾಲು ಹಾಕಿದರು.

ಹೀಗೆ ನಮ್ಮ ನಾಯಕರನ್ನು ಜೈಲಿಗೆ ಹಾಕಿ ಆಪ್ ಪಕ್ಷವನ್ನು ನಾಶ ಮಾಡಬೇಕು ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಆಪ್ ಪಕ್ಷ ಒಂದಿ ಚಿಂತನೆಯಾಗಿದೆ, ಇದನ್ನು ನಾಶ ಮಾಡಲು ಪ್ರಯತ್ನಿಸಿದಷ್ಟು ಈ ಚಿಂತನೆ ದೇಶದಲ್ಲಿ ಹೆಚ್ಚಲಿದೆ, ಒಬ್ಬರನ್ನು ಜೈಲಿಗೆ ಹಾಕಿದರೆ ಅಂತಹ ನೂರು ಜನರು ಭಾರತದಲ್ಲಿ ಹುಟ್ಟಲಿದ್ದಾರೆ, ನಮ್ಮ‌ ಚಿಂತನೆ ದೇಶದ್ಯಾಂತ ಪಸರಿಸಿದೆ ಎಂದು ಹೇಳಿದರು.

Previous Post
ಜ್ವಲ್ ರೇವಣ್ಣ ಪ್ರಕರಣದಲ್ಲಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಹೆಚ್ ಡಿ ದೇವೇಗೌಡ; ಕಾನೂನು ಕ್ರಮಕ್ಕೆ ತಕರಾರು ಇಲ್ಲ
Next Post
8 ಬಾರಿ ವೋಟ್ ಮಾಡಿದ ಬಿಜೆಪಿ ನಾಯಕನ ಪುತ್ರನ ವಿಡಿಯೋ ವೈರಲ್‌

Recent News