ಬಿಜೆಪಿ ಸೋಲಿಸಲು ಬಯಸಿದರೆ ಕಾಂಗ್ರೆಸ್ ಮತ್ತು ಸಿಪಿಐಗೆ ಮತ ನೀಡಬೇಡಿ – ಮಮತಾ ಬ್ಯಾನರ್ಜಿ

ಬಿಜೆಪಿ ಸೋಲಿಸಲು ಬಯಸಿದರೆ ಕಾಂಗ್ರೆಸ್ ಮತ್ತು ಸಿಪಿಐಗೆ ಮತ ನೀಡಬೇಡಿ – ಮಮತಾ ಬ್ಯಾನರ್ಜಿ

ನವದೆಹಲಿ : ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ರಚನೆ ಮಾಡಿದ್ದು ನಾನು, ಅದಕ್ಕೆ ಹೆಸರು ಸೂಚಿಸಿದ್ದು ನಾನು ದೇಶದಲ್ಲಿರುವ ಇಂಡಿಯಾ ಮೈತ್ರಿಕೂಟ ಪಶ್ಚಿಮ ಬಂಗಾಳದಲ್ಲಿಲ್ಲ, ಕಾಂಗ್ರೇಸ್ ಮತ್ತು ಸಿಪಿಎಂ ಬಿಜೆಪಿ ಪರವಾಗಿ ಕೆಲಸ‌ ಮಾಡುತ್ತಿವೆ, ನೀವೂ ಬಿಜೆಪಿ ಸೋಲಿಸಬೇಕಾದರೆ ಟಿಎಂಸಿಗೆ ಮತ‌ ನೀಡಬೇಕು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮುರ್ಷಿದಾಬಾದ್‌ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು, ಬಂಗಾಳದಲ್ಲಿ ಟಿಎಂಸಿ ಯಾರ ಜೊತೆಗೂ ಮೈತ್ರಿ ಮಾಡಿಕೊಂಡಿಲ್ಲ, ಇಲ್ಲಿರುವ ಕಾಂಗ್ರೇಸ್ ಮತ್ತು ಟಿಎಂಸಿ ನಾಯಕರು ಬಿಜೆಪಿ ನಾಯಕರ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇಂಡಿಯಾ ಒಕ್ಕೂಟ ನಾನೇ ಕಾರಣಿಭೂತರಾದರೂ ಬಂಗಾಳದಲ್ಲ ಈ ಮೈತ್ರಿ ಅಸ್ತಿತ್ವದಲ್ಲಿಲ್ಲ ಎಂದರು. ಹೀಗಾಗೀ ಬಿಜೆಪಿ ಸೋಲಿಸಲು ನಮ್ಮಗೆ ಮತ ನೀಡಿದ ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ರಾಮನವಮಿ ಆಚರಣೆಯ ಸಂದರ್ಭದಲ್ಲಿ ಬಿಜೆಪಿ ಹಿಂಸಾಚಾರವನ್ನು ಪ್ರಚೋದಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು. ಬಿಜೆಪಿಯು ಮಮತಾ ಬ್ಯಾನರ್ಜಿ ಹೇಳಿಕೆಗೆ ತಿರುಗೇಟು ನೀಡಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ರಾಮನವಮಿ ಆಚರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಮಮತಾ ಬ್ಯಾನರ್ಜಿಯನ್ನು ಹೊಣೆಗಾರರನ್ನಾಗಿಸುವ ಮೂಲಕ ಬಂಗಾಳಿ ಹಿಂದೂಗಳನ್ನು ರಕ್ಷಿಸುವಲ್ಲಿ ವಿಫಲವಾದ ಕಾರಣಕ್ಕೆ ಆಕೆಯನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದೆ.

Previous Post
ಗಾಂಧಿನಗರದಿಂದ ನಾಮಪತ್ರ ಸಲ್ಲಿಸಿದ ಗೃಹ ಸಚಿವ ಅಮಿತ್ ಶಾ
Next Post
ಸಕ್ಕರೆ ಅಂಶ ಹೆಚ್ಚಿಸಿಕೊಳ್ಳಲು ಮಾವು ಸೇವನೆ – ಇಡಿ ಆರೋಪಕ್ಕೆ ತಿರುಗೇಟು ನೀಡಿದ ಕೇಜ್ರಿವಾಲ್

Recent News