ಬಿಹಾರದಲ್ಲಿ INDIA ಒಕ್ಕೂಟದ ಸೀಟು ಹಂಚಿಕೆ ಅಂತಿಮ

ಬಿಹಾರದಲ್ಲಿ INDIA ಒಕ್ಕೂಟದ ಸೀಟು ಹಂಚಿಕೆ ಅಂತಿಮ

ನವದೆಹಲಿ:ಬಿಹಾರದಲ್ಲಿ ಒಕ್ಕೂಟ ಸೀಟು ಹಂಚಿಕೆ ಅಧಿಕೃತವಾಗಿ ಫೈನಲ್‌ ಮಾಡಿದೆ. ಆರ್‌ಜೆಡಿ ಕಾಂಗ್ರೆಸ್‌ ಎಡಪಕ್ಷಗಳು ಒಟ್ಟಾಗಿ ಸುದ್ದಿಗೋಷ್ಠಿ ನಡೆಸಿ ಲೋಕಸಭಾ ಚುನಾವಣೆಯ ಸೀಟು ಹಂಚಿಕೆ ವಿಚಾರ ತಿಳಿಸಿವೆ. ಬಿಹಾರದಲ್ಲಿ ಒಟ್ಟು 40 ಕ್ಷೇತ್ರಗಳಿದ್ದು ಆರ್‌ಜೆಡಿ 20, ಕಾಂಗ್ರೆಸ್‌ 9, ಎಡ ಪಕ್ಷಗಳು 5 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಎನ್‌ಡಿಎ ಒಕ್ಕೂಟ ಈಗಾಗಲೇ ಸ್ಥಾನ ಹಂಚಿಕೆ ಮಾಡಿದೆ. ಬಿಜೆಪಿ 17, ಜೆಡಿಯು 16, ಜಿತನ್‌ ರಾಮ್‌ ಮಾಂಜಿ ಅವರ ಹಿಂದೂಸ್ತಾನಿ ಆವಾಮ್ ಮೋರ್ಚಾ‌ ಮತ್ತು ರಾಷ್ಟ್ರೀಯ ಲೋಕ ಸಮತಾ ಪಾರ್ಟಿ 1 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಲೋಕ ಜನಶಕ್ತಿ ಪಾರ್ಟಿ (ರಾಮ್‌ ವಿಲಾಸ್‌) ಪಕ್ಷ 5 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಯು, ಎಲ್‌ಜೆಪಿ ಮೈತ್ರಿ 40 ಕ್ಷೇತ್ರಗಳ ಪೈಕಿ 39 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಹಾರದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಜೂನ್‌ 4 ರಂದು ಮತ ಎಣಿಕೆ ನಡೆಯಲಿದೆ

Previous Post
ಲೋಕಸಭೆ ಚುನಾವಣೆ ಹೊತ್ತಲ್ಲಿ ಕಾಂಗ್ರೇಸ್ ಗೆ ಸಂಕಷ್ಟ 1,700 ಕೋಟಿ ಬಡ್ಡಿ ಸಹಿತ ದಂಡ ಕಟ್ಟಲು ಐಟಿ ನೋಟಿಸ್
Next Post
ಅಬಕಾರಿ ನೀತಿ ಹಗರಣ: ದೆಹಲಿಯ ಮತ್ತೋರ್ವ ಸಚಿವರಿಗೆ ED ಸಮನ್ಸ್

Recent News