ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಭೀಕರ ಸ್ಫೋಟ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಭೀಕರ ಸ್ಫೋಟ

ರಾಜಧಾನಿ ಬೆಂಗಳೂರಿನಲ್ಲಿ ಪದೇ ಪದೇ ಹೋಟೆಲ್‌ಗಳಲ್ಲಿ ದುರಂತಗಳು ಸಂಭವಿಸುತ್ತಿವೆ. ಅದ್ರಲ್ಲೂ ಕಳೆದ ಕೆಲವು ತಿಂಗಳಿಂದ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದು ಗ್ರಾಹಕರಲ್ಲಿ ಕೂಡ ಭಯ ಹುಟ್ಟಿಸಿದೆ. ಇಂದು ಕೂಡ ಇಂತಹದ್ದೇ ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ಎಚ್‌ಎಎಲ್ (HAL) ಸಮೀಪದ ಕುಂದಲಹಳ್ಳಿ ಗೇಟ್ ಬಳಿ. ಇನ್ನು ಈ ಭೀಕರ ಸ್ಫೋಟಕ್ಕೆ ಕಾರಣ ಏನು ಗೊತ್ತೆ? ಬನ್ನಿ ತಿಳಿಯೋಣ. ಬೆಂಗಳೂರು ನಗರದ ಕುಂದಲಹಳ್ಳಿ ಬಳಿಯ ಹೋಟೆಲ್‌ ಒಂದರಲ್ಲಿ ಸ್ಪೋಟವು ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಹೋಟೆಲ್ ಒಳಗೆ ಭೀಕರ ಹಾನಿಯಾಗಿದ್ದು, ಹೋಟೆಲ್ ಒಳಾಂಗಣವೆ ಛಿದ್ರ ಛಿದ್ರವಾಗಿ ಹೋಗಿದೆ. ಸುದ್ದಿ ತಿಳಿದ ತಕ್ಷಣ ಎಚ್‌ಎಎಲ್‌ ಪೊಲೀಸರು ಸ್ಥಳಕ್ಕೆ ಭೇಟಿಯ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸ್ಫೋಟಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಸ್ಥಳೀಯರು ಸ್ಪೋಟ ತೀವ್ರತೆಗೆ ಗಾಬರಿ ಆಗಿದ್ದಾರೆ. ಬೆಂಕಿ ಅವಘಡ ನಡೆದಿಲ್ಲ ಅನ್ನೋದು ಸ್ಪಷ್ಟವಾಗಿದ್ದು. ಬಾಯಿಲರ್ ಸ್ಪೋಟದಿಂದ ಈ ಅವಘಢ ಸಂಭವಿಸಿರಬಹುದು ಅಂತಾ ಮೇಲ್ನೋಟಕ್ಕೆ ಇದೀಗ ಹೇಳಲಾಗುತ್ತಿದೆ ಆದರೂ, ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ.

ಅಕ್ಕಪಕ್ಕದ ಮನೆಗಳ ಕಥೆ ಏನು? ಇನ್ನು ಈ ಕುರಿತು ಸ್ಥಳೀಯರೊಬ್ಬರು ಮಾತನಾಡಿ, ‘ರಾಮೇಶ್ವರಂ ಕೆಫೆಯಲ್ಲಿ ಐಟಿಪಿಎಲ್‌ ಮೇನ್ ರೋಡ್‌ ಹತ್ತಿರ ಈ ಘಟನೆ ನಡೆದಿದೆ. ಇಲ್ಲಿ ತುಂಬಾ ಜನ ಇದ್ದರು. ಎಂಟರಿಂದ ಹತ್ತು ಜನ ಗಾಯಗೊಂಡಿದ್ದಾರೆ. ಒಬ್ಬ ಮಹಿಳೆ ಬಟ್ಟೆ ಸುಟ್ಟು ಹೋಗಿತ್ತು. ಇದಕ್ಕೆ ಕಾರಣ ತಿಳಿದಿಲ್ಲ’ ಅಂತಾ ಹೇಳಿದ್ದಾರೆ. ಇದೀಗ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಪೊಲೀಸರು & ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೇ ಬೆಂಕಿ ಇದೀಗ, ಸಂಪೂರ್ಣ ಹಿಡಿತಕ್ಕೆ ಬಂದಿದ್ದು. ಅಕ್ಕಪಕ್ಕದ ಮನೆಗಳು ಸುರಕ್ಷಿತವಾಗಿವೆ ಎನ್ನಲಾಗಿದೆ. ಕೋರಮಂಗಲದಲ್ಲಿ ಬೆಂಕಿ ದುರಂತ ಬೆಂಗಳೂರಿನ ಹೋಟೆಲ್‌ಗಳಲ್ಲಿ ಸುರಕ್ಷಿತ ಕ್ರಮಗಳ ಬಗ್ಗೆ ಆಗಾಗ ಚರ್ಚೆ ಎದುರಾಗುತ್ತಿದ್ದು, ಇಂತಹ ಅಗ್ನಿ ದುರಂತಗಳು ಭಯ ಹುಟ್ಟಿಸುತ್ತಿವೆ. ಇನ್ನು ಕೆಲವು ತಿಂಗಳ ಹಿಂದೆ ನಗರದ ಕೋರಮಂಗಲ ಪ್ರದೇಶದಲ್ಲಿ ಬೆಂಕಿ ದುರಂತ ಸಂಭವಿಸಿ, ಹಲವರು ಗಾಯಗೊಂಡರು. ಈ ಘಟನೆ ಬಳಿಕ ಬಿಬಿಎಂಪಿ ಕೂಡ ಅಲರ್ಟ್ ಆಗಿ ಕ್ರಮ ಕೈಗೊಂಡಿತ್ತು. ಅದ್ರಲ್ಲೂ ಮಹಡಿ ಮೇಲಿಂದ ಒಬ್ಬ ವ್ಯಕ್ತಿ ಜಿಗಿಯುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಇಂತಹ ಘಟನೆ ಸಂಭವಿಸಿರುವುದು ಆತಂಕ ಹುಟ್ಟಿಸಿದೆ. ಆದರೆ ಈ ಘಟನೆಗೆ ಕಾರಣ ಏನು? ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

Previous Post
ಜೆಎನ್‌ಯೂನಲ್ಲಿ ಎಬಿವಿಪಿ ದಾಂಧಲೆ: ಹಲವರಿಗೆ ಗಾಯ
Next Post
ಬಿಜೆಪಿ ಕಠಿಣ ಆಯ್ಕೆ ಪ್ರಕ್ರಿಯೆ: 100 ಅಭ್ಯರ್ಥಿಗಳು ಅಂತಿಮ- ಮೂಲಗಳು

Recent News