ಬೆಂಗಳೂರು ಸೆಂಟ್ರಲ್ ಟಿಕೆಟ್ ಗೆ ಭರ್ತೋಲಮ್ ಲಾಬಿ

ಬೆಂಗಳೂರು ಸೆಂಟ್ರಲ್ ಟಿಕೆಟ್ ಗೆ ಭರ್ತೋಲಮ್ ಲಾಬಿ

ನವದೆಹಲಿ : ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಕಾಂಗ್ರೇಸ್ ನಾಯಕ ಭರ್ತೋಲಮ್ ತೀವ್ರ ಲಾಬಿ ಆರಂಭಿಸಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರನ್ನು ಭೇಟಿಯಾಗಿರುವ ಅವರು ಅಲ್ಪ ಅಂಖ್ಯಾತ ಕೋಟಾದಲ್ಲಿ ಕ್ರಿಶ್ಚಿಯರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ಮನ್ಸೂರ್ ಅಲಿ ಖಾನ್ ಹೆಸರು ಕೇಳಿ ಬಂದ ಬೆನ್ನಲೆ ಸಚಿವ ಕೆ.ಜೆ ಜಾರ್ಜ್ ಮೇಲೆ ಒತ್ತಡ ಹೇರಿರುವ ಭರ್ತೋಲಮ್, ಎಐಸಿಸಿ ಅಧ್ಯಕ್ಷೆ ಸೋನಿಯಗಾಂಧಿ ಅವರನ್ನು ಭೇಟಿಯಾಗಿ ತಮ್ಮ ಪರ ಮಾತುಕತೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಬುಧವಾರ ನಡೆದ ಸಭೆಯಲ್ಲಿ ಮನ್ಸೂರ್ ಅಲಿ ಹೆಸರು ಬಹುತೇಕ ಖಚಿತವಾಗಿದ್ದು ಈ ಬಗ್ಗೆ ಪರಿಶೀಲಿಸಲಾಗುತ್ತಿದೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಾನು ಮೂವತ್ತು ವರ್ಷದಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇನೆ, ಕ್ಷೇತ್ರದಲ್ಲೂ ಎಲ್ಲ ರೀತಿಯ ಕೆಲಸ ಮಾಡಿದ್ದೇನೆ ಶಾಸಕರ ವಿಶ್ವಾಸವನ್ನು ಗಳಿಸಿದ್ದೇನೆ ಆದರೂ ಟಿಕೆಟ್ ನೀಡುವಾಗ ಕೇವಲ ಮುಸ್ಲಿಂ ಸಮುದಾಯವನ್ನು ಪರಿಗಣಿಸಲಾಗುತ್ತಿದೆ

ಮನ್ಸೂರ್ ಅಲಿ ಖಾನ್ ಏನು ಕೆಲಸ ಮಾಡಿದ್ದಾರೆ ಹೇಳಬೇಕು ಕೆಲಸ ಮಾಡಿದವರನ್ನು ಬಿಟ್ಟು ಕೆಲಸ ಮಾಡದವರಿಗೆ ಟಿಕೆಟ್ ನೀಡುವ ಪ್ರಯತ್ನ ಕಾಂಗ್ರೆಸ್ ನಲ್ಲಿ ನಡೆಯುತ್ತಿದೆ. ಅಲ್ಪ ಸಂಖ್ಯಾತ ಎಂದರೆ ಬರೀ ಮುಸ್ಲಿಂ ಅಲ್ಲ, ಕ್ರಿಶ್ಚಿಯನ್ ಸಮುದಾಯವೂ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿದೆ, ಈ ಹಿನ್ನಲೆ ನಮ್ಮನ್ನು ಪರಿಗಣಿಸಲು ಮನವಿ ಮಾಡುತ್ತಿದ್ದೇವೆ ಆದರೆ ಈ ಬಾರಿ ಇಲ್ಲ ಮುಂದಿನ ಬಾರಿಗೆ ಟಿಕೆಟ್ ನೀಡುವುದಾಗಿ ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

Previous Post
ಟಿಕೆಟ್ ತಪ್ಪುವ ಭೀತಿ, ಕಣ್ಣಿರಿಟ್ಟ ವೀಣಾ ಕಾಶಪ್ಪನವರ್ ಜಯ ಮೃತ್ಯಂಜಯ ಸ್ವಾಮೀಜಿಯಿಂದಲೂ ಲಾಬಿ
Next Post
ಇಂದು ರಾಜ್ಯ ಕಾಂಗ್ರೇಸ್ ಎರಡನೇ ಪಟ್ಟಿ ಬಿಡುಗಡೆ 17 ಕ್ಕೆ ಗ್ರೀನ್ ಸಿಗ್ನಲ್, ಕಗ್ಗಾಂಟಾದ 4 ಕ್ಷೇತ್ರಗಳು

Recent News