ಬೆಂಬಲಿಗರ ಅಭಿಪ್ರಾಯ ಪಡೆದು‌ ಮುಂದಿನ ನಿರ್ಧಾರ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲ್ಲ ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟನೆ

ಬೆಂಬಲಿಗರ ಅಭಿಪ್ರಾಯ ಪಡೆದು‌ ಮುಂದಿನ ನಿರ್ಧಾರ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲ್ಲ ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟನೆ

ನವದೆಹಲಿ : ಕಳೆದ ಬಾರಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದನ್ನು ನನ್ನ ಬೆಂಬಲಿಗರು ನಿರ್ಧಾರ ಮಾಡಿದ್ದರು, ನಾನು ಬೆಂಬಲಿಗರ ಅಭಿಪ್ರಾಯ ಪಡೆಯದೇ ಈವರೆಗೂ ಯಾವ ನಿರ್ಧಾರವೂ ತೆಗೆದುಕೊಂಡಿಲ್ಲ ಈಗಲೂ ಬಿಜೆಪಿ ಪಕ್ಷದ ನಿರ್ಧಾರ ಪ್ರಕಟವಾದ ಬಳಿಕ ಕಾರ್ಯಕರ್ತರ ಜೊತೆಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.

ಮಂಡ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆಗೆ ಚರ್ಚಿಸಿದ್ದೇನೆ, ನಿಶ್ಚಿಂತೆಯಾಗಿ ಇರಿ ಇನ್ನು ಏನು ನಿರ್ಧಾರ ಆಗಿಲ್ಲ, ನಿಮ್ಮಂತ ನಾಯಕಿ ಪಕ್ಷಕ್ಕೆ ಬೇಕು ಎಂದಿದ್ದಾರೆ, ಸಿಇಸಿ ಮೀಟಿಂಗ್ ಬಳಿಕ ಅಂತಿಮ ನಿರ್ಧಾರ ತಿಳಿಸುತ್ತೇವೆ ಎಂದು ನಡ್ಡಾ ಹೇಳಿದ್ದಾರೆ. ನಾನು ಸ್ಪರ್ಧೆ ಮಾಡಬೇಕು ಅನ್ನೋದಕ್ಕಿಂತ, ಮಂಡ್ಯದಲ್ಲಿ ಬಿಜೆಪಿ ಸ್ಪರ್ಧೆ ಮಾಡಬೇಕು, ಸ್ಪರ್ಧೆ ಮಾಡಿದರೆ ಮಂಡ್ಯದಲ್ಲಿ ಬಿಜೆಪಿ ಬೇಸ್ ಉಳಿಯುತ್ತೆ ಎನ್ನುವುದು ನನ್ನ ಅಭಿಪ್ರಾಯ ಅದನ್ನು ತಿಳಿಸಿದ್ದೇನೆ.

ಕಳೆದ ಬಾರಿ ಪಕ್ಷೇತರರವಾಗಿ ನಿಲ್ಲಿ ಎಂದು ಅಭಿಮಾನಿಗಳು ಹೇಳಿದ್ದರು, ಮುಂದೆ ಯಾವುದೇ ನಿರ್ಧಾರ ಮಾಡುವುದಿದ್ದರೆ ಅವರನ್ನೇ ಕೇಳುತ್ತೇನೆ, ಮಂಡ್ಯದಲ್ಲಿ ಜೆಡಿಎಸ್ ಸ್ಪರ್ಧೆ ಮಾಡುತ್ತೇವೆ ಅನ್ನೋದು ಸಹಜ, ಏನೂ ಸಮಸ್ಯೆ ಆಗದೆ ಇರೋತರ ಮಾಡಬೇಕಾಗುತ್ತೆ, ಪಕ್ಷ ಏನು ಹೇಳುತ್ತೆ ಅದನ್ನು ಮಾಡುತ್ತೇನೆ, ನಾಳೆ ಮಂಡ್ಯಕ್ಕೆ ಹೋಗಿ ಬೆಂಬಲಿಗರೊಂದಿಗೆ ಮಾತನಾಡುತ್ತೇನೆ, ಸಂಧಾನ ಮಾಡುವ ಪ್ರಯತ್ನ ಇಂದು ಆಗಿಲ್ಲ ಎಂದರು.

ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡೊಕೆ ಹೇಳಿದ್ದಾರೆ, ಪ್ರಧಾನಿ ಕಚೇರಿಯಿಂದ ಅಮಿತ್ ಶಾ ಭೇಟಿ ಮಾಡೊಕೆ ಹೇಳಿದ್ದಾರೆ, ನಾಳೆಯೊಳಗೆ ಅವರ ಟೈಂ ಸಿಕ್ಕರೆ ಭೇಟಿ ಮಾಡುತ್ತೇನೆ, ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ ಊಹಾಪೋಹ, ಯಾವ ಕ್ಷೇತ್ರ ಖಾಲಿ ಇರುತ್ತೆ ಅಲ್ಲಿ ನನ್ನ ಹೆಸರು ಜೋಡಿಸ್ತಿದ್ದಾರೆ ನಾನು ಅಲ್ಲಿಂದ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

Previous Post
ಲೋಕಸಭಾ ಚುನಾವಣೆ: ತಮಿಳುನಾಡಿನ 9 ಕಡೆ ಕಾಂಗ್ರೆಸ್, 21ರಲ್ಲಿ ಡಿಎಂಕೆ ಸ್ಪರ್ಧೆ
Next Post
ಮಾಜಿ ಸಚಿವ ಸತ್ಯಂದ್ರ ಜೈನ್ ಜಾಮೀನು ಅರ್ಜಿ ವಜಾ ಕೂಡಲೇ ಜೈಲಾಧಿಕಾರಿಗಳ ಮುಂದೆ ಹಾಜರಾಗುವಂತೆ ಸುಪ್ರೀಂ ಆದೇಶ

Recent News