ಭಾರತದಲ್ಲಿ ತಂಗಲು ಬಹಳ‌ ಕಡಿಮೆ ಅವಧಿಯಲ್ಲಿ ಹಸೀನಾ ಮನವಿ ಮಾಡಿದ್ದರು ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಹೇಳಿಕೆ

ಭಾರತದಲ್ಲಿ ತಂಗಲು ಬಹಳ‌ ಕಡಿಮೆ ಅವಧಿಯಲ್ಲಿ ಹಸೀನಾ ಮನವಿ ಮಾಡಿದ್ದರು ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಹೇಳಿಕೆ

ನವದೆಹಲಿ : ಬಾಂಗ್ಲಾದೇಶದಲ್ಲಿ ಪ್ರಕ್ಷ್ಯುಬ್ದ ವಾತಾವರಣ ನಿರ್ಮಾಣ ಹಿನ್ನಲೆ ರಾಜೀನಾಮೆ ಬಳಿಕ ಭಾರತದಲ್ಲಿ ತಾತ್ಕಲಿಕವಾಗಿ ತಂಗಲು ಮಾಜಿ ಪ್ರಧಾನಿ ಪ್ರಧಾನಿ ಶೇಖ್ ಹಸೀನಾ ಭಾರತ ಸರ್ಕಾರಕ್ಕೆ ಬಹಳ‌ ಕಡಿಮೆ ಅವಧಿಯಲ್ಲಿ ಮನವಿ ಮಾಡಿದ್ದರು ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು ಬಾಂಗ್ಲಾದೇಶದ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು. ಶೇಖ್ ಹಸೀನಾ ಗಾಜಿಯಾಬಾದ್‌ನ ಹಿಂಡನ್ ಏರ್‌ಬೇಸ್‌ಗೆ ಆಗಮಿಸುವ ಮೊದಲು ನಾವು ಬಾಂಗ್ಲಾದೇಶದ ಅಧಿಕಾರಿಗಳಿಂದ ವಿಮಾನ ಲ್ಯಾಡಿಂಗ್‌ಗೆ ಅನುಮತಿಯ ಕೋರಿಕೆಯನ್ನು ಸ್ವೀಕರಿಸಿದ್ದೇವೆ ಎಂದು ಹೇಳಿದರು. ಸರ್ಕಾರವು ರಾಜತಾಂತ್ರಿಕ ಕಾರ್ಯಾಚರಣೆಗಳ ಮೂಲಕ ಬಾಂಗ್ಲಾದೇಶದಲ್ಲಿರುವ ಭಾರತೀಯ ಸಮುದಾಯದೊಂದಿಗೆ ನಿಕಟ ಮತ್ತು ನಿರಂತರ ಸಂಪರ್ಕದಲ್ಲಿದೆ ಎಂದು ಅವರು ರಾಜ್ಯಸಭೆಗೆ ತಿಳಿಸಿದರು. ನಮ್ಮ ರಾಜತಾಂತ್ರಿಕ ಉಪಸ್ಥಿತಿಗೆ ಸಂಬಂಧಿಸಿದಂತೆ, ಢಾಕಾದಲ್ಲಿನ ಹೈ ಕಮಿಷನ್ ಜೊತೆಗೆ ನಾವು ಚಿತ್ತಗಾಂಗ್, ರಾಜ್‌ಶಾಹಿ, ಖುಲ್ನಾ ಮತ್ತು ಸಿಲ್ಹೆಟ್‌ನಲ್ಲಿ ಸಹಾಯಕ ಹೈಕಮಿಷನ್‌ಗಳನ್ನು ಹೊಂದಿದ್ದೇವೆ. ಆತಿಥೇಯ ಸರ್ಕಾರವು ಈ ಸಂಸ್ಥೆಗಳಿಗೆ ಅಗತ್ಯವಾದ ಭದ್ರತಾ ರಕ್ಷಣೆಯನ್ನು ಒದಗಿಸುತ್ತದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ. ಪರಿಸ್ಥಿತಿಯು ಸ್ಥಿರವಾದ ನಂತರ ಅವರ ಸಾಮಾನ್ಯ ಕಾರ್ಯನಿರ್ವಹಣೆಯನ್ನು ನಾವು ಎದುರು ನೋಡುತ್ತೇವೆ. ಬಾಂಗ್ಲಾದೇಶದಲ್ಲಿ ಅಂದಾಜು 19,000 ಭಾರತೀಯ ಪ್ರಜೆಗಳಿದ್ದಾರೆ ಅದರಲ್ಲಿ ಸುಮಾರು 9,000 ವಿದ್ಯಾರ್ಥಿಗಳು ಇದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಜುಲೈನಲ್ಲಿ ಹಿಂದಿರುಗಿದ್ದಾರೆ. ನಾವು ಅಲ್ಪಸಂಖ್ಯಾತರ ಸ್ಥಿತಿಗತಿಗೆ ಸಂಬಂಧಿಸಿದಂತೆ ಪರಿಸ್ಥಿತಿಯನ್ನು ಸಹ ಗಮನಿಸುತ್ತಿದ್ದೇವೆ ಅವರ ರಕ್ಷಣೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಗೋಚರವಾಗಿ ಮರುಸ್ಥಾಪಿಸುವವರೆಗೆ ಸ್ವಾಭಾವಿಕವಾಗಿ ಆಳವಾಗಿ ಚಿಂತಿಸುತ್ತೇವೆ. ಈ ಸಂಕೀರ್ಣ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅಸಾಧಾರಣವಾಗಿ ಜಾಗರೂಕರಾಗಿರಲು ನಮ್ಮ ಗಡಿ ಕಾವಲು ಪಡೆಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Previous Post
ಬಾಂಗ್ಲಾ ಬಿಕ್ಕಟ್ಟು: ಸರ್ವಪಕ್ಷ ಸಭೆ ನಡೆಸಿದ ಕೇಂದ್ರ ಸರ್ಕಾರ
Next Post
ಶೇಖ್ ಹಸೀನಾ ಲಂಡನ್ ಪ್ರಯಾಣಕ್ಕೆ ಬ್ರಿಟಿಷ್ ಕಾನೂನು ತಡೆ

Recent News