ಭೂಕಂಪನಕ್ಕೆ ನಲುಗಿದ ದ್ವೀಪರಾಷ್ಟ್ರ ತೈವಾನ್‌: 7.5 ತೀವ್ರತೆಯ ಭೂಕಂಪನ, 25 ವರ್ಷಗಳಲ್ಲೇ ಶಕ್ತಿ ಶಾಲಿ ಕಂಪನ

ಭೂಕಂಪನಕ್ಕೆ ನಲುಗಿದ ದ್ವೀಪರಾಷ್ಟ್ರ ತೈವಾನ್‌: 7.5 ತೀವ್ರತೆಯ ಭೂಕಂಪನ, 25 ವರ್ಷಗಳಲ್ಲೇ ಶಕ್ತಿ ಶಾಲಿ ಕಂಪನ

ತೈವಾನದಲ್ಲಿ ಬುಧವಾರ 7.5 ತೀವ್ರತೆಯ ಭೂಕಂಪನವಾಗಿದೆ. ಇದರ ಕಂಪನವನ್ನು ನೆರೆಯ ದೇಶಗಳಾದ ಜಪಾನ್‌, ಫಿಲಿಪೈನ್ಸ್‌ನಲ್ಲೂ ಆಗಿದೆ. ತೈವಾನನ ಅನೇಕ ನಗರಗಳಲ್ಲಿ ಭೂಕಂಪನವಾಗಿದ್ದು, ಹಲವು ಕಟ್ಟಡಗಳು ಧರಾಶಾಹಿ ಆಗಿವೆ. ಕಳೆದ 25 ವರ್ಷಗಳಲ್ಲಿ ಸಂಭವಿಸಿದ ಶಕ್ತಿ ಶಾಲಿ ಭೂಕಂಪ ಇದಾಗಿದೆ ಎಂದು ತಿಳಿದು ಬಂದಿದೆ. ಬುಧವಾ ಬೆಳಗ್ಗೆ 8 ಗಂಟೆಯ ಸುಮಾರಿಗೆ ಭೂಕಂಪನ ಸಂಭವಿಸಿದೆ. ಕಂಪನದಿಂದ ಹೆಚ್ಚಾಗಿ ಹುವಾಲಿನ್‌ ಎಂಬ ನಗರಕ್ಕೆ ಹಾನಿಯಾಗಿದೆ. ಇದೇ ನಗರದಲ್ಲಿ ಕಂಪನದ ಕೇಂದ್ರ ಬಿಂದುವನ್ನು ಪತ್ತೆ ಹಚ್ಚಲಾಗಿದೆ. ಭೂಕಂಪನದ ತೀವ್ರತೆಗೆ 87 ಸಾವಿರ ಮೆಗಳ ವಿದ್ಯುತ್‌ ಸಂಪರ್ಕ ಕಡಿತವಾಗಿದೆ. ಹುವಾಲಿನ್‌ನಲ್ಲಿ 7.5 ತೀವ್ರತೆಯ ಕಂಪನವಾದರೆ, ತೈವಾನ್ ರಾಜಧಾನಿ ತೈಪೆಯಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ. ಮುಂಜಾಗರುಕತಾ ಕ್ರಮವಾಗಿ ಭೂಕಂಪನ ಪೀಡಿತ ಪ್ರದೇಶದಲ್ಲಿ ವಿದ್ಯುತ್ ಹಾಗೂ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ತೈವಾನನಲ್ಲಿ ಆದ ಭೂಕಂಪನದಿಂದ ದೇಶದ ಹಲವು ಪ್ರದೇಶಗಳಲ್ಲಿ ಭೂಕುಸಿತದ ಘಟನೆ ನಡೆದಿದೆ. 1999ರಲ್ಲಿ ಕೊನೆಯ ಬಾರಿಗೆ ಅತ್ಯಂತ ಭೀಕರ ಭೂಕಂಪ ಸಂಭವಿಸಿತ್ತು. ಈ ದಾರುಣ ಘಟನೆಯಲ್ಲಿ 2500 ಜನ ಪ್ರಾಣವನ್ನು ಕಳೆದುಕೊಂಡಿದ್ದರು. ಬುಧವಾರ ಸ್ಥಳೀಯ ಕಾಲಮಾನ ಬೆಳಗ್ಗೆ 7.48ಕ್ಕೆ 15.5 ಕಿಲೋಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆ ಆಗಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಭೂಕಂಪದ ಕೇಂದ್ರಬಿಂದುವು ದಕ್ಷಿಣ ತೈವಾನ್‌ನ ಕ್ವಾಲಿಯನ್ ನಗರದಿಂದ 18 ಕಿಲೋಮೀಟರ್ ದೂರದಲ್ಲಿದೆ. ಕ್ವಾಲಿಯನ್‌ ಈ ದೇಶದ ದೊಡ್ಡ ರಾಜ್ಯ ಹಾಗೂ ಪೂರ್ವ ಕರಾವಳಿ ಆಗಿದೆ. ತೈವಾನ್ ಮಾಧ್ಯಮವರದಿಯ ಪ್ರಕಾರ, ಭೂಕುಸಿತದಿಂದಾಗಿ ಕ್ವಾಲಿಯನ್‌ಗೆ ತೈವಾನ್ ರೈಲ್ವೆಯ ಎಲ್ಲಾ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಹುವಾಲಿನ್‌ನಲ್ಲಿ ಕಂಪನದ ಕೇಂದ್ರ ಬಿಂದು ವರದಿಯ ಪ್ರಕಾರ ಭೂಕಂಪನದ ಕೇಂದ್ರ ಬಿಂದು ಹುವಾಲಿನ್‌ ನಗರದಲ್ಲಿ ಹೆಚ್ಚಿನ ಹಾನಿ ಸಂಭವಿಸಿದ್ದು, ರಸ್ತೆಗಳು ಒಡೆದಿವೆ. ಹಲವು ಕಟ್ಟಡಗಳು ಬಿದ್ದಿದ್ದು, ಇದರ ಅಡಿ ಸಿಲುಕಿರುವ ಜನರ ಬಗ್ಗೆಯೂ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ತೈಪೆಯ್‌ ಸ್ಥಳಿಯ ಆಡಳಿತ ಇನ್ನು ಹಾನಿಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇನ್ನು ಭೂಕಮಪನದಿಂದಾಗಿ ರೈಲು ಸಂಚಾರಕ್ಕೂ ತೊಂದರೆ ಆಗಿದೆ.

ತೈವಾನ್‌ನಲ್ಲಿ ಸಂಭವಿಸಿದ ಭೂಕಂಪನದ ನಂತರ ನೆರೆಯ ಜಪಾನ್‌ ಹಾಗೂ ಫಿಲಿಫೈನ್ಸ್‌ ನಲ್ಲಿ ಸುನಾಮಿ ಅಲರ್ಟ್‌ ನೀಡಿದ್ದವು. ಜಪಾನ್‌ನ ಹವಾಮಾನ ಇಲಾಖೆಯು ಸಮುದ್ರದಲ್ಲಿ 3 ಮೀಟರ್ ಅಥವಾ ಸುಮಾರು 10 ಅಡಿ ಎತ್ತರದ ಅಲೆಗಳ ಮುನ್ಸೂಚನೆ ನೀಡಿತ್ತು. ಜಪಾನ್ ಮತ್ತು ಫಿಲಿಪೈನ್ಸ್ ಈಗ ಸುನಾಮಿ ಎಚ್ಚರಿಕೆಯನ್ನು ಹಿಂತೆಗೆದುಕೊಂಡಿವೆ.

ಸಹಾಯಕ್ಕೆ ಸಿದ್ಧ ಚೀನಾದಲ್ಲಿ ತೈವಾನ್ ವ್ಯವಹಾರಗಳನ್ನು ಮೇಲ್ವಿಚಾರಣೆ ಮಾಡುವ ಕಚೇರಿಯು ಭೂಕಂಪದಿಂದ ಉಂಟಾದ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಮತ್ತು ತೈವಾನ್‌ಗೆ ಸಹಾಯವನ್ನು ಕಳುಹಿಸಲು ಸಿದ್ಧವಾಗಿದೆ ಎಂದು ಹೇಳಿದೆ ಎಂದು ಚೀನಾದ ಮಾಧ್ಯಮಗಳ ಪ್ರಕಾರ ತಿಳಿದು ಬಂದಿದೆ.

Previous Post
ಲೋಕಸಭೆಗೂ ಮುನ್ನ ಆಪ್ ಧ್ವಂಸಗೊಳಿಸುವ ಹುನ್ನಾರ ದೆಹಲಿ ಹೈಕೋರ್ಟ್‌ನಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ಆದೇಶ ಕಾಯ್ದಿರಿಸಿದ ಕೋರ್ಟ್
Next Post
ಬಿಪಿನ್ ರಾವತ್ ನಿಧನರಾದ ನಂತರ ಪಿಎಂ ನೀಲಗಿರಿಗೆ ಭೇಟಿ ಕೊಟ್ಟಿಲ್ಲ: ರಾಜಾ

Recent News