ಭೂಕುಸಿತ ಸಂತ್ರಸ್ಥರ ಸಾಲ ಮನ್ನಾ ಮಾಡಿ – ಬ್ಯಾಂಕ್‌ಗಳಿಗೆ ಪಿಣರಾಯಿ ವಿಜಯನ್ ಮನವಿ

ಭೂಕುಸಿತ ಸಂತ್ರಸ್ಥರ ಸಾಲ ಮನ್ನಾ ಮಾಡಿ – ಬ್ಯಾಂಕ್‌ಗಳಿಗೆ ಪಿಣರಾಯಿ ವಿಜಯನ್ ಮನವಿ

ತಿರುವನಂತಪುರಂ: ವಯನಾಡಿನ ಭೂಕುಸಿತದ ಸಂತ್ರಸ್ತರು ಮತ್ತು ದುರ್ಘಟನೆಯಲ್ಲಿ ಬದುಕುಳಿದವರ ಖಾತೆಗಳಿಂದ ಸಾಲದ ಮಾಸಿಕ ಕಂತುಗಳನ್ನು ಕಡಿತಗೊಳಿಸಿದ ಬ್ಯಾಂಕ್‌ಗಳ ವಿರುದ್ಧ ಕೇರಳ ಸರ್ಕಾರ ಸೋಮವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಒತ್ತಾಯಿಸಿದೆ‌.

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್, ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಬಡ್ಡಿ ಮೊತ್ತದಲ್ಲಿ ಸಡಿಲಿಕೆ ಅಥವಾ ಮಾಸಿಕ ಕಂತುಗಳನ್ನು ಪಾವತಿಸಲು ಸಮಯವನ್ನು ವಿಸ್ತರಿಸುವುದು ಯಾವುದೇ ಪರಿಹಾರವಲ್ಲ, ಸಾಲ ಮನ್ನಾ ಮಾಡುವುದರಿಂದ ಬ್ಯಾಂಕ್‌ಗಳ ಮೇಲೆ ಅಸಹನೀಯ ಹೊರೆ ಬೀಳುವುದಿಲ್ಲ, ಹಾಗಾಗಿ ಅದನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಹೇಳಿದರು.

ಸಾಲ ಪಡೆದವರಲ್ಲಿ ಹಲವರು ಮೃತಪಟ್ಟಿದ್ದು, ಬದುಕುಳಿದವರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಆದರೆ ದುರಂತವು ಅಲ್ಲಿನ ಕೃಷಿ ಭೂಮಿಯ ಭೌಗೋಳಿಕತೆಯನ್ನು ಸಹ ಬದಲಾಯಿಸಿದೆ. ಈ ಪ್ರದೇಶಗಳಲ್ಲಿ ಯಾವುದೇ ಕೃಷಿ ಅಥವಾ ವಸಾಹತು ಸಾಧ್ಯವಿಲ್ಲ. ಈ ಭಾಗದ ಬಹುತೇಕ ರೈತರು ಸಾಲ ಮಾಡಿಕೊಂಡಿದ್ದಾರೆ, ಮನೆ ಕಟ್ಟಲು ಸಾಲ ಮಾಡಿಕೊಂಡವರು ಮನೆಯೇ ಕಳೆದುಕೊಂಡಿದ್ದಾರೆ ಈಗ ಅಲ್ಲಿಯ ಜನರು ಕಂತು ಕಟ್ಟುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದಾರೆ

Previous Post
ಭಾರತ ಪೌರತ್ವ ಪಡೆದ ಪಾಕಿಸ್ತಾನಿ ಮಹಿಳೆಯರೊಂದಿಗೆ ರಕ್ಷಾ ಬಂಧನ ಆಚರಿಸಿದ ಸಚಿವ ಪಿಯೂಷ್ ಗೋಯಲ್
Next Post
ಇಂದಿರಾ ಗಾಂಧಿಯಂತೆ ಮಮತಾರನ್ನು ಹತ್ಯೆ ಮಾಡಿ ಎಂದಿದ್ದ ವಿದ್ಯಾರ್ಥಿನಿ ಬಂಧನ

Recent News