ಮಕ್ಕಳಿಗೆ ತರಗತಿಗಳಲ್ಲಿ ಎಸಿ ವ್ಯವಸ್ಥೆ ಕಲ್ಪಿಸುವ ವೆಚ್ಚವನ್ನು ಪೋಷಕರೇ ಭರಿಸಬೇಕು – ದೆಹಲಿ ಹೈಕೋರ್ಟ್

ಮಕ್ಕಳಿಗೆ ತರಗತಿಗಳಲ್ಲಿ ಎಸಿ ವ್ಯವಸ್ಥೆ ಕಲ್ಪಿಸುವ ವೆಚ್ಚವನ್ನು ಪೋಷಕರೇ ಭರಿಸಬೇಕು – ದೆಹಲಿ ಹೈಕೋರ್ಟ್

ನವದೆಹಲಿ : ಮಕ್ಕಳಿಗೆ ಶಾಲೆಯಲ್ಲಿ ಹವಾ ನಿಯಂತ್ರಣ ವ್ಯವಸ್ಥೆ ಕಲ್ಪಿಸಲು ತಗಲುವ ವೆಚ್ಚವನ್ನು ಪೋಷಕರೇ ಭರಿಸಬೇಕಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ತರಗತಿಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆ ನೀಡಲು ಶುಲ್ಕ ವಿಧಿಸುವ ಖಾಸಗಿ ಶಾಲೆಯ ಹಕ್ಕನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ನೀಡಿದೆ.

ಮಹಾರಾಜ ಅಗ್ರಸೈನ್ ಪಬ್ಲಿಕ್ ಸ್ಕೂಲ್ ಎಸಿಗಾಗಿ ಪ್ರತಿ ವಿದ್ಯಾರ್ಥಿಗೆ 2000 ಮಾಸಿಕ ಶುಲ್ಕ ವಿಧಿಸುತ್ತಿದೆ ಇದು ಅಸಮಂಜಸವಾಗಿದೆ ಎಂದು ಅರ್ಜಿದಾರರಾದ ಮನೀಶ್ ಗೋಯೆಲ್ ಅರ್ಜಿ ಸಲ್ಲಿಸಿದ್ದರು. ಶಿಕ್ಷಣ ನಿರ್ದೇಶನಾಲಯ (ಡಿಒಇ) ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿದ್ದರು.

ತರಗತಿಗಳಲ್ಲಿ ಹವಾನಿಯಂತ್ರಣ ಸೌಲಭ್ಯಗಳನ್ನು ಒದಗಿಸುವ ಜವಾಬ್ದಾರಿಯು ಶಾಲೆಯ ಆಡಳಿತದ ಮೇಲಿದೆ ಇದಕ್ಕಾಗಿ ಶಾಲೆಯ ಸ್ವಂತ ಹಣ ಮತ್ತು ಸಂಪನ್ಮೂಲಗಳನ್ನು ಬಳಸಬೇಕು, ವಿದ್ಯಾರ್ಥಿಗಳ ಮೇಲೆ ಈ ಶುಲ್ಕವನ್ನು ವಿಧಿಸುವುದು ದೆಹಲಿ ಶಾಲಾ ಶಿಕ್ಷಣ ನಿಯಮಗಳು, 1973 ರ ನಿಯಮ 154 ಗೆ ವಿರುದ್ಧವಾಗಿದೆ ಎಂದು ಮನೀಶ್ ಗೋಯೆಲ್ ವಾದಿಸಿದರು.

ಆದರೆ ಈ ವಾದವನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ನೇತೃತ್ವದ ದ್ವಿಸದಸ್ಯ ಪೀಠ ಒಪ್ಪಲಿಲ್ಲ. ಶಾಲೆಗಳು ವಿಧಿಸುವ ಇತರ ಶುಲ್ಕಗಳಿಗೆ ಎಸಿ ಶುಲ್ಕವನ್ನು ಹೋಲಿಸಿದ ಪೀಠ, ಹವಾನಿಯಂತ್ರಣ ಸೌಲಭ್ಯವು ಶಾಲೆಗಳು ವಿಧಿಸುವ ಲ್ಯಾಬ್ ಮತ್ತು ಸ್ಮಾರ್ಟ್ ಕ್ಲಾಸ್ ಶುಲ್ಕದಂತಹ ಇತರ ಶುಲ್ಕಗಳಿಗಿಗೆ ಸಮ, ಇಂತಹ ಸೌಲಭ್ಯಗಳನ್ನು ಒದಗಿಸುವ ಆರ್ಥಿಕ ಹೊರೆಯನ್ನು ಶಾಲಾ ಆಡಳಿತದ ಮೇಲೆ ಮಾತ್ರ ಹಾಕಲಾಗುವುದಿಲ್ಲ

ಪೋಷಕರು ಶಾಲೆಯನ್ನು ಆಯ್ಕೆಮಾಡುವಾಗ ತಮ್ಮ ಮಕ್ಕಳಿಗೆ ಒದಗಿಸುವ ಸೌಲಭ್ಯಗಳು ಮತ್ತು ಸೌಲಭ್ಯಗಳ ವೆಚ್ಚದ ಬಗ್ಗೆ ಗಮನ ಹರಿಸಬೇಕು ಎಂದು ಪೀಠ ಹೇಳಿತು. ದೆಹಲಿ ಸರ್ಕಾರವು ಸಮಸ್ಯೆಯನ್ನು ಪರಿಶೀಲಿಸುತ್ತಿದೆ ಮತ್ತು ಹಲವಾರು ದೂರುಗಳ ನಂತರ ಕ್ರಮ ಕೈಗೊಂಡ ವರದಿಯನ್ನು ಕೇಳಿದೆ ಎಂದು ಡಿಒಇ ನ್ಯಾಯಾಲಯಕ್ಕೆ ತಿಳಿಸಿದರು.

Previous Post
ಪ್ರಜ್ವಲ್ ವಿಡಿಯೋ ಮೂಲಕ ಬಿಜೆಪಿ ಜೆಡಿಎಸ್ ಮುಗಿಸುವ ಹುನ್ನಾರ ಮಾಡಿದೆ – ಬಿ.ವಿ ಶ್ರೀನಿವಾಸ್ ಆರೋಪ
Next Post
ನಾಳೆ 3ನೇ ಹಂತದ ಲೋಕಸಭಾ ಚುನಾವಣೆ : 93 ಕ್ಷೇತ್ರಗಳಲ್ಲಿ ಮತದಾನ

Recent News