ಮಕ್ಕಳ ಜೊತೆಗೆ ಮೋದಿ ರಕ್ಷಾ ಬಂಧನ ಆಚರಣೆ

ಮಕ್ಕಳ ಜೊತೆಗೆ ಮೋದಿ ರಕ್ಷಾ ಬಂಧನ ಆಚರಣೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಶಾಲಾ ಮಕ್ಕಳೊಂದಿಗೆ ರಕ್ಷಾಬಂಧನ ಹಬ್ಬವನ್ನು ಆಚರಿಸಿದರು. ಮಕ್ಕಳಿಗೂ ರಾಖಿ ಕಟ್ಟಿ ಅವರೊಂದಿಗೂ ಖುಷಿಯಿಂದ ಮಾತುಕತೆ ನಡೆಸಿದರು. ಮಕ್ಕಳ ರಾಖಿಯಿಂದ ಮೋದಿಯವರ ಕೈ ರಾಕಿಯಿಂದ ತುಂಬಿತ್ತು. ಕಳೆದ ವರ್ಷವೂ ಪ್ರಧಾನಿ ಮೋದಿಯವರು ಚಿಕ್ಕ ಮಕ್ಕಳೊಂದಿಗೆ ರಕ್ಷಾಬಂಧನ ಹಬ್ಬವನ್ನು ಆಚರಿಸಿದ್ದರು.

ಪ್ರಧಾನಿ ಮೋದಿಗೆ ಬಾಲಕಿಯೊಬ್ಬಳು ವಿಶೇಷ ರಾಖಿ ಕಟ್ಟಿದ್ದಾಳೆ. ಈ ರಾಖಿಯಲ್ಲಿ ಪ್ರಧಾನಿ ಮೋದಿಯವರ ದಿವಂಗತ ತಾಯಿಯ ಚಿತ್ರವನ್ನು ಹೊಂದಿತ್ತು ಮತ್ತು ಅದರ ಮೇಲೆ ‘ತಾಯಿಯ ಹೆಸರಿನಲ್ಲಿ ಮರ’ ಎಂಬ ಸಂದೇಶವನ್ನು ಬರೆಯಲಾಗಿದೆ. ಪಿಎಂ ಮೋದಿ ಅವರು ಇತ್ತೀಚೆಗೆ ‘ತಾಯಿಯ ಹೆಸರಿನಲ್ಲಿ ಒಂದು ಮರ’ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

ಬಳಿಕ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಜನರಿಗೆ ರಕ್ಷಾಬಂಧನದ ಶುಭಾಶಯಗಳನ್ನು ನರೇಂದ್ರ ಮೋದಿ ಕೋರಿದರು. ರಕ್ಷಾ ಬಂಧನ ಸಮೃದ್ಧಿ ಮತ್ತು ಅದೃಷ್ಟವನ್ನು ತರಲಿ ಎಂದು ಹಾರೈಸಿದರು‌. ರಕ್ಷಾಬಂಧನದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ರಕ್ಷಾಬಂಧನಕ್ಕೆ ಶುಭ ಕೋರಿದ್ದಾರೆ. ನಾಡಿನ ಸಮಸ್ತ ಜನತೆಗೆ ಪವಿತ್ರ ಹಬ್ಬವಾದ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಸಹೋದರ ಸಹೋದರಿಯರ ನಡುವಿನ ಅಚಲವಾದ ಪ್ರೀತಿ ಮತ್ತು ವಾತ್ಸಲ್ಯದ ಈ ಹಬ್ಬದಂದು ಎಲ್ಲರಿಗೂ ಸಂತೋಷ ಮತ್ತು ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Previous Post
ತ್ರಿವಳಿ ತಲಾಖ್‌ ವಿವಾಹದ ಸಾಮಾಜಿಕ ವ್ಯವಸ್ಥೆಗೆ ಮಾರಕವಾಗಿದೆ ಸುಪ್ರೀಂಕೋರ್ಟ್ ಅಫಿಡೆವಿಟ್‌ನಲ್ಲಿ ಕೇಂದ್ರ ಸರ್ಕಾರ ಉಲ್ಲೇಖ
Next Post
ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ : ಕೇಂದ್ರ ಸಚಿವ ವಿ ಸೋಮಣ್ಣ

Recent News