ಮಣಿಪುರದಲ್ಲಿ 11 ಶಸ್ತ್ರಸಜ್ಜಿತರ ಬಂಧನ, ಮಹಿಳೆಯರ ಪ್ರತಿಭಟನೆ

ಮಣಿಪುರದಲ್ಲಿ 11 ಶಸ್ತ್ರಸಜ್ಜಿತರ ಬಂಧನ, ಮಹಿಳೆಯರ ಪ್ರತಿಭಟನೆ

ಮಣಿಪುರ, ಮೇ. 1: ಸೇನಾ ಗಸ್ತು ಸಿಬ್ಬಂದಿಯು ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ 11 ಶಸ್ತ್ರಸಜ್ಜಿತ ಪುರುಷರನ್ನು ಪತ್ತೆ ಮಾಡಿ ಬಂಧಿಸಿದ್ದು, ಅವರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಸ್ಥಳೀಯ ಮಹಿಳಾ ಪ್ರತಿಭಟನಾಕಾರರು ಸೈನಿಕರನ್ನು ಸುತ್ತುವರೆದು, ಪುರುಷರನ್ನು ಬಿಟ್ಟುಬಿಡುವಂತೆ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.

ಮಹಿಳಾ ಪ್ರತಿಭಟನಾಕಾರರು, ಮೀರಾ ಪೈಬಿಸ್ (ಉರಿಯುವ ಟಾರ್ಚ್ ಹಿಡಿದವರು) ಎಂದು ಕರೆಯಲ್ಪಡುವ ಸಾಂಸ್ಕೃತಿಕ ಚಳವಳಿಯ ಭಾಗವಾಗಿದ್ದು, ತಮ್ಮ ಸಮುದಾಯದ (ಮೈತೇಯಿ) ಪುರುಷರನ್ನು ಬಿಡುಗಡೆ ಮಾಡುವಂತೆ ಮತ್ತು ಶಸ್ತ್ರಾಸ್ತ್ರಗಳನ್ನು ಹಿಂದಿರುಗಿಸಲು ಸೈನ್ಯವನ್ನು ಒತ್ತಾಯಿಸಿದ್ದಾರೆ. ಪ್ರತಿಭಟನಾಕಾರರು, ಬಂಧಿತ 11 ಪುರುಷರು “ಗ್ರಾಮ ರಕ್ಷಣಾ ಸ್ವಯಂಸೇವಕರು” ಎಂದು ಹೇಳಿದ್ದು, ಅವರನ್ನು ನಿಶ್ಯಸ್ತ್ರಗೊಳಿಸುವುದರಿಂದ ಜನಾಂಗೀಯ ಉದ್ವಿಗ್ನತೆಯ ನಡುವೆ ಹತ್ತಿರದ ಬೆಟ್ಟಗಳಿಂದ ಶಸ್ತ್ರಸಜ್ಜಿತ ವ್ಯಕ್ತಿಗಳು ತಮ್ಮ ಗ್ರಾಮವನ್ನು ಆಕ್ರಮಣ ಮಾಡುವ ಅಪಾಯವನ್ನು ಎದುರಿಸುತ್ತಾರೆ ಎಂದು ಹೇಳಿದ್ದಾರೆ.

ಮಂಗಳವಾರ ನಡೆದ ಘಟನೆಯ ದೃಶ್ಯಗಳು ಸೈನಿಕರನ್ನು ಮಹಿಳೆಯರು ಸುತ್ತಲೂ ತಳ್ಳುತ್ತಿರುವುದನ್ನು ತೋರಿಸುತ್ತವೆ. ಮಹಿಳೆಯರು ಶಸ್ತ್ರಸಜ್ಜಿತ ಸೈನಿಕರ ವಾಹನದ ಮುಂದೆ ನಿಂತು, ಅವರು ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳೊಂದಿಗೆ ಪ್ರದೇಶದಿಂದ ಹೊರಹೋಗದಂತೆ ತಡೆದಿದ್ದಾರೆ. ಪ್ರತಿಭಟನಾಕಾರರು ಕೂಗಾಟ ನಡೆಸಿ, ವಾಹನವನ್ನು ಸುತ್ತುವರಿದಿದ್ದು, ಗುಂಪನ್ನು ಚದುರಿಸಲು ರಕ್ಷಣಾ ಸಿಬ್ಬಂದಿ ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸಿದ್ದಾರೆ. ಆದರೆ. ಅದು ಗುಂಲಿನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ.

‘ಎಲ್ಲೂ ಹೋಗಬೇಡ, ಇಲ್ಲೇ ನಿಲ್ಲು, ಇಲ್ಲೇ ನಿಲ್ಲು’ ಎಂದು ಹಿರಿಯ ಮಹಿಳೆಯೊಬ್ಬರು ಇತರರಿಗೆ ಹೇಳುತ್ತಿರುವುದು ಕೇಳಿಸುತ್ತದೆ. ನೀವು ಯಾಕೆ ಎಲ್ಲರಿಂದಲೂ ಬಂದೂಕು ತೆಗೆದುಕೊಳ್ಳುವುದಿಲ್ಲ, ನಮ್ಮಿಂದ ಮಾತ್ರ ಏಕೆ? ಇನ್ನೊಬ್ಬ ಮಹಿಳೆ ಸಸೈನಿಕರನ್ನು ಪ್ರಶ್ನಿಸಿದ್ದಾರೆ. ಮಣಿಪುರ ಪೊಲೀಸ್ ತಂಡವು ಕೂಡಲೇ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿತು. ನಂತರ ಸೇನೆ ಮತ್ತು ಪೊಲೀಸ್ ತಂಡವು ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದ ಅಲ್ಲಿಂದ ತೆರಳಿದೆ. ಆಗಲೂ, ಪ್ರತಿಭಟನಾಕಾರರು ಕಾರು ಹಾಗೂ ರಸ್ತೆಯನ್ನು ತಡೆದರು. ಗುಡ್ಡಗಾಡು ಪ್ರಾಬಲ್ಯದ ಕುಕಿ ಬುಡಕಟ್ಟುಗಳು ಮತ್ತು ಕಣಿವೆಯ ಪ್ರಾಬಲ್ಯ ಹೊಂದಿರುವ ಮೈತೇಯಿ ಮೇ 2023 ರಿಂದ ಭೂಮಿ, ಸಂಪನ್ಮೂಲಗಳು, ದೃಢವಾದ ಕ್ರಮ ನೀತಿಗಳು ಮತ್ತು ರಾಜಕೀಯ ಪ್ರಾತಿನಿಧ್ಯವನ್ನು ಹಂಚಿಕೊಳ್ಳುವಲ್ಲಿ ಭಿನ್ನಾಭಿಪ್ರಾಯಗಳ ಕುರಿತು ಹೋರಾಡುತ್ತಿದ್ದಾರೆ. ಮುಖ್ಯವಾಗಿ ‘ಸಾಮಾನ್ಯ’ ವರ್ಗದ ಮೈತೇಯಿಗಳು ಪರಿಶಿಷ್ಟ ಅಡಿಯಲ್ಲಿ ಸೇರಿಸಲು ಬಯಸುತ್ತಿರುವುದು ಘರ್ಷಣೆಗೆ ಕಾರಣವಾಗಿದೆ.

Previous Post
ನೀವು ಕಾನೂನಿಗಿಂತ ಮೇಲಲ್ಲ: ಇಡಿಗೆ ದೆಹಲಿ ಹೈಕೋರ್ಟ್‌ ತರಾಟೆ
Next Post
10 ವರ್ಷ ಅಧಿಕಾರದಲ್ಲಿದ್ದು ಹಿಂದೂಗಳು ಅಪಾಯದಲ್ಲಿದ್ದಾರೆ ಎನ್ನುತ್ತಿದ್ದಾರೆ ಎಂದರೆ ಅವರು ಮತ್ತೆ ಅಧಿಕಾರಕ್ಕೆ ಬರಬಾರದು: ಕೀರ್ತಿ ಆಝಾದ್

Recent News