ಮಸೀದಿಗೆ ನುಗ್ಗಿ ಧರ್ಮಗುರುವಿನ ಹತ್ಯೆ
ಅಜ್ಮೀರ್, ಏ. 29: ರಾಜಸ್ಥಾನದ ಅಜ್ಮೀರ್‌ನಲ್ಲಿ ಮಸೀದಿಯೊಳಗೆ ಬಂದು ಮೂವರು ಮುಸುಕುಧಾರಿಗಳು ಧರ್ಮಗುರುವನ್ನು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಹಮ್ಮದ್ ಮಹಿರ್ ಅವರು ಮಸೀದಿಯೊಳಗೆ ಆರು ಮಕ್ಕಳೊಂದಿಗೆ ಮಲಗಿದ್ದಾಗ ಈ ದಾಳಿ ಮಾಡಿದ್ದಾರೆ. ಮೂವರು ಮುಸುಕುಧಾರಿಗಳು ಮಸೀದಿಗೆ ನುಗ್ಗಿ ಮಕ್ಕಳನ್ನು ಬೆದರಿಸಿ, ಹೊರಗೆ ಓಡಿಸಿದ್ದಾರೆ. ಬಳಿಕ ಧರ್ಮಗುರು ಮೊಹಮ್ಮದ್ ಮಹಿರ್ ಅವರನ್ನು ಕೋಲುಗಳಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳೀಯರು ಮತ್ತು ಇತರ ಸಮುದಾಯದವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಮೊಹಮ್ಮದ್ ಮಹಿರ್ ಎರಡು ದಿನಗಳ ಹಿಂದೆಯಷ್ಟೇ ಅಜ್ಮೀರ್‌ಗೆ ಆಗಮಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಹೇಳಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.