ಮಾಜಿ ಕೇಂದ್ರ ಸಚಿವ ಎ ರಾಜಾ ಮತ್ತೊಂದು ವಿವಾದತ್ಮಾಕ ಹೇಳಿಕೆ

ತಮಿಳುನಾಡಿನ ಜನರು ಜೈ ಶ್ರೀ ರಾಮ್, ಭಾರತ್ ಮಾತಾ ಘೋಷಣೆಯನ್ನು ಸ್ವೀಕರಿಸುವುದಿಲ್ಲ ಮಾಜಿ ಕೇಂದ್ರ ಸಚಿವ ಎ ರಾಜಾ ಮತ್ತೊಂದು ವಿವಾದತ್ಮಾಕ ಹೇಳಿಕೆ

ತಿರುವಂತನಪುರಂ : ತಮಿಳುನಾಡಿನ ಜನರು ಜೈ ಶ್ರೀ ರಾಮ್ ಮತ್ತು ಭಾರತ ಮಾತಾ ಘೋಷಣೆಯನ್ನು ಸ್ವೀಕರಿಸುವುದಿಲ್ಲ, ನಾವು ರಾಮಯಣವನ್ನು ಒಪ್ಪುವುದಿಲ್ಲ ಎಂದು ಡಿಎಂಕೆ ಸಂಸದ ಎ ರಾಜಾ ಅವರು ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಸನತಾನ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದ ಎ. ರಾಜಾ ಈಗ ಮತ್ತೊಮ್ಮೆ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ.

ಸಿಎಂ ಎಂ.ಕೆ ಸ್ಟಾಲಿನ್ ಜನ್ಮದಿನದ ಹಿನ್ನಲೆ ಮಾರ್ಚ್ 3 ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಒಂದು ರಾಷ್ಟ್ರದ ಕಲ್ಪನೆಯನ್ನು ಪ್ರಶ್ನಿಸಿದರು. ಜೈ ಶ್ರೀ ರಾಮ್ ಮತ್ತು ಭಾರತ್ ಮಾತೆಯನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ, ತಮಿಳುನಾಡು ಒಪ್ಪುವುದಿಲ್ಲ ನಾವು ರಾಮನ ಶತ್ರುಗಳು ಎಂದು ಹೊಸ ವಿವಾದದ ಕಿಡಿ ಹಚ್ಚಿದ್ದಾರೆ.

ಮುಂದುವರಿದ ಭಾಷಣದಲ್ಲಿ ನನಗೆ ರಾಮಾಯಣ ಮತ್ತು ಭಗವಾನ್ ರಾಮನ ಮೇಲೆ ನಂಬಿಕೆ ಇಲ್ಲ. ರಾಮಾಯಣದ ಹೆಸರಿನಲ್ಲಿ ನಾಲ್ವರು ಸಹೋದರರು, ಒಬ್ಬ ಕುರವರು ಸಹೋದರ, ಒಬ್ಬ ಬೇಟೆಗಾರ ಸಹೋದರ, ಮತ್ತೊಬ್ಬ ಸಹೋದರ ಕೋತಿ, ನಾವು ರಾಮನ ಶತ್ರುಗಳು, ಜೈರಾಮ್ ಛೀ ಎಂದು ಕಟುವಾಗಿ ಟೀಕಿಸಿದ್ದರು. ಇದೇ ವೇಳೆ ಭಾರತವು ಒಂದು ರಾಷ್ಟ್ರವಲ್ಲ ಆದರೆ ಒಂದು ಉಪಖಂಡವಾಗಿದೆ ಎಂದು ಹೇಳಿದರು.

ಗೌತಮ್ ಅದಾನಿ ಶ್ರೀಸಾಮಾನ್ಯರನ್ನು ಲೂಟಿ ಮಾಡಲು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಜನಾಂಗೀಯ ಗಲಭೆ ಪೀಡಿತ ಮಣಿಪುರಕ್ಕೆ ಮೋದಿ ಭೇಟಿ ನೀಡಲಿಲ್ಲ, ಭ್ರಷ್ಟಾಚಾರದ ಆರೋಪಗಳ ಬಗ್ಗೆ ಚರ್ಚಿಸಲು ಮುಕ್ತವಾಗಿ ಬರುವಂತೆ ಸವಾಲು ಹಾಕಿದರು.

ಎ ರಾಜಾ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಮಾಧ್ಯಮ ಉಸ್ತುವಾರಿ ಅಮಿತ್ ಮಾಳವಿಯಾ, ಡಿಎಂಕೆ ಮೊದಲು ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿತು ಈಗ ಭಾರತ ಮತ್ತು ಪ್ರಧಾನಿ ಮೋದಿಯ ಕಲ್ಪನೆಯನ್ನು ಗುರಿಯಾಗಿಸಿದೆ. ಭಗವಾನ್ ರಾಮ್ ಅವರನ್ನು ತೆಗಳುತ್ತಾನೆ, ಮಣಿಪುರಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಾನೆ, ಒಂದು ರಾಷ್ಟ್ರವಾಗಿ ಭಾರತದ ಕಲ್ಪನೆಯನ್ನು ಪ್ರಶ್ನಿಸುತ್ತಾನೆ. ಕಾಂಗ್ರೆಸ್ ಮತ್ತು ಇತರ INDI ಒಕ್ಕೂಟದ ಪಾಲುದಾರರು ಶಾಂತವಾಗಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Previous Post
ಹೈಕೋರ್ಟ್‍ನ ನ್ಯಾಯಮೂರ್ತಿ ಹುದ್ದೆಗೆ ರಾಜೀನಾಮೆ ಬಿಜೆಪಿ ಸೇರ್ಪಡೆಯಾಗಲಿರುವ ನ್ಯಾ.ಅಭಿಜಿತ್ ಗಂಗೋಪಾಧ್ಯಾಯ
Next Post
ರಾಯಬರೇಲಿಯಲ್ಲಿ ಪ್ರಿಯಾಂಕಾ ಗಾಂಧಿ ಬೆಂಬಲಿಸಿ ಪೋಸ್ಟರ್‌ ಚಳವಳಿ

Recent News