ಮಾರ್ಚ್ 22ರ ಬಳಿಕ ಬಿಜೆಪಿ ಅಂತಿಮ ಪಟ್ಟಿ ಐದು ಕ್ಷೇತ್ರದಲ್ಲಿ ಎರಡು ಕಗ್ಗಂಟು, ಅನಂತ್ ಕುಮಾರ್ ಹೆಗೆಡೆಗೆ ಟಿಕೆಟ್ ಡೌಟು

ಮಾರ್ಚ್ 22ರ ಬಳಿಕ ಬಿಜೆಪಿ ಅಂತಿಮ ಪಟ್ಟಿ ಐದು ಕ್ಷೇತ್ರದಲ್ಲಿ ಎರಡು ಕಗ್ಗಂಟು, ಅನಂತ್ ಕುಮಾರ್ ಹೆಗೆಡೆಗೆ ಟಿಕೆಟ್ ಡೌಟು

ನವದೆಹಲಿ : ಬಿಜೆಪಿ ಜೆಡಿಎಸ್ ಮೈತ್ರಿಯ ಭಾಗವಾಗಿ ಮಂಡ್ಯ ಹಾಸನದ ಜೊತೆಗೆ ಕೋಲಾರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಮಂಗಳವಾರ ತಡರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ನಾಯಕರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ‌.

ಬಾಕಿ ಉಳಿದು ಐದು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಹೈಕಮಾಂಡ್ ನಾಯಕರು ರಾಜ್ಯ ನಾಯಕರ ಜೊತೆಗೆ ಸಭೆ ನಡೆಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಸಂಘಟನ ಕಾರ್ಯದರ್ಶಿ ರಾಜೇಶ್ ಭಾಗಿಯಾಗಿದ್ದರು.

ಉತ್ತರ ಕನ್ನಡ, ಬೆಳಗಾವಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ರಾಯಚೂರು ಕ್ಷೇತ್ರಗಳಿಗೆ ಟಿಕೆಟ್ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಬೆಳಗಾವಿ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಗೆ ಟಿಕೆಟ್ ನೀಡುವ ಬಗ್ಗೆ ಅಂತಿಮ ಚರ್ಚೆಯಾಗಿದೆ. ಚಿಕ್ಕಬಳ್ಳಾಪುರಕ್ಕೆ ಅಲೋಕ್ ವಿಶ್ವನಾಥ್ ಮತ್ತು ಡಾ.ಕೆ ಸುಧಾಕರ್ ಬಗ್ಗೆ ಚರ್ಚೆಯಾಗಿದೆ. ಉತ್ತರ ಕನ್ನಡಕ್ಕೆ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆಯನ್ನು ಬದಲಿಸಿ ವಿಶ್ವೇಶ್ವರ್ ಹೆಗೆಡೆ ಕಾಗೇರಿ, ಚಕ್ರವರ್ತಿ ಸೂಲಿಬೆಲೆ ಸೇರಿ ಇತರೆ ಹೆಸರುಗಳ ಬಗ್ಗೆ ಚರ್ಚೆಯಾಗಿದೆ.

ಚಿತ್ರದುರ್ಗ ಮತ್ತು ರಾಯಚೂರು ಮೀಸಲು ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಮತ್ತೆ ಮುಂದೂಡಿಕೆಯಾಗಿದೆ. ಚಿತ್ರದುರ್ಗದಲ್ಲಿ ಸಚಿವ ನಾರಯಣಸ್ವಾಮಿ ಸ್ಪರ್ಧೆಗೆ ನಿರಾಕರಿಸಿದರು, ಈಗ ಅವರು ಸ್ಪರ್ಧೆಗೆ ಬಯಸಿದ್ದು ಆದರೆ ಸ್ಥಳೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಇನ್ನು ರಾಯಚೂರಿನಲ್ಲೂ ಬಿ.ವಿ ನಾಯಕ್ ಮತ್ತು ಹಾಲಿ ಸಂಸದ ರಾಜ ಅಮರೇಷ್ ನಾಯಕ್ ನಡುವೆ ಪೈಪೊಟಿ ಏರ್ಪಟ್ಟಿದೆ. ಈ ಹಿನ್ನಲೆ ಮತ್ತೊಮ್ಮೆ ಎರಡು ಕ್ಷೇತ್ರಗಳಿಂದ ಸರ್ವೆ ವರದಿ ತರಿಸಿಕೊಳ್ಳಲು ನಿರ್ಧರಿಸಿದೆ. ಮಾರ್ಚ್ 22 ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಅಂತಿಮ ತಿರ್ಮಾನವಾಗಲಿದೆ.

ಸಭೆ ಬಳಿಕ ಮಾತನಾಡಿದ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ, ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ನಿನ್ನೆ ಸಭೆ ನಡೆದಿದೆ, 30 ನಿಮಿಷಗಳ ಕಾಲ ಬಾಕಿ ಉಳಿದಿರುವ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗಿದೆ ಎಲ್ಲವೂ ಕೂಡ ಒಂದು ಹಂತಕ್ಕೆ ಬಂದಿದೆ, ಅಂತಿಮವಾಗಿ 22ಕ್ಕೆ ಮೋದಿ ನೇತೃತ್ವದಲ್ಲಿ ಸಭೆ ನಡೆಯುತ್ತೆ ಆ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿ ಘೋಷಣೆಯಾಗಲಿದೆ ಎಂದರು.

ಬಿಜೆಪಿ ಆತಂಕರಿಕ ಅಸಮಧಾನದ ಬಗ್ಗೆ ಮಾತನಾಡಿದ ಅವರು, ಯಾವುದೇ ಕ್ಷೇತ್ರದಲ್ಲಿ ಒಮ್ಮತದ ನಿರ್ಧಾರ ಆಗೋದಿಲ್ಲ, ಆಕಾಂಕ್ಷಿಗಳ ಪಟ್ಟಿ ಬಹಳ ದೊಡ್ಡದಿದೆ, ನಿನ್ನೆ ಸಭೆಯಲ್ಲಿ ಆಗಿರುವ ಎಲ್ಲಾ ವಿಚಾರ ಬಹಿರಂಗಪಡಿಸೋಕೆ ಆಗೋಲ್ಲ, ಏನೇ ಚರ್ಚೆ ಆದರೂ ಸಹ ಪ್ರಧಾನಿ ನೇತೃತ್ವದ ಸಭೆಯಲ್ಲಿ ಎಲ್ಲವೂ ಫೈನಲ್ ಆಗುತ್ತೆ, ಈಗಾಗಲೇ ಘೋಷಣೆ ಆಗಿರುವ ಅಭ್ಯರ್ಥಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ, ಈಶ್ವರಪ್ಪ ಹೇಳಿಕೆ ನಾನು ಪ್ರತಿಕ್ರಿಯೆ ನೀಡೋಲ್ಲ, ನನಗೆ ಒಂದು ಅವಧಿಗೆ ನನ್ನನ್ನ ನೇಮಕ ಮಾಡಿದ್ದಾರೆ ಅಂತ ಭಾವಿಸುತ್ತೇನೆ ನಿನ್ನೆ ಬಂಡಾಯದ ಬಗ್ಗೆ ಯಾವುದೇ ಚರ್ಚೆಗೆ ಆಗಿಲ್ಲ ಎಂದರು.

ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಕೇಂದ್ರದ ನಾಯಕರು ಬಾಕಿ ಕ್ಷೇತ್ರಗಳ ಬಗ್ಗೆ ಚರ್ಚಿಸಲು ಕರೆದಿದ್ದರು, ಬಾಕಿ ಸೀಟು ಹಂಚಿಕೆ ಬಗ್ಗೆ ಚರ್ಚೆಯಾಗಿದೆ 80% ಸ್ಥಾನ ಘೋಷಿಸಿದೆ, ಒಂದೇರಡು ದಿನದಲ್ಲಿ ಉಳಿದ ಅಭ್ಯರ್ಥಿ ಘೋಷಣೆ ಮಾಡಲಾಗುವುದು. ಮಾಧುಸ್ವಾಮಿ ಜೊತೆಗೆ ಮೂರು ಗಂಟೆ ಚರ್ಚೆ ಮಾಡಿದ್ದೇನೆ ಅವರು ಟೈಂ ತಗೊಂಡಿದ್ದಾರೆ, ಬಿಎಸ್ ಯಡಿಯೂರಪ್ಪ ಜೊತೆಗೆ ಮಾತನಾಡಿದರೆ ಸರಿಯಾಗಬಹುದು.

ಬಿ.ಎಸ್ ಯಡಿಯೂರಪ್ಪ ಮತ್ತು ಕೆ.ಎಸ್ ಈಶ್ವರಪ್ಪ ನಡುವೆ ನಡೆದ ಮಾತುಕತೆ ಬಗ್ಗೆ ಗೊತ್ತಿಲ್ಲ, ಈಗ ಅವರು ಮಾತುಕತೆ ಮೂಲಕ ಸಮಸ್ಯೆ ಸರಿ ಮಾಡಿಕೊಳ್ಳಲಿದ್ದಾರೆ ಅವರು ನಮ್ಮ ಹಳೆ ಕಾರ್ಯಕರ್ತರು, ಬೇರೆ ನಿರ್ಧಾರ ತಗೊಳ್ಳಲ್ಲ. ಸದಾನಂದ ಗೌಡರನ್ನು ಭೇಟಿಯಾಗಿದ್ದೇನೆ, ಅವರು ದುಡುಕಿನ ನಿರ್ಧಾರ ತಗೊಳ್ಳಲ್ಲ, ಟಿಕೆಟ್ ವಿಶ್ವಾಸದಲ್ಲಿದ್ದವರು ಕಾದು ನೋಡೊಣ ಅವಕಾಶ ಇದೆ, ಕೇಂದ್ರ ನಾಯಕರು ತಿರ್ಮಾನ ಮಾಡುತ್ತಾರೆ ಎಂದರು.

Previous Post
4 ವರ್ಷದಿಂದ ಹಣ ನೀಡದ ಯೋಗಿ ಸರ್ಕಾರ: ಹೈಕೋರ್ಟ್‌ ಮೊರೆ ಹೋದ ದೇವಾಲಯಗಳು
Next Post
ಟೈಂ ಪಾಸ್ ಮಾಡುವುದು ಕಷ್ಟ ಅಂತಾ ಲೋಕಸಭೆಗೆ ಸ್ಪರ್ಧೆ ಡಾ.ಕೆ ಸುಧಾಕರ್ ವಿರುದ್ಧ ಎಸ್‌.ಅರ್ ವಿಶ್ವನಾಥ್ ಆರೋಪ

Recent News