ಮೂರನೇ ಹಂತದ ಚುನಾವಣೆಗೆ ಸಿದ್ಧತೆ: ಮೇ 7ರಂದು ಮತದಾನ

ಮೂರನೇ ಹಂತದ ಚುನಾವಣೆಗೆ ಸಿದ್ಧತೆ: ಮೇ 7ರಂದು ಮತದಾನ

ಭಾರತದಲ್ಲಿ ಈಗಾಗಲೇ ಎರಡು ಹಂತದ ಮತದಾನ ಮುಕ್ತಾಯಗೊಂಡಿದೆ. ಈಗ ಮೂರನೇ ಹಂತದ ಚುನಾವಣೆಗೆ ಸಿದ್ಧತೆಗಳು ನಡೆದಿವೆ. ಕರ್ನಾಟಕದಲ್ಲೂ ಈಗಾಗಲೇ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಉಳಿದ 14 ಲೋಕಸಭಾ ಕ್ಷೇತ್ರದ ಚುನಾವಣೆಗಳು ಮೇ 7 ರಂದು ನಡೆಯಲಿದೆ. ದೇಶದ 12 ರಾಜ್ಯಗಳ 94 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರಂದು ನಡೆಯಲಿದೆ. ಆಸ್ಸಾಂ, ಬಿಹಾರ, ಚತ್ತೀಸಗಢ್, ದಾದರ ಹಾಗೂ ನಗರ, ಹವೇಲಿ ಮತ್ತು ದಮನ್, ದಿಯು, ಗೋವಾ, ಗುಜರಾತ್, ಜಮ್ಮು, ಕಾಶ್ಮೀರ್, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ವೆಸ್ಟ್‌ ಬೆಂಗಾಲ್‌ನಲ್ಲಿ ಈ ಚುನಾವಣೆಗಳು ನಡೆಯಲಿವೆ.

ಭಾರತದಲ್ಲಿ ಚುನಾವಣಾ ಆಯೋಗ ಏಳು ಹಂತದಲ್ಲಿ ನಡೆಸಲು ನಿರ್ಧರಿಸಿತು. ಏಪ್ರಿಲ್ 19, ಏಪ್ರಿಲ್ 26, ಮೇ, ಮೇ 13, ಮೇ 20, ಮೇ 25, ಜೂನ್‌ 1 ರಂದು ಮತದಾನ ನಡೆಯಲಿವೆ. ಅಲ್ಲದೆ ಚುನಾವಣಾ ಫಲಿತಾಂಶ ಜೂನ್‌ 4 ರಂದು ನಡೆಯಲಿವೆ. ಕರ್ನಾಟಕದ ಎಷ್ಟು ಜಿಲ್ಲೆಗಳಲ್ಲಿ ಮತದಾನ? ಈಗಾಗಲೇ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆಯಲಿದೆ. ಇನ್ನು 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯ ಬೇಕಿದೆ. ಮೇ 7ರಂದು ಬಾಗಲೋಕಟ, ಬೆಳಗಾವಂ, ಬಳ್ಳಾರಿ, ಬೀದರ್, ವಿಜಾಪುರ, ಚಿಕ್ಕೋಡಿ, ದಾವಣಗೇರಿ, ಧಾರವಾಡ, ಕಲ್ಬುರ್ಗಿ, ಹಾವೇರಿ, ಕೊಪ್ಪಳ, ರಾಯಚೂರು, ಶಿವಮೊಗ್ಗ, ಹಾಗೂ ಉತ್ತರ ಕನ್ನಡದಲ್ಲಿ ಚುನಾವಣೆಗಳು ನಡೆಯಲಿವೆ.

ಎರಡನೇ ಹಂತದಲ್ಲಿ 68.49% ಮತದಾನ ಶುಕ್ರವಾರ (ಏಪ್ರಿಲ್ 26) ನಡೆದ 18ನೇ ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 88 ಸ್ಥಾನಗಳಿಗೆ 68.49% ಮತದಾನವಾಗಿದೆ. ತ್ರಿಪುರಾದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಸುಮಾರು 79.66%. ಮಹಾರಾಷ್ಟ್ರದಲ್ಲಿ 59.63%, ಬಿಹಾರದಲ್ಲಿ 57.81% ಮತ್ತು ಉತ್ತರ ಪ್ರದೇಶದಲ್ಲಿ 54.85% ಮತದಾನವಾಗಿದೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ, ಈ ಸ್ಥಾನಗಳಲ್ಲಿ 70.05% ಮತದಾನವಾಗಿತ್ತು.

ಎರಡನೇ ಹಂತದ ಮತದಾನದೊಂದಿಗೆ 11 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ಲೋಕಸಭಾ ಸ್ಥಾನಗಳಿಗೆ ಮತದಾನ ಪೂರ್ಣಗೊಂಡಿದೆ. ರಾಜಸ್ಥಾನ, ತಮಿಳುನಾಡು, ಕೇರಳ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ ಸೇರಿದಂತೆ ರಾಜ್ಯಗಳಲ್ಲಿ ಮತದಾನ ಪೂರ್ಣಗೊಂಡಿದೆ. ಇದಲ್ಲದೆ ಮೂರು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ನಿಕೋಬಾರ್, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿಯೂ ಮತದಾನ ಪೂರ್ಣಗೊಂಡಿದೆ. ಏನು ಹೇಳುತ್ತೇ ಹಿಂದಿನ ಕಥೆ? 2019 ರಲ್ಲಿ, ನಡೆದ ಈ ಚುನಾವಣೆಗಳಲ್ಲಿ ಬಿಜೆಪಿ ಗರಿಷ್ಠ 50 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು NDA ಮಿತ್ರಪಕ್ಷಗಳು 8 ಸ್ಥಾನಗಳನ್ನು ಗೆದ್ದವು. ಕಾಂಗ್ರೆಸ್ 21 ಸ್ಥಾನಗಳನ್ನು ಗೆದ್ದಿತ್ತು. ಇತರರು 9 ಸ್ಥಾನ ಪಡೆದಿದ್ದರು.

ಏಪ್ರಿಲ್ 19 ರಂದು ಮೊದಲ ಹಂತದಲ್ಲಿ 102 ಸ್ಥಾನಗಳಿಗೆ ಮತದಾನ ನಡೆದಿತ್ತು. ಏಪ್ರಿಲ್ 26 ರಂದು ಎರಡನೇ ಹಂತದ ಮತದಾನದ ನಂತರ, ಐದನೇ ಹಂತದ ಮತದಾನ ಜೂನ್ 1 ರಂದು ಕೊನೆಗೊಳ್ಳಲಿದೆ. ಜೂನ್ 4 ರಂದು ಫಲಿತಾಂಶ ಬರಲಿದೆ.

Previous Post
ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀ ರಾಮ್’ ಬರೆದ ವಿದ್ಯಾರ್ಥಿಗಳು, ಪಾಸು ಮಾಡಿದ ಪ್ರೊಫೆಸರ್!
Next Post
ಇಯರ್‌ಫೋನ್‌ ಹಾಕೊಂಡು ಸ್ಕೂಟಿ ಚಲಾಯಿಸುವಾಗಲೇ ಮೊಬೈಲ್‌ ಸ್ಫೋಟವಾಗಿ ಮಹಿಳೆ ಸಾವು

Recent News