ಮೋದಿ ಕ್ಯಾಬಿನೆಟ್‌ನಲ್ಲಿ ಸ್ಮೃತಿ ಇರಾನಿ, ರಾಜೀವ್ ಚಂದ್ರಶೇಖರ್, ಅಶ್ವಿನಿ ಚೌಬೆ ಸೇರಿದಂತೆ 20 ಅನುಭವಿ ಮುಖಗಳಿಗೆ ಗೇಟ್‌ ಪಾಸ್‌!

ಮೋದಿ ಕ್ಯಾಬಿನೆಟ್‌ನಲ್ಲಿ ಸ್ಮೃತಿ ಇರಾನಿ, ರಾಜೀವ್ ಚಂದ್ರಶೇಖರ್, ಅಶ್ವಿನಿ ಚೌಬೆ ಸೇರಿದಂತೆ 20 ಅನುಭವಿ ಮುಖಗಳಿಗೆ ಗೇಟ್‌ ಪಾಸ್‌!

ನವದೆಹಲಿ : ಭಾನುವಾರ ಸಂಜೆ ೭.೨೦ ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ನರೇಂದ್ರ ದಾಮೋದರ​ದಾಸ್ ಮೋದಿ ಅವರು ಭಾನುವಾರ 3ನೇ ಅವಧಿಗೆ ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಕೇಂದ್ರ ಸಚಿವರಾಗಿ ರಾಜನಾಥ್​ ಸಿಂಗ್​ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಕ್ರಮವಾಗಿ ಅಮಿತ್​ ಶಾ, ಜೆಪಿ ನಡ್ಡಾ ಪ್ರಮಾಣವಚನ ಸ್ವೀಕರಿಸಿದರು. ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ಎಚ್‌.ಡಿ ಕುಮಾರಸ್ವಾಮಿ ಅವರಿಗೆ ರಾಷ್ಟ್ರಪತಿ ಪ್ರತಿಜ್ಞಾವಿಧಿ ಬೋಧಿಸಿದರು. ಮೊದಲ ಮಹಿಳಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್​ ಪ್ರಮಾಣವಚನ ಸ್ವೀಕರಿಸಿದರು. ಎಲ್ಲಾ ನಾಯಕರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು. ಏತನ್ಮಧ್ಯೆ, ದೆಹಲಿ ಅಂಗಳದಲ್ಲಿ ರಾಜಕೀಯ ಗೊಂದಲವು ತೀವ್ರಗೊಂಡಿದೆ. ಕ್ಯಾಬಿನೆಟ್‌ ಸೇರಲು ಫೋನ್ ಕರೆ ಬರದಿರುವ ಹಿರಿಯ ಸಂಸದರ ನಡೆ ಸಂಶಯ ಮೂಡಿಸಿದೆ.

ಮೋದಿ ಸರ್ಕಾರ 2.0 ನಲ್ಲಿ ಬಹಳ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದ ಬಿಜೆಪಿಯ 20 ಅನುಭವಿಗಳಿಗೆ ಗೇಟ್‌ಪಾಸ್‌ ನೀಡಲಾಗಿದೆ. ೨೦ ಜನರ ಪೈಕಿ ಚುನಾವಣೆಯಲ್ಲಿ ಗೆಲ್ಲಲಾಗದ ಹಲವು ನಾಯಕರ ಹೆಸರುಗಳು ಇವೆ.

ಈ 20 ನಾಯಕರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ

1. ಅಜಯ್ ಭಟ್ (ಗೆಲುವು)

2. ಸಾಧ್ವಿ ನಿರಂಜನ್ ಜ್ಯೋತಿ (ಸೋಲು)

3. ಮೀನಾಕ್ಷಿ ಲೇಖಿ (ಟಿಕೆಟ್ ವಂಚಿತ ನಾಯಕಿ)

4. ರಾಜ್‌ಕುಮಾರ್ ರಂಜನ್ ಸಿಂಗ್

5. ಜನರಲ್ ವಿಕೆ ಸಿಂಗ್ (ಟಿಕೆಟ್ ವಂಚಿತ ನಾಯಕ)

6. ಆರ್ ಕೆ ಸಿಂಗ್ (ಸೋಲು)

7. ಅರ್ಜುನ್ ಮುಂಡಾ (ಸೋಲು)

8. ಸ್ಮೃತಿ ಇರಾನಿ (ಸೋಲು)

9. ಅನುರಾಗ್ ಠಾಕೂರ್ (ಗೆಲುವು)

10. ರಾಜೀವ್ ಚಂದ್ರಶೇಖರ್ (ಸೋಲು)

11. ನಿಶಿತ್ ಪ್ರಮಾಣಿಕ್ (ಸೋಲು)

12. ಅಜಯ್ ಮಿಶ್ರಾ ತೇನಿ (ಸೋಲು)

13. ಸುಭಾಷ್ ಸರ್ಕಾರ್ (ಸೋಲು)

14. ಜಾನ್ ಬಾರ್ಲಾ

15. ಭಾರತಿ ಪನ್ವಾರ್ (ಸೋಲು)

16. ಅಶ್ವಿನಿ ಚೌಬೆ (ಟಿಕೆಟ್ ವಂಚಿತ ನಾಯಕಿ)

17. ರಾವ್ಸಾಹೇಬ್ ದಾನ್ವೆ (ಸೋಲು)

18. ಕಪಿಲ್ ಪಾಟೀಲ್ (ಸೋಲು)

19. ನಾರಾಯಣ ರಾಣೆ ( ಗೆಲುವು)

20. ಭಾಗವತ್ ಕರಡ್

Previous Post
‘ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸಿದ್ದೇವೆ’ ! – ಪಾಕಿಸ್ತಾನ
Next Post
ರಾಯ್ ಬರೇಲಿ ಉಳಿಸಿಕೊಳ್ತಾರ ರಾಹುಲ್ ಗಾಂಧಿ

Recent News