ಮೋದಿ ಪ್ರಪಂಚದಿಂದ ಸತ್ಯವನ್ನು ಹೊರಹಾಕಬಹುದು ವಾಸ್ತವದಲ್ಲಿ ಅಲ್ಲ – ರಾಗಾ ಆಕ್ರೋಶ

ಮೋದಿ ಪ್ರಪಂಚದಿಂದ ಸತ್ಯವನ್ನು ಹೊರಹಾಕಬಹುದು ವಾಸ್ತವದಲ್ಲಿ ಅಲ್ಲ – ರಾಗಾ ಆಕ್ರೋಶ

ನವದೆಹಲಿ : ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಭಾಷಣ ಪ್ರಮುಖ ಅಂಶಗಳನ್ನು ಕಡತದಿಂದ ತೆಗೆದು ಹಾಕಿದ ಹಿನ್ನಲೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ‌. ಮೋದಿಯವರ ಪ್ರಪಂಚದಿಂದ ಸತ್ಯವನ್ನು ಹೊರಹಾಕಬಹುದು ಆದರೆ ವಾಸ್ತವದಲ್ಲಿ ಅಲ್ಲ ಎಂದು ಗುಡುಗಿದ್ದಾರೆ.

ಈ ಬಗ್ಗೆ ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದಿರುವ ರಾಹುಲ್ ಗಾಂಧಿ, ನನ್ನ ಭಾಷಣದ ಪ್ರಮುಖ ಅಂಶಗಳನ್ನು ತೆಗೆದು ಹಾಕಲಾಗಿದೆ ಎಂದು ತಿಳಿದು ಆಘಾತವಾಗಿದೆ. ನನ್ನ ಭಾಷಣದ ಮೇಲೆ ವ್ಯಕ್ತವಾದ ಟೀಕೆಗಳ ಹಿನ್ನಲೆಯೇ ನಾನು ಈ ಪತ್ರ ಬರೆಯುತ್ತಿದ್ದೇನೆ, ಸದನದ ನಡಾವಳಿಗಳ ಪ್ರಕಾರ ಕೆಲವು ಟೀಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಅಧಿಕಾರ ಅಧ್ಯಕ್ಷರಿಗೆ ಮಾತ್ರ ಇದೆ. ಇವುಗಳ ಸ್ವರೂಪವನ್ನು ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ನಡವಳಿಕೆ, ನಿಯಮ 380 ರಲ್ಲಿ ನಿರ್ದಿಷ್ಟಪಡಿಸಲಾಗಿದೆ‌

ಭಾರತದ ಸಂವಿಧಾನದ 105(1)ನೇ ಪರಿಚ್ಛೇದದಲ್ಲಿ ಪ್ರತಿಪಾದಿಸಿರುವಂತೆ ನಾನು ಸದನದಲ್ಲಿ ಜನರಿಗೆ ತಿಳಿಸಲು ಬಯಸಿದ್ದು ನೆಲದ ವಾಸ್ತವತೆ ಹಾಗೂ ವಾಸ್ತವಿಕ ನಿಲುವು ಮಾತ್ರ. ಜನರ ಸಾಮೂಹಿಕ ಧ್ವನಿಯನ್ನು ವ್ಯಕ್ತಪಡಿಸುವುದು ಸದನದ ಪ್ರತಿಯೊಬ್ಬ ಸದಸ್ಯರ ವಾಕ್ ಸ್ವಾತಂತ್ರ್ಯ, ಈ ಸ್ವತಂತ್ರವನ್ನು ಎಲ್ಲಾ ಜನಪ್ರತಿನಿಧಿಗಳು ಹೊಂದಿದ್ದಾರೆ. ಸದನದಲ್ಲಿ ಜನರ ಸಮಸ್ಯೆಗಳನ್ನ ಪ್ರತಿಪಾದಿಸುವುದು ಪ್ರತಿಯೊಬ್ಬ ಸದಸ್ಯರ ಹಕ್ಕು ಆ ಹಕ್ಕನ್ನು ನಾನು ನಿನ್ನೆ ಚಲಾಯಿಸಿದ್ದೇನೆ ನನ್ನ ಹೇಳಿಕೆಗಳನ್ನು ತೆಗೆದುಹಾಕುವುದು ಸಂಸದೀಯ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ರಾಹುಲ್ ಗಾಂಧಿ, ಮೋದಿ ಅವರ ಜಗತ್ತಿನಲ್ಲಿ ಸತ್ಯವನ್ನು ಹೊರಹಾಕಬಹುದು ಆದರೆ ವಾಸ್ತವದಿಂದ ಸತ್ಯವನ್ನು ಹೊರಹಾಕಲು ಸಾಧ್ಯವಿಲ್ಲ. ನಾನು ಹೇಳಬೇಕಾಗಿರುವುದನ್ನು ಹೇಳಿದ್ದೇನೆ ಅದು ಕೂಡಾ ಸತ್ಯ‌ ಅವರು ಎಷ್ಟು ಬೇಕಾದರೂ ಹೊರಹಾಕಬಹುದು ಎಂದರು‌.

Previous Post
ಉತ್ತರ ಪ್ರದೇಶದಲ್ಲಿ ಎಲ್ಲ ಲೋಕಸಭೆ ಸ್ಥಾನ ಗೆದ್ದರೂ ಇವಿಎಂ ಮೇಲೆ‌ ನಂಬಿಕೆ ಬರುವುದಿಲ್ಲ – ಅಖಿಲೇಶ್ ಯಾದವ್
Next Post
17% ಭಾರತೀಯರು ಬ್ಯಾಕಿಂಗ್ ಪಾಸ್‌ವರ್ಡ್ ಅಸುರಕ್ಷಿತವಾಗಿವೆ – ಸಮೀಕ್ಷೆ

Recent News