ಮೋದಿ ಸಂಪುಟದಲ್ಲಿ ಮತ್ತೊಮ್ಮೆ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ
ನವದೆಹಲಿ : ವಿಕಸಿತ್ ಭಾರತ ನರೇಂದ್ರ ಮೋದಿ ಅವರ ಸಂಕಲ್ಪ, ಭಾರತವನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಈ ದೃಷ್ಟಿಯಲ್ಲಿ ಮೋದಿ ಅವರು ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಲ್ಲಿ ನನಗೆ ಮತ್ತೊಂದು ಅವಕಾಶ ಸಿಕ್ಕಿದ್ದು ನನಗೆ ಖುಷಿಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಜೊತೆಗೆ ಕೆಲಸ ಮಾಡುವುದು ಆನಂದ, ಅವರ ನೇತೃತ್ವದಲ್ಲಿ ಯಾವ ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ, ನರೇಂದ್ರ ಮೋದಿ ಅವರ ಸಂಕಲ್ಪದ ಕಡೆಗೆ ಜೊತೆಯಾಗಿ ಹೆಜ್ಜೆ ಹಾಕುತ್ತೇನೆ ಎಂದರು. ಬೆಂಗಳೂರು ಜನರಿಗೆ, ಕಾರ್ಯಕರ್ತರು, ಮುಖಂಡರಿಗೆ ಧನ್ಯವಾದಗಳು ಅವರಿಂದ ನನಗೆ ಎರಡನೇ ಬಾರಿಗೆ ಅವಕಾಶ ಸಿಕ್ಕಿದೆ ಎಂದರು.
ಕ್ಯಾಬಿನೆಟ್ ದರ್ಜೆಗೆ ಪದನ್ನೊನ್ನತಿ ಸಿಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಏನು ಸಿಕ್ಕಿದೆ ಅದರಲ್ಲಿ ಖುಷಿಯಾಗಿದ್ದಿನಿ ಮೈತ್ರಿ ಸರ್ಕಾರ ಹಿನ್ನಲೆ ಹೊಂದಾಣಿಕೆ ಮಾಡುವ ಅನಿವಾರ್ಯತೆ ಇದೆ. ನನಗೆ ಸಚಿವ ಸ್ಥಾನ ಸಿಗಲ್ಲ ಅಂತಾ ಹಬ್ಬಿಸಲಾಗಿತ್ತು, ಕೆಲವು ಕಡೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿರಬಹುದು ಆದರೆ ನಾಯಕರು ನನ್ನ ಕೆಲಸವನ್ನು ಗಮನಿಸಿದ್ದಾರೆ, ಅದಕ್ಕಾಗಿ ಮತ್ತೊಂದು ಅವಕಾಶ ನೀಡಿದ್ದಾರೆ ಎಂದ ವಿಶ್ವಾಸ ವ್ಯಕ್ತಪಡಿಸಿರು.
ನೂತನ ಸಚಿವ ವಿ. ಸೋಮಣ್ಣ ಮಾತನಾಡಿ ಮೋದಿ ಸಂಪುಟದಲ್ಲಿ ಸಚಿವನಾಗಿರುವುದಕ್ಕೆ ಸಂತೋಷವಾಗುತ್ತಿದೆ ಯಾವ ಖಾತೆ ನೀಡಿದರೂ ಅದನ್ನು ನಿರ್ವಹಣೆ ಮಾಡುತ್ತೇನೆ ಯಾವ ಖಾತೆ ಉಪಯುಕ್ತ ಇಲ್ಲ ಅಂತಾ ಇಲ್ಲ, ನರೇಂದ್ರ ಮೋದಿ, ಅಮಿತ್ ಶಾ ಮಾರ್ಗದರ್ಶನದಲ್ಲಿ ನಡೆಯುತ್ತೇನೆ, ಮಂತ್ರಿಯಾದ ತಕ್ಷಣ ಊರಿಗೆ ಹೋಗಬೇಡಿ ಕೆಲಸ ಮಾಡಿ ಹೋಗಿ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ ಎಂದರು.