ಯುಪಿಎಸ್‌ಸಿ ಫಲಿತಾಂಶ ಪ್ರಕಟ ಐಪಿಎಸ್ ಅಧಿಕಾರಿ ಆದಿತ್ಯ ಶ್ರೀವಾಸ್ತವ್‌‌ಗೆ ಮೊದಲ ಸ್ಥಾನ

ಯುಪಿಎಸ್‌ಸಿ ಫಲಿತಾಂಶ ಪ್ರಕಟ ಐಪಿಎಸ್ ಅಧಿಕಾರಿ ಆದಿತ್ಯ ಶ್ರೀವಾಸ್ತವ್‌‌ಗೆ ಮೊದಲ ಸ್ಥಾನ

ನವದೆಹಲಿ : ನಾಗರಿಕ ಸೇವಾ ಪರೀಕ್ಷೆ 2023 ರ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 1,016 ಅಭ್ಯರ್ಥಿಗಳ ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಐಎಎಸ್‌ ವಿಭಾಗದಲ್ಲಿ ಆದಿತ್ಯ ಶ್ರೀವಾಸ್ತವ್‌ ದೇಶಕ್ಕೆ ಮೊದಲ 1 ಸ್ಥಾನ ಪಡೆದುಕೊಂಡಿದ್ದಾರೆ.

ಐಎಎಸ್ 180, ಐಎಫ್‌ಎಸ್ 37, ಐಪಿಎಸ್ ವಿಭಾಗದಲ್ಲಿ 200 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಗ್ರೂಪ್ ಎ 613, ಗ್ರೂಪ್ ಬಿ 113 ಮಂದಿ ಆಯ್ಕೆಯಾಗಿದ್ದಾರೆ. ಈ ವರ್ಷ ಆದಿತ್ಯ ಶ್ರೀವಾಸ್ತವ ಪ್ರಥಮ ಸ್ಥಾನ ಪಡೆದರೆ, ಅನಿಮೇಶ್ ಪ್ರಧಾನ್ ದ್ವಿತೀಯ, ಡೋಣೂರು ಅನನ್ಯಾ ರೆಡ್ಡಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಸಿವಿಲ್ ಸರ್ವಿಸಸ್ ಪರೀಕ್ಷೆ 2023 ರ ಅಂತಿಮ ಫಲಿಂತಾಶದಲ್ಲಿ ಮೊದಲ ಸ್ಥಾನದಲ್ಲಿ ಉತ್ತೀರ್ಣರಾಗಿರುವ ಆದಿತ್ಯ ಶ್ರೀವಾಸ್ತವ ಮೂಲತಃ ಲಕ್ನೋ ನಿವಾಸಿ, ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಅಂಡರ್ ಟ್ರೈನಿಂಗ್ ಐಪಿಎಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ತಂದೆ ಅಜಯ್ ಶ್ರೀವಾಸ್ತವ ಕೇಂದ್ರ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಎಎಒ ಆಗಿ ಕೆಲಸ ಮಾಡುತ್ತಿದ್ದಾರೆ.

CMS ಅಲಿಗಂಜ್‌ನಲ್ಲಿ ತಮ್ಮ ಆರಂಭಿಕ ಅಧ್ಯಯನವನ್ನು ಪೂರ್ಣಗೊಳಿಸಿದ ಅವರು. 12ನೇ ತೇರ್ಗಡೆಯಾದ ಬಳಿಕ ಕಾನ್ಪುರದ ಐಐಟಿಯಲ್ಲಿ ಬಿಟೆಕ್ ಮಾಡಿ ಕೆಲವು ದಿನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿ ಐಪಿಎಸ್ ಮತ್ತು ಈಗ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಫಲಿತಾಂಶದಲ್ಲಿ ರಾಜ್ಯದ 30 ಜನರು ಉತ್ತೀರ್ಣರಾಗಿದ್ದು ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ‌.

Previous Post
ನಾವು ಬ್ಯಾಲೆಟ್‌ ಪೇಪರ್‌ಗೆ ಹಿಂತಿರುಗಬಹುದು: ಸುಪ್ರೀಂ ಮುಂದೆ ಪ್ರಶಾಂತ್ ಭೂಷಣ್ ವಾದ
Next Post
ನನ್ನ ಹೆಸರು ಅರವಿಂದ್ ಕೇಜ್ರಿವಾಲ್, ನಾನು ಭಯೋತ್ಪಾದಕನಲ್ಲ ಜೈಲು ಅಧಿಕಾರಿಗಳ ವರ್ತನೆಗೆ ಸಂಜಯ್ ಸಿಂಗ್ ಗರಂ

Recent News