ಕೀವ್, ಆ. 25; ‘ ‘ದ್ವಿತೀಯ ಉಕ್ರೇನ್ ಶಾಂತಿ ಶೃಂಗಸಭೆ ಆಯೋಜಿಸಲು ಸೂಕ್ತವಾದ ದಕ್ಷಿಣದ ರಾಷ್ಟ್ರಗಳಲ್ಲಿ ಭಾರತವೂ ಒಂದು’ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಸೌದಿ ಅರೇಬಿಯಾ, ಕತಾರ್, ಟರ್ಕಿ ರಾಷ್ಟ್ರಗಳು ಚಿಂತನೆಯಲ್ಲಿವೆ ಎಂದರು. ಆದರೆ, ಇದೇ ಸಂದರ್ಭದಲ್ಲಿ ಪ್ರಥಮ ಶಾಂತಿ ಶೃಂಗದ ಘೋಷಣೆಗೆ ಸಹಮತ ವ್ಯಕ್ತಪಡಿಸದಿರುವ ರಾಷ್ಟ್ರದಲ್ಲಿ ಶೃಂಗಸಭೆ ಆಯೋಜನೆ ಸಾಧ್ಯವಿಲ್ಲ ಎಂದು ಝೆಲೆನ್ಸ್ಕಿ ಪ್ರತಿಪಾದಿಸಿದ್ದಾರೆ. ಭಾರತವು ಮೊದಲ ಶಾಂತಿ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರೂ, ಘೋಷಣೆಗೆ ಸಹಮತ ವ್ಯಕ್ತಪಡಿಸಿರಲಿಲ್ಲ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಭಾರತದ ತಟಸ್ಥ ನಿಲುವನ್ನು ಟೀಕಿಸಿದರು, ರಷ್ಯಾ ವಿರುದ್ಧ ಉಕ್ರೇನ್ ಪರವಾಗಿ ಭಾರತವನ್ನು ಒತ್ತಾಯಿಸಿದರು. ಆಗಸ್ಟ್ 23 ರಂದು ಪ್ರಧಾನಿ ನರೇಂದ್ರ ಮೋದಿಯವರ ಉಕ್ರೇನ್ ಭೇಟಿಯ ನಂತರ ಅವರ ಹೇಳಿಕೆಗಳು. ಮೋದಿ ಸೇರಿದಂತೆ ವಿಶ್ವ ನಾಯಕರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ತೊಡಗಿಸಿಕೊಂಡಿದ್ದಕ್ಕಾಗಿ ಝೆಲೆನ್ಸ್ಕಿ ಖಂಡಿಸಿದರು, ಉಕ್ರೇನ್ನಲ್ಲಿ ಪುಟಿನ್ ದೌರ್ಜನ್ಯದ ಬಗ್ಗೆ ಆರೋಪಿಸಿದರು ಮತ್ತು ರಷ್ಯಾವನ್ನು ರಾಜತಾಂತ್ರಿಕವಾಗಿ ಪ್ರತ್ಯೇಕಿಸುವ ಮಹತ್ವವನ್ನು ಒತ್ತಿ ಹೇಳಿದರು.
ರಷ್ಯಾ-ಉಕ್ರೇನ್ ಬಿಕ್ಕಟ್ಟು ನಿವಾರಣೆಗೆ ಭಾರತದ ಪಾತ್ರ ಮಹತ್ವದ್ದು: ಝೆಲೆನ್ಸ್ಕಿ
‘ರಷ್ಯಾ- ಉಕ್ರೇನ್ ಬಿಕ್ಕಟ್ಟು ಬಗೆಹರಿಸಿ ಶಾಂತಿ ಸ್ಥಾಪಿಸುವ ಜಾಗತಿಕ ರಾಜತಾಂತ್ರಿಕ ಪ್ರಯತ್ನದಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ’ ಎಂದು ಉಕ್ರೇನ್ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು, ಭಿಪ್ರಾಯಪಟ್ಟಿದ್ದಾರೆ. ‘ಶಂಕಾಸ್ಪದ ರಾಷ್ಟ್ರಗಳ ವರ್ತುಲದ ಈ ಜಗತ್ತಿನಲ್ಲಿ ಭಾರತವು ಬೃಹತ್ ಪ್ರಭಾವಿ ರಾಷ್ಟ್ರವಾಗಿದೆ. ಯುದ್ಧ ಮತ್ತು ರಷ್ಯಾ ಕುರಿತು ಭಾರತ ತನ್ನ ದೃಷ್ಟಿಕೋನವನ್ನು ಬದಲಿಸಿದಲ್ಲಿ, ನಾವು ಈ ಯುದ್ಧ ನಿಲ್ಲಿಸಬಹುದು. ಆಗ ಪುಟಿನ್ ಕೂಡಾ ಯುದ್ಧ ನಿಲ್ಲಿಸಲು ಬಯಸುತ್ತಾರೆ’ ಎಂದು ಝೆಲೆನ್ಸ್ಕಿ ಪ್ರತಿಪಾದಿಸಿದರು. ಪ್ರಥಮ ಉಕ್ರೇನ್ ಶಾಂತಿ ಶೃಂಗಸಭೆ ಸ್ವಿಟ್ಜರ್ಲ್ಯಾಂಡ್ನಲ್ಲಿ ಜೂನ್ ತಿಂಗಳಲ್ಲಿ ನಡೆದಿತ್ತು. ಉಕ್ರೇನ್ನಲ್ಲಿ ಶಾಂತಿ ಸ್ಥಾಪನೆಗೆ ಪ್ರತಿಪಾದಿಸುತ್ತಿರುವ 90ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು.