ರಾಜಕೀಯಕ್ಕೆ ಎಂಟ್ರಿಯಾಗ್ತಾರಾ ಡಿ ಕೆ ಶಿವಕುಮಾರ್‌ ಪುತ್ರಿ: ಐಶ್ವರ್ಯಾ ಹೇಳಿದ್ದೇನು?

ರಾಜಕೀಯಕ್ಕೆ ಎಂಟ್ರಿಯಾಗ್ತಾರಾ ಡಿ ಕೆ ಶಿವಕುಮಾರ್‌ ಪುತ್ರಿ: ಐಶ್ವರ್ಯಾ ಹೇಳಿದ್ದೇನು?

ಬೆಂಗಳೂರು, ಏಪ್ರಿಲ್‌ 27: ಲೋಕಸಭಾ ಚುನಾವಣಾ ಕಾವು ರಾಜ್ಯದಲ್ಲಿ ಜೋರಾಗಿದೆ. ಚಿಕ್ಕಪ್ಪನ ಪರವಾಗಿ ಡಿ ಕೆ ಶಿವಕುಮಾರ್‌ ಅವರ ಪುತ್ರಿ ಐಶ್ವರ್ಯ ಅವರು ಪ್ರಚಾರ ನಡೆಸಿದ್ದು, ಐಶ್ವರ್ಯ ಶಿವಕುಮಾರ್‌ ಅವರು ರಾಜಕೀಯಕ್ಕೆ ಬರ್ತಾರಾ ಎನ್ನುವ ಚರ್ಚೆ ರಾಜ್ಯ ರಾಜಕಾರಣದಲ್ಲಿ ಜೋರಾಗಿದೆ. ಈ ಕುರಿತು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರ ಪುತ್ರಿ ಐಶ್ವರ್ಯ ಅವರು ಮಾತನಾಡಿದ್ದು, ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ. ರಾಜಕೀಯಕ್ಕೆ ಬರುವ ಕುರಿತು ಐಶ್ವರ್ಯ ಹೆಗಡೆ ಅವರು ನಿರಾಸಕ್ತಿ ವ್ಯಕ್ತಪಡಿಸಿದ್ದಾರೆ. ನಾನು ಶಿಕ್ಷಣೋದ್ಯಮಿಯಾಗಿದ್ದು, ನನಗೆ ಅದರಲ್ಲಿಯೇ ಖುಷಿ ಸಿಗುತ್ತಿದೆ. ನನಗೆ ರಾಜಕೀಯ ಸೇರುವ ಉದ್ದೇಶ ಇಲ್ಲ ಎಂದು ಐಶ್ವರ್ಯ ಹೆಗಡೆ ಹೇಳಿದ್ದಾರೆ.

ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಲು ಎಲ್ಲರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ನಾನು ಶಿಕ್ಷಣೋದ್ಯಮಿಯಾಗಿದ್ದು, ಈಗ ಅಗತ್ಯವಿರುವ ಕ್ಷೇತ್ರದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಇವತ್ತು ನಾವು ದೇಶದ ಬಗ್ಗೆ ಯೋಚನೆ ಮಾಡಬೇಕು. ಸರ್ಕಾರದ ಶೈಕ್ಷಣಿಕ ಕಾರ್ಯಕ್ರಮ ಮತ್ತು ಯೋಜನೆಗಳಲ್ಲಿ ಭಾಗೀದಾರಳಾಗುವ ಆಸೆಯಿದೆ. ದೇಶ ಅಭಿವೃದ್ಧಿಯಾದರೆ ನಾನು ಅಥವಾ ಯಾರಾದರೂ ಕೂಡ ಅಭಿವೃದ್ಧಿ ಹೊಂದಬಹುದು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಜೂನ್‌ 4 ರಂದು ನಮ್ಮ ಚಿಕ್ಕಪ್ಪನ ಗೆಲುವನ್ನು ಆಚರಿಸುವ ವಿಶ್ವಾಸ ನನಗೆ ಇದೆ ಎಂದು ಐಶ್ವರ್ಯ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಇನ್ನೂ ನಿಮ್ಮ ತಂದೆ ಮುಖ್ಯಮಂತ್ರಿಯಾಗುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಒಬ್ಬರು ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತು ರಾಜ್ಯವನ್ನು ಮುನ್ನಡೆಸುತ್ತಿರುವಾಗ ಬೇರೆ ಸಿಎಂ ಬಗ್ಗೆ ಯೋಚನೆ ಮಾಡುವುದು ಸರಿಯಲ್ಲ, ಈಗಿನ ಮುಖ್ಯಮಂತ್ರಿ ಮಾಡುತ್ತಿ ರುವ ಕೆಲಸಗಳನ್ನು ಮತ್ತು ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಸುವ ಕೆಲಸ ಮಾಡಬೇಕು, ತಮ್ಮ ತಂದೆಯವರ ಸಾಮರ್ಥ್ಯ ಮತ್ತು ಅವರ ಕೆಲಸಗಳ ಹಿನ್ನೆಲೆ ಜೊತೆ ಅದೃಷ್ಟವಿದ್ದರೆ ಮುಂದೊಂದು ದಿನ ಸಿಎಂ ಆಗಬಹುದು, ಸದ್ಯಕ್ಕೆ ಅದರ ಬಗ್ಗೆ ಯೋಚನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

Previous Post
ಬರ ಪರಿಹಾರ; ರಾಜ್ಯದ ಮನವಿಯ ಕಾಲು ಭಾಗವೂ ಇಲ್ಲ: ಸಿದ್ದರಾಮಯ್ಯ ಅಸಮಾಧಾನ
Next Post
ಎಲ್ಲಾ ಪೀಸ್.. ಪೀಸ್.. ಇಸ್ರೇಲ್ ಸೇನೆ ದಾಳಿಗೆ ನರಕವಾಯ್ತು ಗಾಜಾ…

Recent News