ರಾಮನಗರ ಹೆಸರು ಮರುಸ್ಥಾಪನೆ ನನ್ನ ಜೀವನದ ಗುರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಹೆಚ್‌ಡಿಕೆ ಗರಂ

ರಾಮನಗರ ಹೆಸರು ಮರುಸ್ಥಾಪನೆ ನನ್ನ ಜೀವನದ ಗುರಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಹೆಚ್‌ಡಿಕೆ ಗರಂ

ನವದೆಹಲಿ : ಕಾಂಗ್ರೇಸ್ ಸರ್ಕಾರ ಮಾಡಿರುವ ಅಕ್ರಮ, ಜನ ವಿರೋಧಿ ನೀತಿಗಳು ನೋಡಿದರೆ ನಾಳೆ ಬೆಳಗ್ಗೆ ಚುನಾವಣೆ ನಡೆದರೆ ಜನರು ಅವರನ್ನು ಮನೆಗೆ ಕಳಿಹಿಸಲು ತಿರ್ಮಾನ ಮಾಡಿದ್ದಾರೆ, ಡಿ.ಕೆ ಶಿವಕುಮಾರ್ ಮುಂದಿನ ಹತ್ತು ವರ್ಷದ ಬಗ್ಗೆ ಆಮೇಲೆ ಯೋಚಿಸಲಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು. ಮುಂದಿನ ಬಾರಿಯೂ ಕಾಂಗ್ರೇಸ್ ಸರ್ಕಾರ ಬರಲಿದೆ ರಾಮನಗರದ ಹೆಸರು ಮರುಸ್ಥಾಪನೆ ಸಾಧ್ಯವಿಲ್ಲ ಎಂದು ಹೇಳಿದ್ದ ಡಿ.ಕೆ ಶಿವಕುಮಾರ್ ಹೇಳಿಕೆಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಈ ರೀತಿಯ ಹೇಳಿಕೆಯನ್ನು ಬಹಳ ಜನ ಹೇಳಿದ್ದಾರೆ ಮುಂದಿನ ಹತ್ತು, ಇಪ್ಪತ್ತು ವರ್ಷ ನಮ್ಮದೇ ಸರ್ಕಾರ ಅಂತಾ ಕರ್ನಾಟಕದಲ್ಲೇ ಹೇಳಿದ್ದಾರೆ ಇಂತಹ ಹೇಳಿಕೆ ನೀಡಿ ಒಂದೇ ವರ್ಷದಲ್ಲಿ ಹೋದವರು ಬಹಳ‌ ಜನ ಇದಾರೆ. ರಾಮನಗರದ ಹೆಸರು ಮರುಸ್ಥಾಪನೆ ನಾನು ಈ ಹೇಳಿಕೆ ಕಾಟಾಚಾರಕ್ಕೆ ಹೇಳಿಲ್ಲ, ಇದು ನನ್ನ ಜೀವನದ ಗುರಿ, ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಯಾವ ಘನಧಾರಿ ಕೆಲಸ ಮಾಡಿದ್ದಾರೆ ಅಂತಾ ಶಾಶ್ವತವಾಗಿ ಕೂರಲು ಜನ ಅವರಿಗೆ ಮತ ಕೊಡುತ್ತಾರೆ? ಪಾಪಾ ಗೂಟ ಹೊಡ್ಕೊಂಡು ಇರಲಿ, ಅಲ್ಲಿರ್ತಾರೋ ಇನ್ನೇಲಿ ಇರ್ತಾರೊ ನೊಡೊಣ. ಆದರೆ ರಾಮನಗರದ ವಿಚಾರದಲ್ಲಿ ಅವರ ನಿರ್ಧಾರಕ್ಕೆ ಪ್ರಾಯಶ್ಚಿತ ಪಡೆಬೇಕಾಗುತ್ತೆ ದೊಡ್ಡಮಟ್ಟದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು. ನೀತಿ ಆಯೋಗದ ಸಭೆ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಆಯೋಗದ ಸಭೆಯನ್ನು ಕರೆದು ವಿಕಸಿತ್ ಭಾರತ್ ಗುರಿ ಸಾಧಿಸುವ ಬಗ್ಗೆ ಚರ್ಚಿಸಿದರು, ಅದಕ್ಕಾಗಿ ಅವರದೇ ಆದ ಪ್ಲ್ಯಾನ್ ಇಟ್ಟುಕೊಂಡಿದ್ದು ಅದನ್ನು ಪ್ರಸುತ್ತ ಪಡಿಸಿದರು. ಸಭೆಗೆ ಎನ್ ಡಿಎ ಒಕ್ಕೂಟದ ಎಲ್ಲ ರಾಜ್ಯಗಳ ಸಿಎಂಗಳು ಬಂದಿದ್ದರು. ನಿತೀಶ್ ಕುಮಾರ್ ಆರೋಗ್ಯದ ಸಮಸ್ಯೆಯಿಂದ ಬಂದಿರಲಿಲ್ಲ, ತಮಿಳುನಾಡು, ತೆಲಂಗಾಣ, ಕೇರಳ, ಕರ್ನಾಟಕ, ದೆಹಲಿ, ಹಿಮಾಚಲ ಪ್ರದೇಶ, ಜಾರ್ಘಂಡ್ ಸಿಎಂ ಬಂದಿಲ್ಲಇದು ಒಳ್ಳೆಯ ಬೆಳವಣಿಗೆ ಅಲ್ಲ, ಇದರಿಂದ ಏನು ಸಾಧನೆ ಮಾಡುತ್ತಾರೆ ಅನ್ಯಾಯ ಆಗಿದ್ದರೆ ಸಭೆಯಲ್ಲಿ ಬಂದು ಚರ್ಚಿಸಬೇಕು, ಬೀದಿಯಲ್ಲಿ ನಿಂತು ಮಾತನಾಡಿದ್ರೆ ಏನು ಸಿಗುತ್ತೆ. ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರದೊಂದಿಗೆ ನಿರಂತರ ಸಂಘರ್ಷ ಮಾಡಿದೆ ವಿಶ್ವಾಸದ ಕೊರತೆ ಬರಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸಕ್ಕೆ ಉಂಟಾಗಲಿದೆ, ಇದರಿಂದ ನಾಡಿಗೆ ಸಂಕಷ್ಟ ಬರಲಿದೆ ಇದಕ್ಕೆ ಕಾಂಗ್ರೇಸ್ ನೇರ ಕಾರಣ ಎನ್ನುವುದರಲ್ಲಿ ಸಂಶಯ ಇಲ್ಲ ಎಂದರು‌.

Previous Post
ಎಲ್ಲಾ ರಾಜ್ಯಗಳ ಸಂಯೋಜಿತ ಪ್ರಯತ್ನಗಳು ವಿಕಸಿತ್ ಭಾರತ ಕನಸು ನನಸು ಮಾಡಲಿದೆ ನೀತಿ ಆಯೋಗದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ
Next Post
ಸಚಿವ ಎನ್ ಚಲುವರಾಯಸ್ವಾಮಿ ಅವರಿಂದ “ಕೃಷಿ ಸಂತೆ” ಉದ್ಘಾಟನೆ

Recent News