ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ

ನವದೆಹಲಿ : ಉಡುಪಿ ಮತ್ತು ಚಿಕ್ಕಮಗಳೂರು ಭಾಗದ ವಿವಿಧ ರೈಲ್ವೆ ಬೇಡಿಕೆ ಈಡೇರಿಸುವಂತೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ರೈಲ್ವೆ ಸಚಿವ ಅಶ್ವಿಣಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ. ರೈಲ್ವೆ ಭವನದಲ್ಲಿ ಭೇಟಿಯಾಗದ ಅವರು ನಾಲ್ಕು ಮನವಿಗಳನ್ನು ನೀಡಿದ್ದಾರೆ.

ಭೇಟಿ ಬಳಿಕ ಮಾಧ್ಯಮ ಪ್ರಕಟಣೆ ನೀಡಿದ್ದು ಇದರಲ್ಲಿ ಪಂಚಗಂಗಾ ರೈಲಿನ ಬಳಕೆದಾರರನ್ನು ಹೊರತು ಪಡಿಸಿ ತಡರಾತ್ರಿ ಉಡುಪಿ ಕುಂದಾಪುರ ಕಾರವಾರ ಕಡೆ ಪ್ರಯಾಣ ಬೆಳೆಸುವ ಅಸಂಖ್ಯಾತ ರೈಲು ಬಳಕೆದಾರರಿಗಾಗಿ ಪಡೀಲ್ ಬೈಪಾಸ್ ಮೂಲಕ ಹೊಸ ಬೆಂಗಳೂರು ಕಾರವಾರ ನಡುವೆ ರೈಲಿಗೆ ಮನವಿ ಮಾಡಿದೆ. ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಕೋಟಾ ಶ್ರೀನಿವಾಸ್ ಹೇಳಿದ್ದಾರೆ.

ಈಗಾಗಲೇ ಬರುತ್ತಿರುವ ಎರ್ನಾಕುಲಂ ನಿಜಾಮುದ್ದೀನ್ ರೈಲನ್ನು ಕುಂದಾಪುರದಲ್ಲಿ ನಿಲ್ಲಿಸುವಂತೆ ಕೊಟ್ಟ ಮನವಿಗೆ ಸಚಿವರು ಒಪ್ಪಿಕೊಂಡರು. ಮತ್ಸ್ಯ ಗಂದಾ ರೈಲಿನ ಬೋಗಿಗಳು ಅತ್ಯಂತ ಹಳೆಯದಾದ ಐಸಿಎಪ್ ಮಾದರಿಯದಾಗಿದ್ದು ತಕ್ಷಣವೇ ಅದನ್ನು ಆಧುನಿಕLHB ಕೋಚಿಗೆ ಮೇಲ್ದರ್ಜೆಗೆ ಏರಿಸಲು ಕೋರಲಾಯಿತು ಸ್ಪಂದಿಸಿದ ಸಚಿವರು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮುಖ್ಯವಾಗಿ ಬಹುದಿನದ ಬೇಡಿಕೆಯಾದ ಕೊಂಕಣ್ ರೈಲ್ವೆ ಯನ್ನು ಭಾರತದ ರೈಲ್ವೆಯಲ್ಲಿ ವಿಲೀನ ಮಾಡಬೇಕೆಂಬ ಮನವಿಯೊಂದಿಗೆ ಮಂಗಳೂರಿನ ಲೋಕಸಭಾ ಸದಸ್ಯರಾದ ಬ್ರಿಜೇಶ್ ಚೌಟ ಮತ್ತು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಇವರಿಬ್ಬರು ಹಿಂದೆ ರೈಲ್ವೆ ಸಚಿವರಿಗೆ ಕೊಟ್ಟ ಮನವಿಯನ್ನು ನೆನಪಿಸಿದೆ. ರೈಲ್ವೆ ಸಚಿವರಿಗೆ ಕರ್ನಾಟಕ, ಮಹಾರಾಷ್ಟ್ರ ಗೋವಾ ರಾಜ್ಯಗಳ ಷೇರು ಗಳು ಇರೋದನ್ನು ಮತ್ತು ಎಲ್ಲಾ ಸರಕಾರದ ಸಂಪರ್ಕ ಮತ್ತು ಸಹ ಮತವನ್ನು ವಿವರಿಸಿದೆ. ಕೊಂಕಣ್ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನವಾದರೆ ಮಾತ್ರ ಹೀಗಿರುವ ರೈಲ್ವೇ ಹಳಿಗಳ ಮೇಲ್ದರ್ಜೆ ಮತ್ತು ಹೆಚ್ಚುವರಿ ಭೋಗಿಗಳ ಜೋಡಣೆ ಹಾಗೂ ಹೀಗಿರುವ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಸೇರಿಸಲಾವಕಾಶ ಮತ್ತು ಹೊಸ ರೈಲು ಬೇಡಿಕೆಗಳ ಬಗ್ಗೆ ವಿವರಿಸಿದೆ.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರು ಈ ಎಲ್ಲಾ ವಿಚಾರಗಳಿಗೆ ಸಹ ಮತ ವ್ಯಕ್ತಪಡಿಸಿ ಕೊಂಕಣ್ ರೈಲ್ವೆ ವಿಲೀನದ ಬಗ್ಗೆ ಕೂಡಲೇ ರಾಜ್ಯ ಸರ್ಕಾರದಿಂದ ವರದಿ ತರಿಸುವುದಾಗಿ ಭರವಸೆ ನೀಡಿದರು. ಸಚಿವರ ಸಹಮತ ವ್ಯಕ್ತಪಡಿಸಿದ್ದು ಸಮಾಧಾನ ತಂದಿದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ಕೋಟಾ ಶ್ರೀನಿವಾಸ್ ಹೇಳಿದ್ದಾರೆ.

Previous Post
ರಾಷ್ಟ್ರಪತಿ ಭವನದ ಐಕಾನಿಕ್ ಹಾಲ್‌ಗಳಿಗೆ ಮರುನಾಮಕರಣ
Next Post
ಒಕ್ಕೂಟ ಸರ್ಕಾರ ರಚನೆಗೆ ಹಮಾಸ್, ಫತಾಹ್ ಸಮ್ಮತಿ

Recent News