ಲೋಕಸಭೆ ಅಧಿವೇಶನದ ಮೊದಲ ದಿನವೇ ಪ್ರತಿಭಟನೆ ಮೊದಲ 15 ದಿನಗಳಲ್ಲಿ 10 ವೈಫಲ್ಯತೆ ಕಂಡ ಸರ್ಕಾರ – ರಾಗಾ

ಲೋಕಸಭೆ ಅಧಿವೇಶನದ ಮೊದಲ ದಿನವೇ ಪ್ರತಿಭಟನೆ ಮೊದಲ 15 ದಿನಗಳಲ್ಲಿ 10 ವೈಫಲ್ಯತೆ ಕಂಡ ಸರ್ಕಾರ – ರಾಗಾ

ನವದೆಹಲಿ: ಚುನಾವಣೆ ಬಳಿಕ ಮೊದಲ ಲೋಕಸಭೆ ಅಧಿವೇಶನ ಶುರುವಾಗಿದೆ. ಕಲಾಪದ ಮೊದಲ ದಿನವೇ ʻಸಂವಿಧಾನ ಬಚಾವ್ʼ ಘೋಷವಾಕ್ಯದೊಂದಿಗೆ ಪ್ರತಿಭಟನೆ ನಡೆಸಿದೆ. ಸಂವಿಧಾನ ಪ್ರತಿ ಹಿಡಿದು ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿವೆ. ಕಲಾಪ ಆರಂಭಕ್ಕೂ ಮುನ್ನ ಹೊರಗಡೆ ಸಂವಿಧಾನದ ಪ್ರತಿ ಹಿಡಿದು ಘೋಷಣೆ ಕೂಗಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸೋನಿಯಾ ಗಾಂಧಿ ಸೇರಿದಂತೆ ಎಲ್ಲ ವಿಪಕ್ಷ ನಾಯಕರು ಇದರಲ್ಲಿ ಭಾಗಿಯಾಗಿದ್ದರು.

ಪ್ರತಿಭಟನೆ ಬೆನ್ನಲೆ ಟ್ವಿಟ್ ಮಾಡಿದ ರಾಹುಲ್ ಗಾಂಧಿ, ರೈಲು ಅಪಘಾತ, ಭಯೋತ್ಪಾದಕ ದಾಳಿ, ನೀಟ್ ಹಗರಣ ಸೇರಿದಂತೆ ಎನ್‌ಡಿಎ ಸರಕಾರದ ಮೊದಲ 15 ದಿನಗಳಲ್ಲಿ 10 ವೈಫಲ್ಯತೆ ಕಂಡಿದೆ ಎಂದು ಹೇಳಿದ್ದಾರೆ. ಮಾನಸಿಕವಾಗಿ ನರೇಂದ್ರ ಮೋದಿಯವರು ಹಿನ್ನಡೆ ಸಾಧಿಸಿದ್ದಾರೆ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಭೀಕರ ರೈಲು ಅಪಘಾತ, ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ, ರೈಲುಗಳಲ್ಲಿ ಪ್ರಯಾಣಿಕರ ಪಾಡು, ನೀಟ್ ಹಗರಣ, ನೀಟ್ – ಪಿಜಿ ರದ್ದು, UGC NET ಪೇಪರ್ ಲೀಕ್, ಹಾಲು, ಬೇಳೆಕಾಳುಗಳು, ಗ್ಯಾಸ್, ಟೋಲ್ ಮತ್ತು ದುಬಾರಿ, ಬೆಂಕಿಯಿಂದ ಉರಿಯುತ್ತಿರುವ ಅರಣ್ಯ, ನೀರಿನ ಬಿಕ್ಕಟ್ಟು, ಶಾಖದ ಅಲೆಯಲ್ಲಿ ಸರಕಾರದ ಸ್ಪಂಧನೆಯಿಲ್ಲದೆ ಸಾವುಗಳು ಎಂದು ಮೋದಿ‌ ಸರಕಾರದ 10 ವೈಫಲ್ಯಗಳ ಪಟ್ಟಿ ಮಾಡಿದ್ದಾರೆ.

ಮಾನಸಿಕವಾಗಿ ನರೇಂದ್ರ ಮೋದಿಯವರು ಹಿನ್ನಡೆ ಸಾಧಿಸಿದ್ದಾರೆ, ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ ನರೇಂದ್ರ ಮೋದಿ ಸರ್ಕಾರದಿಂದ ಸಂವಿಧಾನದ ಮೇಲಿನ ದಾಳಿ ನಮಗೆ ಸ್ವೀಕಾರಾರ್ಹವಲ್ಲ ಯಾವುದೇ ಸಂದರ್ಭದಲ್ಲೂ ದಾಳಿ ಮಾಡಲು ನಾವು ಬಿಡುವುದಿಲ್ಲ ಇಂಡಿಯಾ ಒಕ್ಕೂಟದಿಂದ ಪ್ರಬಲ ವಿರೋಧವನ್ನು ಮುಂದುವರೆಸುತ್ತೇವೆ ಜನರ ಧ್ವನಿಯಾಗಿ ಕೆಲಸ ಮಾಡುತ್ತೇವೆ ಉತ್ತರದಾಯಿತ್ವವಿಲ್ಲದೆ ಪ್ರಧಾನಿಯನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಟ್ವಿಟ್ ಮಾಡಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ನೀಟ್, ನೆಟ್ ಪರೀಕ್ಷೆಯಲ್ಲಿ ಅಕ್ರವಾಗಿದೆ, ಪಶ್ಚಿಮ ಬಂಗಾಳದಲ್ಲಿ ರೈಲು ದುರಂತವಾಗಿದೆ ಕಳೆದ 13 ತಿಂಗಳಿನಿಂದ ಮಣಿಪುರದಲ್ಲಿ ಹಿಂಸೆ ಮುಂದುವರಿದಿದೆ ಈಶಾನ್ಯ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ, ಬೆಲೆ ಏರಿಕೆ ಎಕ್ಸಟ್ ಪೊಲ್ ಷೇರು ಮಾರುಕಟ್ಟೆ ಹಗರಣ ನಡೆದಿದೆ ಈ ಬಗ್ಗೆ ಮೋದಿ ಅವರು ಮಾತನಾಡಬಹುದು ಎಂದು ದೇಶದ ಜನರು ನಿರೀಕ್ಷಿಸಿದ್ದರು, ನೈತಿನ, ರಾಜಕೀಯ ಸೋಲಿನ ನಂತರವೂ ಮೋದಿ ಅಹಂಕಾರ ಹಾಗೇ ಉಳಿದಿದೆ ಐವತ್ತು ವರ್ಷದ ಹಿಂದಿನ ತುರ್ತು ಪರಿಸ್ಥಿತಿ ಬಗ್ಗೆ ನೆನಪಿಸುತ್ತಾರೆ ಆದರೆ ಕಳೆದ ಹತ್ತು ವರ್ಷದ ಘೋಷಿತ ತುರ್ತು ಸಂದರ್ಭದಲ್ಲಿ ಬಗ್ಗೆ ಮಾತನಾಡುವುದಿಲ್ಲ ಜನರು ಮೋದಿ ವಿರುದ್ಧ ಜನಾದೇಶ ನೀಡಿದ್ದಾರೆ ನಾವು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತೇವೆ ಎಂದು ಹೇಳಿದರು.

Previous Post
ವಯನಾಡ್ ಜನತೆಗೆ ರಾಹುಲ್ ಗಾಂಧಿ ಭಾವನಾತ್ಮಕ ಪತ್ರ
Next Post
ಆರೋಗ್ಯ ಹದಗೆಟ್ಟರು ಉಪವಾಸ ಸತ್ಯಾಗ್ರಹ ಬಿಡುವುದಿಲ್ಲ – ಸಚಿವೆ ಅತಿಶಿ

Recent News