ಲೋಕಸಭೆ ಚುನಾವಣೆಗೆ ಬಿಜೆಪಿಯ ಎರಡನೇ ಪಟ್ಟಿ ಪ್ರಕಟ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ, ಹಾಲಿ ಸಂಸದರಿಗೆ ಶಾಕ್

ಲೋಕಸಭೆ ಚುನಾವಣೆಗೆ ಬಿಜೆಪಿಯ ಎರಡನೇ ಪಟ್ಟಿ ಪ್ರಕಟ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ, ಹಾಲಿ ಸಂಸದರಿಗೆ ಶಾಕ್

ನವದೆಹಲಿ : ಲೋಕಸಭೆ ಚುನಾವಣೆ ಹಿನ್ನಲೆ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ರಾಜ್ಯದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 72 ಮಂದಿ ಅಭ್ಯರ್ಥಿಗಳ ಹೆಸರು ಘೋಷಿಸಿದ್ದು ಈ ಮೂಲಕ ಈವರೆಗೂ 267 ಕ್ಷೇತ್ರಗಳಿಗೆ ಟಿಕೆಟ್ ನೀಡಿದಂತಾಗಿದ್ದು ಬಾಕಿ 276 ಕ್ಷೇತ್ರಗಳಿಗೆ ಟಿಕೆಟ್ ನೀಡಬೇಕಿದೆ.

ರಾಜ್ಯದಲ್ಲಿ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸಿದ್ದು ಜೆಡಿಎಸ್‌ ಮೂರು ಸೇರಿ ಎಂಟು ಕ್ಷೇತ್ರಗಳು ಬಾಕಿ ಉಳಿದಿವೆ. ಪ್ರಸುತ್ತ ಪಟ್ಟಿಯಲ್ಲಿ ಏಳು ಮಂದಿ ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದೆ. ದಕ್ಷಿಣ ಕನ್ನಡ, ಚಾಮರಾಜನಗರ, ಹಾವೇರಿ, ಬಳ್ಳಾರಿ, ಬೆಂಗಳೂರು ಉತ್ತರ, ಮೈಸೂರು, ಕೊಪ್ಪಳ, ದಾವಣಗೆರೆ ಕ್ಷೇತ್ರಸ ಹಾಲಿ ಸಂಸದರಿಗೆ ಟಿಕೇಟ್ ನೀಡಲು ನಿರಾಕರಿಸಿದೆ.

ಚಿಕ್ಕೋಡಿಯಿಂದ ಅಣ್ಣಸಾಹೇಬ್ ಜೊಲ್ಲೆ, ಮೈಸೂರಿನಿಂದ ಯದುವೀರ್ ಒಡೆಯರ್, ಕಲಬುರಗಿಯಿಂದ ಉಮೇಶ್ ಜಾಧವ್, ವಿಜಯಪುರದಿಂದ ರಮೇಶ್ ಜಿಗಜಿಣಗಿ, ಬೀದರ್‌ನಿಂದ ಭಗವಂತ ಖೂಬಾ, ಉಡುಪಿಗೆ ಕೋಟಾ ಶ್ರೀನಿವಾಸ ಪೂಜಾರಿ, ಧಾರವಾಡಕ್ಕೆ ಪ್ರಹ್ಲಾದ್ ಜೋಶಿ
ತುಮಕೂರಿಗೆ ವಿ.ಸೋಮಣ್ಣ, ಕೊಪ್ಪಳದಿಂದ ಬಸವರಾಜ್ ಕ್ಯಾವತೂರ್, ಬಳ್ಳಾರಿಯಿಂದ ಬಿ. ಶ್ರೀರಾಮುಲು
ಹಾವೇರಿಗೆ ಬಸವರಾಜ ಬೊಮ್ಮಾಯಿ, ಬಾಗಲಕೋಟೆಯಿಂದ ಪಿ.ಸಿ.ಗದ್ದಿಗೌಡರ್

ದಾವಣಗೆರೆಗೆ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ್
ಬೆಂಗಳೂರು ಉತ್ತರಕ್ಕೆವಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರದಿಂದಬಪಿ.ಸಿ.ಮೋಹನ್
ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ, ಬೆಂಗಳೂರು ಗ್ರಾಮಾಂತರದಿಂದ ಡಾ. ಸಿ.ಎನ್.ಮಂಜುನಾಥ್, ಚಾಮರಾಜನಗರದಿಂದ ಎಸ್. ಬಾಲರಾಜ್, ದಕ್ಷಿಣ ಕನ್ನಡದಿಂದ ಬ್ರಿಜೇಶ್ ಚೌಟ ಹಾಗೂ ಶಿವಮೊಗ್ಗದಿಂದ ಬಿ.ವೈ.ರಾಘವೇಂದ್ರ‌ಗೆ ಟಿಕೆಟ್ ನೀಡಲಾಗಿದೆ.

ಹಾಲಿ ಸಂಸದರಿಗೆ ಕೋಕ್

9 ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್ ಮಿಸ್ ಆಗಿದ್ದು, ಅದರಲ್ಲಿ ಮೈಸೂರಿನಲ್ಲಿ ಪ್ರತಾಪ್ ಸಿಂಹ, ದಕ್ಷಿಣ ಕನ್ನಡದಿಂದ ನಳೀನ್ ಕುಮಾರ್ ಕಟೀಲ್, ಬಳ್ಳಾರಿಯಿಂದ ದೇವೇಂದ್ರಪ್ಪ, ಕೊಪ್ಪಳದಿಂದ ಕರಡಿ ಸಂಗಣ್ಣಗೆ , ಬೆಂಗಳೂರು ಉತ್ತರದ ಸಂಸದ ಸದಾನಂದಗೌಡ, ಹಾವೇರಿಯಿಂದ ಶಿವಕುಮಾರ್ ಉದಾಸಿಗೆ . ದಾವಣಗೆರೆಯಿಂದ ಸಿದ್ದೇಶ್ವರ್, ತುಮಕೂರಿನಿಂದ ಜಿ.ಎಸ್.ಬಸವರಾಜ್, ಚಾಮರಾಜನಗರದಿಂದ ಶ್ರೀನಿವಾಸ್ ಪ್ರಸಾದ್ ಟಿಕೆಟ್ ನೀಡಿಲ್ಲ. ಶಿವಕುಮಾರ್ ಉದಾಸಿ, ಶ್ರೀನಿವಾಸ್ ಪ್ರಸಾದ್, ಜಿ.ಎಸದ ಬಸವರಾಜ್ ಚುನಾವಣಾ ನಿವೃತ್ತಿ ಘೋಷಿಸಿದ್ದರು.

ಐದು ಕ್ಷೇತ್ರಗಳು ಬಾಕಿ

ಚಿತ್ರದುರ್ಗ, ಬೆಳಗಾವಿ, ಚಿಕ್ಕಬಳ್ಳಾಪುರ, ರಾಯಚೂರು, ಉತ್ತರ ಕನ್ನಡಕ್ಕೆ ಅಭ್ಯರ್ಥಿಗಳ ಘೋಷಣೆ ಬಾಕಿ ಉಳಿಸಿಕೊಂಡಿದೆ. ಕೇಂದ್ರ ಸಚಿವ ನಾರಯಣಸ್ವಾಮಿ ಚಿತ್ರದುರ್ಗದಲ್ಲಿ ಹಾಲಿ ಸಂಸದರಾಗಿದ್ದು ಸ್ಪರ್ಧೆ ಆಸಕ್ತಿ ತೋರಿಲ್ಲ ಹೀಗಾಗೀ ಬದಲಿ ಅಭ್ಯರ್ಥಿ ಹುಡಕಾಟ ನಡೆದಿದೆ. ಬೆಳಗಾವಿಯಿಂದ ಜಗದೀಶ್ ಶೆಟ್ಟರ್ ಹೆಸರು ಕೇಳಿ ಬಂದಿದ್ದು ಸಂಸದೆ ಮಂಗಳಾ ಅಂಗಡಿ ಪುತ್ರಿಗೆ ಟಿಕೆಟ್ ಕೇಳಿದ್ದಾರೆ. ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗ್ಗಡೆ ಹಾಲಿ ಸಂಸದರಾಗಿದ್ದು ಅವರನ್ನು ಮುಂದುವರಿಸುವ ಬಗ್ಗೆ ಚಿಂತನೆ ನಡೆದಿದೆ. ಚಿಕ್ಕಬಳ್ಳಾಪುರಕ್ಕೆ ರಾಯಚೂರಿಗೂ ಶೀಘ್ರದಲ್ಲಿ ಅಭ್ಯರ್ಥಿಗಳ ಘೋಷಣೆಯಾಗಬಹುದು.

ಜೆಡಿಎಸ್‌‌ಗೆ ಮೂರು ಸ್ಥಾನ?

ಜೆಡಿಎಸ್ ಮೈತ್ರಿಯಾಗಿರುವ ಹಾಸನಕ್ಕೆ ಪ್ರಜ್ವಲ್ ರೇವಣ್ಣ ಹೆಸರನ್ನು ಹೆಚ್.ಡಿ ಕುಮಾರ್ ಸ್ವಾಮಿ ಘೋಷಿಸಿದ್ದಾರೆ. ಮಂಡ್ಯ ಮತ್ತು ಕೋಲಾರಕ್ಕೆ ಅಭ್ಯರ್ಥಿ ಯಾರು ಎನ್ನುವ ಕುತೂಹಲ ಮುಂದುವರಿದಿದೆ. ಬಿಜೆಪಿ ಹೈಕಮಾಂಡ್ ಜೊತೆಗೆ ಕುಮಾರಸ್ವಾಮಿ ಸಭೆ ನಡೆಸಿದ ಬಳಿಕ ಅಭ್ಯರ್ಥಿಗಳ ಹೆಸರು ಘೋಷಣೆಯಾಗಬಹುದು ಎನ್ನಲಾಗಿದೆ.

Previous Post
30 ಹಂತಗಳಲ್ಲಿ 16,518 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ ನೀಡಿದೆ ಸುಪ್ರೀಂಕೋರ್ಟ್‌ಗೆ ಎಸ್‌ಬಿಐ ಅಫಿಡೆವಿಟ್
Next Post
ದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರಿಂದ ಮಹಾಪಂಚಾಯತ್

Recent News