ಲೋಕಸಭೆ ಚುನಾವಣೆ ಪ್ರಜಾಪ್ರಭುತ್ವ ಉಳಿಸಲು ಕೊನೆ ಅವಕಾಶ: ಚಿದಂಬರಂ

ಲೋಕಸಭೆ ಚುನಾವಣೆ ಪ್ರಜಾಪ್ರಭುತ್ವ ಉಳಿಸಲು ಕೊನೆ ಅವಕಾಶ: ಚಿದಂಬರಂ

ನವದೆಹಲಿ, ಏ. 13: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಭಾರತದ ಪ್ರಜಾಪ್ರಭುತ್ವ ಎದುರಿಸುತ್ತಿರುವ ಅಪಾಯಗಳ ವಿರುದ್ಧ ನಾಗರಿಕರಿಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಕೆಳಗಿಳಿಸದಿದ್ದರೆ ಭಾರತ ರಷ್ಯಾ, ಚೀನಾದಂತಾಗಲಿದೆ ಎಂದು ಖರ್ಗೆ ಹಲವು ಸಾರ್ವಜನಿಕ ಸಭೆಗಳಲ್ಲಿ ಹೇಳಿದ್ದರು. ಮೋದಿ ಅವರು ವ್ಲಾಡಿಮಿರ್ ಪುಟಿನ್ ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು 2024ರ ಸಂಸತ್ತಿನ ಚುನಾವಣೆಯು ಪ್ರಜಾಪ್ರಭುತ್ವವನ್ನು ಉಳಿಸಲು ಭಾರತೀಯರಿಗಿರುವ ಕೊನೆಯ ಅವಕಾಶವಾಗಿದೆ ಎಂದು ಹೇಳಿದ್ದರು. ಬುದ್ಧಿಜೀವಿಗಳ ದೊಡ್ಡ ವಿಭಾಗಗಳು ಸಹ ಇದೇ ರೀತಿಯ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ವಿವಿಧ ಕೇಂದ್ರ ಸರ್ಕಾರಗಳಲ್ಲಿ ಹಣಕಾಸು ಮತ್ತು ಗೃಹದಂತಹ ಪ್ರಮುಖ ಖಾತೆಗಳನ್ನು ಹೊಂದಿದ್ದಲ್ಲದೆ, ಕಾಂಗ್ರೆಸ್‌ನ ಹಿರಿಯ ನಾಯಕರಾದ ಪಿ.ಚಿದಂಬರಂ ಅವರು ಕೂಡ ಇದೇ ರೀತಿಯ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ‘ದಿ ವೈರ್‌’ಗೆ ನೀಡಿದ ಸಂದರ್ಶನದಲ್ಲಿ, ಚಿದಂಬರಂ ಅವರು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವಲ್ಲಿ ಚುನಾವಣಾ ಆಯೋಗದ ಪಾತ್ರವನ್ನು ಮತ್ತು ದೇಶದಲ್ಲಿನ ಪ್ರಸ್ತುತ ಭಯದ ವಾತಾವರಣವನ್ನು ಪ್ರಶ್ನಿಸಿದ್ದಾರೆ.

ಈ ಚುನಾವಣೆಯು ಪ್ರಜಾಸತ್ತಾತ್ಮಕವಾಗಿದೆ ಆದರೆ ಅಪ್ರಜಾಸತ್ತಾತ್ಮಕ ಕ್ರಮಗಳ ಛಾಯೆಗಳು ಚುನಾವಣೆಯ ಮೇಲೆ ಪ್ರಭಾವ ಬೀರಿದೆ. ಹಲವಾರು ವಿರೋಧ ಪಕ್ಷದ ನಾಯಕರು ಜೈಲಿನಲ್ಲಿದ್ದಾರೆ ಮತ್ತು ಅವರಿಗೆ ಜಾಮೀನು ನಿರಾಕರಿಸಲಾಗಿದೆ. ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸುವ ವೇಳೆಗೆ, ಚುನಾವಣೆ ಮುಗಿದಿರುತ್ತದೆ. ವಿರೋಧ ಪಕ್ಷದ ಅಭ್ಯರ್ಥಿಗಳು ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಜಾರಿ ನಿರ್ದೇಶನಾಲಯ (ED) ಮತ್ತು ಆದಾಯ ತೆರಿಗೆ ಇಲಾಖೆ ಅತಿಯಾಗಿ ಕ್ರಿಯಾಶೀಲವಾಗಿವೆ.
ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಅಭ್ಯರ್ಥಿಗಳ ವಿರುದ್ಧ ಚುನಾವಣಾ ದೂರುಗಳನ್ನು ನೀಡಿದರೆ ನಿರ್ಲಕ್ಷಿಸಲಾಗುತ್ತದೆ. ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವವನ್ನು ಉಳಿಸದಿದ್ದರೆ, ಮುಂದಿನ ಚುನಾವಣೆಯು ಮುಕ್ತ ಮತ್ತು ನ್ಯಾಯಯುತ ಚುನಾವಣೆಯ ಆಗಿರುತ್ತಾ? ಇದು ಪ್ರಜಾಪ್ರಭುತ್ವ ವಿರೋಧಿ ಚುನಾವಣೆಯಾಗಬಹುದು ಎಂದು ನಾನು ಹೆದರುತ್ತೇನೆ ಎಂದು ಹೇಳಿದ್ದಾರೆ.

ನಾವು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಬಹುದು, ನಾವು ಮಧ್ಯಪ್ರವೇಶಿಸುವಂತೆ ಮನವಿ ಮಾಡುತ್ತಿದ್ದೇವೆ. ನಾವು ಪ್ರತಿದಿನ ಆಯೋಗವನ್ನು ಸುಪ್ರೀಂಕೋರ್ಟ್‌ಗೆ ಕೊಂಡೊಯ್ಯಲು ಸಾಧ್ಯವಿಲ್ಲ. ನಾವು ಚುನಾವಣೆಯಲ್ಲಿ ಹೋರಾಡುತ್ತಿದ್ದೇವೆ, ಕಾನೂನು ಪ್ರಕರಣಕ್ಕಲ್ಲ ಎಂದು ಹೇಳಿದ್ದಾರೆ. ಏಪ್ರಿಲ್ 5ರಂದು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾಗಿದೆ. ಬಿಜೆಪಿ ಪ್ರಣಾಳಿಕೆಯಲ್ಲಿ ವಸ್ತುನಿಷ್ಠ ವಿಷಯಗಳ ಬಗ್ಗೆ ಏನನ್ನೂ ಹೇಳಿಲ್ಲ. ಹಠಾತ್ತನೆ ಮುಸ್ಲಿಂ ಲೀಗ್ ಜೊತೆ ಲಿಂಕ್‌ ಕಲ್ಪಿಸುವ ನರೇಂದ್ರ ಮೋದಿಯದ್ದು ಅರ್ಥಹೀನ ಸಮರ್ಥನೆಗಳು ಎಂದು ಚಿದಂಬರಂ ಅವರು ಹೇಳಿದ್ದಾರೆ. ಎಲ್ಲರೂ ಭಯದಿಂದ ಬದುಕುತ್ತಿದ್ದಾರೆ. ಸ್ವಾತಂತ್ರ್ಯ ಮತ್ತು ಭಯ ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಈ ಭಯದ ವಾತಾವರಣ ಸೃಷ್ಟಿಸಿದ್ದು ಬಿಜೆಪಿ. ಕಾಂಗ್ರೆಸ್ ಬಿಜೆಪಿ ವಿರುದ್ಧ ಹೋರಾಡುತ್ತಿದೆ. ಧೀರ ವ್ಯಕ್ತಿಗಳು ಬಿಜೆಪಿ ವಿರುದ್ಧ ಹೋರಾಡುತ್ತಿದ್ದಾರೆ. ಬಿಜೆಪಿಯ ಸರ್ವಾಧಿಕಾರದ ವಿರುದ್ಧ ಮಾತನಾಡಲು ನೂರಾರು ಮತ್ತು ಸಾವಿರಾರು ಜನರನ್ನು ಒತ್ತಾಯಿಸುತ್ತೇನೆ. 400 ಸೀಟುಗಳನ್ನು ಪಡೆಯುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಅಂತಹ ಹೇಳಿಕೆಗಳನ್ನು ಯಾರೂ ನಂಬುವುದಿಲ್ಲ ಎಂಬುದು ಸತ್ಯ. ನರೇಂದ್ರ ಮೋದಿಯ 10 ವರ್ಷಗಳ ಅಧಿಕಾರಾವಧಿಯಲ್ಲಿ ದೇಶ ದುರ್ಬಲ ಸ್ಥಿತಿಗೆ ತಲ್ಲಲ್ಪಟ್ಟಿದೆ ಎಂದು ಹೇಳಿದ್ದಾರೆ.

Previous Post
ಸುತ್ತೂರು ಮಠಕ್ಕೆ ಭೇಟಿ ನೀಡಿದ ರಕ್ಷಾ ರಾಮಯ್ಯ ಎಂ.ಎಸ್. ರಾಮಯ್ಯ ಕುಟುಂಬದ ಕೊಡುಗೆಗಳನ್ನು ಸ್ಮರಿಸಿದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ
Next Post
ಹೇಮಂತ್ ಸೊರೆನ್ ಬಂಧನ ಖಂಡಿಸಿ ಪ್ರತಿಭಟಿಸಿದ ಆದಿವಾಸಿಗಳ ವಿರುದ್ಧ FIR

Recent News