ವಯನಾಡ್ ನಿಂದ ಕಣಕ್ಕಿಳಿದ ರಾಹುಲ್ ಗಾಂಧಿ ಆಸ್ತಿ ಎಷ್ಟು?

ವಯನಾಡ್ ನಿಂದ ಕಣಕ್ಕಿಳಿದ ರಾಹುಲ್ ಗಾಂಧಿ ಆಸ್ತಿ ಎಷ್ಟು?

ನವದೆಹಲಿ : ಕೇರಳದ ವಯನಾಡಿನಿಂದ ಸಂಸದರಾಗಿರುವ ರಾಹುಲ್‌ಗಾಂಧಿ ಎರಡನೇ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದು ಬುಧವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ಬೆನ್ನಲೆ ಚುನಾವಣಾ ಅಫಿಡೆವಿಟ್ ನಲ್ಲಿ ಅವರ ಆದಾಯ ಮತ್ತು ಆಸ್ತಿ ವಿವರಣೆಯನ್ನು ಘೋಷಿಸಿಕೊಂಡಿದ್ದಾರೆ. 53 ವರ್ಷದ ರಾಗಾ, 2022-23ರ ಹಣಕಾಸು ವರ್ಷದಲ್ಲಿ 55,000 ರೂಪಾಯಿ ನಗದು ಮತ್ತು ಒಟ್ಟು 1,02,78,680 (ರೂ 1.02 ಕೋಟಿ) ಆದಾಯವನ್ನು ಘೋಷಿಸಿದ್ದಾರೆ.

ರಾಹುಲ್ ಗಾಂಧಿ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಅವರು 4.3 ಕೋಟಿ ರೂಪಾಯಿ ಷೇರು ಮಾರುಕಟ್ಟೆ ಹೂಡಿಕೆ ಮಾಡಿದ್ದಾರೆ ಈ ಪೈಕಿ 3.81 ಕೋಟಿ ರೂಪಾಯಿ ಮ್ಯೂಚುವಲ್ ಫಂಡ್ ಠೇವಣಿಯಾಗಿದೆ ಮತ್ತು ಬ್ಯಾಂಕ್ ಖಾತೆಯಲ್ಲಿ 26.25 ಲಕ್ಷ ರೂಪಾಯಿ ಹೊಂದಿದ್ದಾರೆ. ರಾಹುಲ್ ಗಾಂಧಿ ಬಳಿ 15.2 ಲಕ್ಷ ಮೌಲ್ಯದ ಚಿನ್ನದ ಬಾಂಡ್‌ಗಳಿವೆ. ಅವರು ರಾಷ್ಟ್ರೀಯ ಉಳಿತಾಯ ಯೋಜನೆಗಳು, ಅಂಚೆ ಉಳಿತಾಯ ಮತ್ತು ವಿಮಾ ಪಾಲಿಸಿಗಳಲ್ಲಿ 61.52 ಲಕ್ಷ ರೂಪಾಯಿ ಮೌಲ್ಯದ ಹೂಡಿಕೆಗಳನ್ನು ಹೊಂದಿದ್ದಾರೆ.

4.2 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹೊಂದಿದ್ದು, ಅವರ ಒಟ್ಟು ಚರ ಆಸ್ತಿ ಮೌಲ್ಯ 9.24 ಕೋಟಿ ರೂ.ಗಳಾಗಿದ್ದು, ಅವರ ಸ್ಥಿರಾಸ್ತಿಯ ಒಟ್ಟು ಮೌಲ್ಯ ಸುಮಾರು 11.14 ಕೋಟಿ ರೂ. ನಾಮನಿರ್ದೇಶನದ ಜೊತೆಗೆ ಒದಗಿಸಲಾದ ವಿವರಗಳ ಪ್ರಕಾರ ಅವರ ಒಟ್ಟು ಆಸ್ತಿ ಮೌಲ್ಯ 20 ಕೋಟಿ ರೂ.
ರಾಹುಲ್ ಗಾಂಧಿ ಕೂಡ ಸುಮಾರು 49.7 ಲಕ್ಷ ರೂ ಸಾಲ ಹೊಂದಿದ್ದಾರೆ. ಅವರ ವಿರುದ್ಧ 18 ಕ್ರಿಮಿನಲ್ ಕೇಸ್ ಗಳಿದ್ದು ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, ಸುಪ್ರೀಂಕೋರ್ಟ್ ಆದೇಶಕ್ಕೆ ತಡೆ ನೀಡಿದೆ ಎಂದು ಉಲ್ಲೇಖಿಸಿದೆ.

Previous Post
ಸಿಎಂ ಸ್ಥಾನದಿಂದ ಕೇಜ್ರಿವಾಲ್ ಕೆಳಗಿಳಿಸುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ದೆಹಲಿ ಹೈಕೋರ್ಟ್ ನಕಾರ
Next Post
ಕಾಂಗ್ರೆಸ್‌ ಪ್ರಣಾಳಿಕೆ: ಉದ್ಯೋಗ ಸೃಷ್ಟಿ, ಜಾತಿ ಗಣತಿಯ ಭರವಸೆ

Recent News