ವಿಧಾನಪರಿಷತ್ ಚುನಾವಣೆ: ಸಿ.ಟಿ ರವಿ ಸೇರಿದಂತೆ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ

ವಿಧಾನಪರಿಷತ್ ಚುನಾವಣೆ: ಸಿ.ಟಿ ರವಿ ಸೇರಿದಂತೆ 11 ಅಭ್ಯರ್ಥಿಗಳು ಅವಿರೋಧ ಆಯ್ಕೆ

ಬೆಂಗಳೂರು: ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಮೂರು ರಾಜಕೀಯ ಪಕ್ಷಗಳ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.ವಿಧಾನಪರಿಷತ್ತಿಗೆ ಕಾಂಗ್ರೆಸ್ ಪಕ್ಷದ 7, ಬಿಜೆಪಿಯ 3 ಹಾಗೂ ಜೆಡಿಎಸ್ ಪಕ್ಷದ ಓರ್ವ ಸದಸ್ಯ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿಯಾಗಿರುವ ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.ಕಾಂಗ್ರೆಸ್ ಪಕ್ಷದಿಂದ ಐವಾನ್ ಡಿ’ಸೋಜ, ಕೆ.ಗೋವಿಂದರಾಜ್, ಜಗದೇವ್ ಗುತ್ತೇದಾರ್, ಬಲ್ಕೀಸ್ ಬಾನು, ಎನ್.ಎಸ್.ಭೋಸರಾಜು, ಡಾ.ಯತೀಂದ್ರ, ಎ.ವಸಂತಕುಮಾರ್, ಬಿಜೆಪಿ ಪಕ್ಷದಿಂದ ಸಿ.ಟಿ.ರವಿ, ಎನ್.ರವಿಕುಮಾರ್, ಮುಳೆ ಮಾರುತಿರಾವ್ ಹಾಗೂ ಜೆಡಿಎಸ್​ನಿಂದ ಟಿ.ಎನ್.ಜವರಾಯಿಗೌಡ ಅವರು ಆಯ್ಕೆ ಆಗಿರುವ ಅಭ್ಯರ್ಥಿಗಳು.ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ತಿನ 11 ಸ್ಥಾನಗಳಿಗೆ ಜೂ.13ರಂದು ಚುನಾವಣೆ ನಡೆಯಬೇಕಿತ್ತು. 11 ಸ್ಥಾನಗಳಿಗೆ ಒಟ್ಟು 12 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ, ಆಸಿಫ್ ಪಾಷಾ ಎಂಬವರು ಸಲ್ಲಿಕೆ ಮಾಡಿದ್ದ ನಾಮಪತ್ರದಲ್ಲಿ ಸೂಚಕರಿಲ್ಲದ ಕಾರಣ ತಿರಸ್ಕೃತಗೊಳಿಸಲಾಗಿತ್ತು. ಗುರುವಾರಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಆದರೆ, ಯಾರೊಬ್ಬರೂ ನಾಮಪತ್ರ ಹಿಂಪಡೆಯದೆ ಇದ್ದುದ್ದರಿಂದ ಕಣದಲ್ಲಿದ್ದ ಎಲ್ಲ 11 ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ.

69 ಲಕ್ಷ ಹೆಚ್ಚು ಮತ ಬಿದ್ದರೂ ಬಿಜೆಪಿ 63 ಸ್ಥಾನ ಕಳೆದುಕೊಂಡಿದ್ದು ಹೇಗೆ?

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೆ ಹೆಚ್ಚು 69 ಲಕ್ಷ ಮತಗಳನ್ನು ಪಡೆದಿದ್ದರೂ 63 ಸ್ಥಾನ ಕಳೆದುಕೊಂಡು ಬಹುಮತ ಪಡೆಯಲು ವಿಫಲವಾಗಿರುವುದು ಹೇಗೆ ಅಂತಿರಾ ಇಲ್ಲಿದೆ ನೋಡಿ ಲೆಕ್ಕಾಚಾರ!ಹೌದು, ಕೇಂದ್ರ ಚುನಾವಣಾ ಆಯೋಗ ಅಧಿಕೃತವಾಗಿ ಬಿಡುಗಡೆ ಮಾಡಿದ ಅಂಕಿ ಅಂಶದ ಪ್ರಕಾರ ಬಿಜೆಪಿ ಚುನಾವಣೆಯಲ್ಲಿ ಸೋಲುಂಡರೂ ಮತಗಳ ಲೆಕ್ಕಾಚಾರದಲ್ಲಿ 2019ರ ಚುನಾವಣೆಗೆ ಹೋಲಿಸಿದರೆ ಹೆಚ್ಚು ಮತಗಳನ್ನು ಪಡೆದಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ 2019ರಲ್ಲಿ ಬಿಜೆಪಿ 303 ಸ್ಥಾನಗಳಲ್ಲಿ ಗೆದ್ದಿತ್ತು. ಶೇ.37.3ರಷ್ಟು ಮತಗಳನ್ನು ಪಡೆದಿತ್ತು. 2024ರ ಚುನಾವಣೆಯಲ್ಲಿ ಶೇ,.36.6 ಮತ ಪಡೆದಿದ್ದು, ಶೇ.0.7ರಷ್ಟು ಮತಗಳನ್ನು ಕಳೆದುಕೊಂಡಿದೆ. ವಿಶೇಷ ಅಂದರೆ ಮತದಾನವಾದ ಪ್ರಮಾಣದಲ್ಲಿ ಶೇಕಡವಾರು ಹಂಚಿಕೆ ಲೆಕ್ಕ ಪರಿಗಣಿಸಲಾಗುತ್ತದೆ.ಶೇಕಡವಾರು ಮತಗಳ ಪ್ರಕಾರ ನೋಡಿದರೆ ಬಿಜೆಪಿ ಮತಗಳ ಪ್ರಮಾಣದಲ್ಲಿ ಕಡಿಮೆ ಆಗಿದೆ. ಆದರೆ ಮತಗಳನ್ನು ಲೆಕ್ಕಹಾಕಿದರೆ 2019ರ ಚುನಾವಣೆಯಲ್ಲಿ ಬಿಜೆಪಿ 22.0 ಕೋಟಿ ಮತಗಳನ್ನು ಪಡೆದಿತ್ತು. ಆದರೆ ಈ ಬಾರಿ 23.59 ಕೋಟಿ ಮತಗಳನ್ನು ಪಡೆದಿದೆ. ಅಂದರೆ ಹೆಚ್ಚುವರಿ 68.89 ಲಕ್ಷ ಮತಗಳನ್ನು ಪಡೆದಿದೆ.ಬಿಜೆಪಿ ಸುಮಾರು 70 ಲಕ್ಷ ಮತಗಳನ್ನು ಪಡೆದರೂ 63 ಸ್ಥಾನಗಳನ್ನು ಕಳೆದುಕೊಂಡು ಬಹುಮತ ಪಡೆಯಲು ವಿಫಲವಾಗಿದೆ. ಬಿಜೆಪಿ ಶೇ.0.7ರಷ್ಟು ಮತ ಕಳೆದುಕೊಂಡಿದ್ದರಿಂದ ಶೇ.11ರಷ್ಟು ಸ್ಥಾನಗಳನ್ನು ಹೇಗೆ ಕಳೆದುಕೊಂಡಿತು ಎಂಬುದು ಫಲಿತಾಂಶವೇ ಹೇಳುತ್ತದೆ.

Previous Post
ಲೋಕಸಭಾ ಚುನಾವಣೆ ‘ಮಾದರಿ ನೀತಿ ಸಂಹಿತೆ’ ವಾಪಾಸ್: ಚುನಾವಣಾ ಆಯೋಗ
Next Post
ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ

Recent News