ಶ್ರಮದಿಂದ ಬದುಕು ಕಟ್ಟಿಕೊಂಡ ಗಾಣಿಗ ಸಮುದಾಯ: ಡಿಸಿಎಂ ಡಿ.ಕೆ.ಶಿವಕುಮಾರ್

ಶ್ರಮದಿಂದ ಬದುಕು ಕಟ್ಟಿಕೊಂಡ ಗಾಣಿಗ ಸಮುದಾಯ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು, ಆ.6: “ದೀಪ ಉರಿಯುವಾಗ ಎಣ್ಣೆ, ಬತ್ತಿ ಏನೂ ಕಾಣುವುದಿಲ್ಲ ಕಾಣುವುದು ಬೆಳಕು ಮಾತ್ರ. ಗಾಣಿಗ ಸಮುದಾಯ ತಯಾರಿಸುವ ಎಣ್ಣೆ ದೀಪ, ಹಾಗೂ ಮನುಷ್ಯನನ್ನು ತಂಪಾಗಿಸಲು ತಲೆಗೂ ಬೇಕು. ಗಾಣಿಗ ಸಮುದಾಯ ಶ್ರಮದ ಮೂಲಕ ಬದುಕು ಕಟ್ಟಿಕೊಂಡಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯ ಪಟ್ಟರು.

ಯಜಮಾನ್ ಜನೋಪಕಾರಿ ದೊಡ್ಡಣ್ಣ ಶೆಟ್ಟಿ ಅವರ 103ನೇ ವಾರ್ಷಿಕ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು “ಯಾವುದೇ ಮನುಷ್ಯ ಇದೇ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಹರಕೆ ಹೊತ್ತಿರುವುದಿಲ್ಲ. ಹುಟ್ಟಿದ ನಂತರ ಜಾತ್ಯಾತೀತವಾಗಿ ಬದುಕಬೇಕು. ದೊಡ್ಡಣ್ಣ ಶೆಟ್ಟರು ಬೇದ ಭಾವ ಮಾಡದೆ ಬದುಕಿದ ಕಾರಣಕ್ಕೆ ಅವರನ್ನು ನೆನಸುತ್ತಿದ್ದೇವೆ. ನಿಮ್ಮ ವೃತ್ತಿ, ಸಮುದಾಯವನ್ನು ಉಳಿಸಿಕೊಳ್ಳಲು ಸಂಘಟಿತರಾಗಿ” ಎಂದರು.

“ದೊಡ್ಡಣ್ಣ ಶೆಟ್ಟರು ಬ್ರಿಟಿಷರ ಆಡಳಿತ ಅವಧಿಯಲ್ಲಿಯೇ ಬೆಂಗಳೂರು ಹೃದಯ ಭಾಗದಲ್ಲಿ ಧರ್ಮಾತ್ಮ ಸಂಸ್ಥೆ ಕಟ್ಟಿ ಸಮಾಜದ ಎಲ್ಲಾ ಸಮುದಾಯಗಳ ನೆರವಿಗೆ ನಿಂತ ಮಹಾನುಭಾವ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಖಚಿತ ಇದರ ನಡುವೆ ಏನನ್ನು ಗಳಿಸುತ್ತೇವೆ, ಸಾಧಿಸುತ್ತೇವೆ ಎನ್ನುವುದು ಮುಖ್ಯ. ದೊಡ್ಡಣ್ಣ ಶೆಟ್ಟರು ಗತಿಸಿಹೋಗಿ ನೂರು ವರ್ಷಗಳಾದರೂ ಅವರ ನೆನಪು ನಮ್ಮ ನಡುವೆಯಿದೆ” ಎಂದರು.

“ದೇವರು ಯಾರಿಗೆ ವರ, ಶಾಪ ಏನನ್ನೂ ಕೊಡುವುದಿಲ್ಲ. ಸಿಗುವ ಅವಕಾಶದಲ್ಲಿ ಉಪಕಾರ ಮಾಡಿ. ಅನ್ಯ ಕಾರ್ಯಗಳು ಇರುವ ಕಾರಣ ನಿಮಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ತುಳಿತಕ್ಕೆ ಒಳಗಾಗಿರುವ ಸಮಾಜವು ಹಿಂದುಳಿದಿದ್ದೇವೆ ಎನ್ನುವ ಚಿಂತೆ ಮಾಡಬಾರದು. ನಿಮ್ಮ ಸಮಸ್ಯೆಗಳನ್ನು ನಮಗೆ ತಿಳಿಸಿ ನಾವು ಬಗೆಹರಿಸುತ್ತೇವೆ” ಎಂದು ತಿಳಿಸಿದರು

Previous Post
ಮೈಸೂರಿನಲ್ಲಿ 600 ಕೋಟಿ ರೂ.ಗಳ ಹೊಸ ಹೂಡಿಕೆಯೊಂದಿಗೆ ಹೊಸ ಕಂಪೆನಿಗಳ ಸ್ಥಾಪನೆ, 5000 ಉದ್ಯೋಗ: ಸಚಿವ ಪ್ರಿಯಾಂಕ್ ಖರ್ಗೆ
Next Post
ಸ್ಥಾಪಿತ ಸರ್ಕಾರವನ್ನು ಉರುಳಿಸುವ ಹಿಂದೆ ವಿದೇಶಿ ಕೈವಾಡ ಇದಿಯೇ? ಸರ್ವಪಕ್ಷ ಸಭೆಯಲ್ಲಿ ರಾಹುಲ್ ಗಾಂಧಿ ಪ್ರಶ್ನೆ

Recent News