ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು

ಬೆಂಗಳೂರು:ಏ.28 ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಹಾಸನ ಮೂಲದ ನೊಂದ ಮಹಿಳೆಯೊಬ್ಬರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ತಂದೆ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಇಬ್ಬರ ವಿರುದ್ಧವೂ ದೂರು ನೀಡಿದ್ದು, ಇಬ್ಬರೂ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಹಿಳೆಯ ದೂರನ್ನು ಸ್ವೀಕರಿಸಿ ರಾಜ್ಯ ಮಹಿಳಾ ಆಯೋಗ ತನಿಖೆಗೆ ಮುಂದಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ

ವಾಟ್ಸಾಪ್ ಮೂಲಕ ದೂರಿನ ಪ್ರತಿಯನ್ನು ಕಳುಹಿಸಿಕೊಟ್ಟಿದ್ದಾರೆಕೇವಲ ಒಬ್ಬ ಸಂತ್ರಸ್ಥೆ ಮಾತ್ರ ನಮಗೆ ದೂರು ಕೊಟ್ಟಿರೋದು. ಉಳಿದಂತೆ ಬೇರೆ ಯಾರೂ ದೂರು ನೀಡಿಲ್ಲ. ಮಹಿಳಾ ಸಂಘಟನೆ, ಕೆಲ ಸಂಘಟನೆಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರಿನ ಮನವಿಯನ್ನು ನೀಡಿದ್ದರು. ಇದರ ಸೂಕ್ಷ್ಮತೆ ಅರಿತುಕೊಂಡು ಸಿಎಂ, ಗೃಹ ಸಚಿವರಿಗೆ, ಪೊಲೀಸ್ ಜನರಲ್‌ಗೆ ಪತ್ರ ಬರೆದಿದ್ದೆ. ಗುರುವಾರ ಸಂಜೆ ಎಲ್ಲರಿಗೂ ಪತ್ರ ಬರೆದಿದ್ದೆ. ಎಸ್‌ಐಟಿ (SIT) ರಚನೆ ಆಗಬೇಕು. ನ್ಯಾಯ ಸಿಗಬೇಕೆಂದು ಪ್ರಕರಣದ ಗಂಭೀರತೆಯನ್ನು ಪತ್ರದಲ್ಲಿ ಬರೆದಿದ್ದೆ. ಅಪರಾಧ ಮಾಡಿದವರಿಗೆ ಶಿಕ್ಷೆಯಾಗೋ ಭರವಸೆಯಿದೆ. ಎಂದು ತಿಳಿಸಿದರು.
ಒಬ್ಬ ಸಂತ್ರಸ್ಥೆ ಮಾತ್ರ ನಮ್ಮ ಸಂಪರ್ಕಕ್ಕೆ ಬಂದಿದ್ದಾರೆ. ಬೇರೆ ಯಾರೂ ನಮ್ಮ ಸಂಪರ್ಕಕ್ಕೆ ಬಂದಿಲ್ಲ. ನಾವೇ ಇತರೆ ಸಂತ್ರಸ್ಥರನ್ನು ಸಂಪರ್ಕ ಮಾಡೋದಿಲ್ಲ. ಸಂತ್ರಸ್ಥೆಯರು ತಾವಾಗಿ ತಾವೇ ಮುಂದೆ ಬಂದರೆ ಅವರ ಧ್ವನಿಯಾಗಿ ನಾವು ಇರುತ್ತೇವೆ. ಆರೋಪಿ ಸ್ಥಾನದಲ್ಲಿದ್ದವರಿಗೆ ನೋಟಿಸ್ ಕೊಡಬಹುದು. ಮಹಿಳಾ ಆಯೋಗಕ್ಕೆ ಕರೆಸಬಹುದು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು ಎಂದರು.

Previous Post
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಾನೇ ಅಭ್ಯರ್ಥಿ. ಇಲ್ಲಿ ಭರ್ಜರಿ ಬಹುಮತದಿಂದ ಕಾಂಗ್ರೆಸ್ ಗೆಲ್ಲಿಸಿ: ಸಿ.ಎಂ.ಸಿದ್ದರಾಮಯ್ಯ ಕರೆ
Next Post
ನಿಮಗೆ ವರ್ಷಕ್ಕೊಬ್ಬ ಪ್ರಧಾನಿ ಬೇಕೋ, ಓರ್ವ ವ್ಯಕ್ತಿ ಪಧಾನಿಯಾಗಬೇಕು: ‘ನಮೋ’ ಪ್ರಶ್ನೆ

Recent News