ಸದನಕ್ಕೆ ಸಚಿವರ ಗೈರು. ಸಭಾ ತ್ಯಾಗ ಮಾಡಿ ವಿಪಕ್ಷ ನಾಯಕರ ಆಕ್ರೋಶ!

ಸದನಕ್ಕೆ ಸಚಿವರ ಗೈರು. ಸಭಾ ತ್ಯಾಗ ಮಾಡಿ ವಿಪಕ್ಷ ನಾಯಕರ ಆಕ್ರೋಶ!

ಬೆಂಗಳೂರು : ವಿಧಾನಸಭೆಯ ಅಧಿವೇಶನದ ಕಲಾಪ ಆರಂಭದ ವೇಳೆ ಆಡಳಿತ ಪಕ್ಷದ ಕೆಲ ಸದಸ್ಯರು ಸರಿಯಾದ ಸಮಯಕ್ಕೆ ಬಾರದೇ ಸದನಕ್ಕೆ ಗೈರು ಆಗಿದ್ದನ್ನು ಖಂಡಿಸಿ ವಿಪಕ್ಷ ನಾಯಕರು ಸಿಡಿದೆದ್ದ ಪ್ರಸಂಗ ನಡೆದಿದೆ. ಸದನದ ಕಲಾಪ ಆರಂಭವಾದಾಗ ಮೊದಲ ಸಾಲಿನಲ್ಲಿ ಸಚಿವರೇ ಇಲ್ಲದ್ದನ್ನು ಕಂಡ ಪ್ರತಿಪಕ್ಷಗಳ ನಾಯಕರು, ಆಕ್ಷೇಪ ವ್ಯಕ್ತಪಡಿಸುವ ಮೂಲಕ ಕೆಲಕಾಲ ಸಭಾ ತ್ಯಾಗ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದರು.

ಈ ವೇಳೆ ಮಾತನಾಡಿದ ವಿಪಕ್ಷ ನಾಯಕರ ಇಷ್ಟೊಂದು ಹಣ ಖರ್ಚು ಮಾಡಿ ಸದನ ಏತಕ್ಕೆ ಮಾಡಬೇಕು. ಆಡಳಿತ ಪಕ್ಷದ ನಾಯಕರೇ ಇಲ್ಲವೆಂದ ಮೇಲೆ, ಇಲ್ಲಿ ಬಂದು ನಾವು ಯಾರನ್ನು ಪ್ರಶ್ನೆ ಮಾಡಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಅವರ ಬಳಿ ದೂರನ್ನಿತ್ತರು.

ಸದನದಲ್ಲಿ ಹೊಸ ನಿಯಮ ತಂದಿದ್ದೀರಿ..ಹೀಗಿರುವಾಗ ಆಡಳಿತ ಪಕ್ಷ ಇತರ ಸದಸ್ಯರಿಗೆ ಮಾದರಿಯಾಗಬೇಕು. ಇದು ಯಾವ ರೀತಿ ಮಾಡೆಲ್‌ ಆಗಿದ್ದೀರಿ ನೋಡಿ ಎಂದು ಗುಡುಗಿ ಸಭಾ ತ್ಯಾಗ ಮಾಡಿದರು. ಬಳಿಕ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.

Previous Post
ಮಾರಿಷಸ್‌ನಲ್ಲಿ ಭಾರತದ ಮೊದಲ ಸಾಗರೋತ್ತರ ಜನೌಷಧಿ ಕೇಂದ್ರ ಉದ್ಘಾಟಿಸಿದ ಜೈಶಂಕರ್
Next Post
ನಾಳೆಯೊಳಗೆ ಎಲ್ಲಾ ಅಭ್ಯರ್ಥಿಗಳ ‘ನೀಟ್ ಯುಜಿ ಫಲಿತಾಂಶ’ ಪ್ರಕಟಿಸಿ: NTAಗೆ ಸುಪ್ರೀಂ ಕೋರ್ಟ್ ನಿರ್ದೇಶನ

Recent News