ಸದಾ ನನ್ನ ಬೆಂಬಲ ಮಹಿಳೆಯರಿಗೆ: ಸ್ವಾತಿ ಮಲಿವಾಲ್ ಮೇಲಿನ ಹಲ್ಲೆಗೆ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ

ಸದಾ ನನ್ನ ಬೆಂಬಲ ಮಹಿಳೆಯರಿಗೆ: ಸ್ವಾತಿ ಮಲಿವಾಲ್ ಮೇಲಿನ ಹಲ್ಲೆಗೆ ಪ್ರಿಯಾಂಕಾ ಗಾಂಧಿ ಪ್ರತಿಕ್ರಿಯೆ

ನವದೆಹಲಿ, ಮೇ 16: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತರೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದೆ ಸ್ವಾತಿ ಮಲಿವಾಲ್ ಅವರೊಂದಿಗೆ ನಾನು ನಿಂತಿದ್ದೇನೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಗುರುವಾರ ಹೇಳಿದ್ದಾರೆ.

‘ಪಕ್ಷಗಳನ್ನು ಲೆಕ್ಕಿಸದೆ ಮಹಿಳೆಯರನ್ನು ಬೆಂಬಲಿಸುತ್ತೇನೆ’ ಎಂದು ಹೇಳಿದ ಪ್ರಿಯಾಂಕಾ, ‘ಎಎಪಿ ಈ ವಿಷಯವನ್ನು ಪರಿಹರಿಸುತ್ತದೆ ಮತ್ತು ಪರಿಹಾರವನ್ನು ಕಂಡುಕೊಳ್ಳುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು. ಎಎಪಿ ರಾಜ್ಯಸಭಾ ಸಂಸದೆ ಮಲಿವಾಲ್ ಅವರು ಇತ್ತೀಚೆಗೆ ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.

ಪ್ರಸ್ತುತ ನಾನು ಉತ್ತರ ಪ್ರದೇಶದಲ್ಲಿರುವುದರಿಂದ ಹೆಚ್ಚು ಗಮನಿಸಿಲ್ಲ, ಯಾವುದೇ ಮಹಿಳೆಯ ಮೇಲೆ ದೌರ್ಜನ್ಯ ನಡೆದರೆ ನಾನು ಮಹಿಳೆಯ ಪರವಾಗಿ ಮಾತ್ರ ಮಾತನಾಡುತ್ತೇನೆ. ಯಾವುದೇ ತಪ್ಪು ನಡೆದರೂ ನಾನು ಮಹಿಳೆಯ ಪರವಾಗಿ ನಿಲ್ಲುತ್ತೇನೆ. ಘಟನೆ ನಿಜವಾಗಿದ್ದರೆ, ಏನಾದರೂ ತಪ್ಪಾಗಿದ್ದರೆ, ನಾನು ಆ ಮಹಿಳೆಯೊಂದಿಗೆ ನಿಲ್ಲುತ್ತೇನೆ” ಎಂದು ಪ್ರತಿಪಾದಿಸಿದ ಅವರು, ಸ್ವಾತಿ ಮಲಿವಾಲ್ ನನ್ನೊಂದಿಗೆ ಮಾತನಾಡಲು ಬಯಸಿದರೆ, ನಾನು ಮಾತನಾಡುತ್ತೇನೆ” ಎಂದು ಹೇಳಿದರು.

ಈ ವಿಷಯ ಕೇಜ್ರಿವಾಲ್ ಅವರಿಗೆ ತಿಳಿದಿದ್ದರೆ, ಕೇಜ್ರಿವಾಲ್ ಅವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಸ್ವಾತಿ ಮಲಿವಾಲ್ ಅವರಿಗೆ ಸ್ವೀಕಾರಾರ್ಹವಾದ ಪರಿಹಾರವನ್ನು ಕೇಜ್ರಿವಾಲ್ ಅವರು ಕಂಡುಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಹತ್ರಾಸ್ ಮತ್ತು ಉನ್ನಾವೋ (ಗ್ಯಾಂಗ್ರೇಪ್) ಪ್ರಕರಣಗಳಲ್ಲಿ ಪಕ್ಷವು ಏನನ್ನೂ ಮಾಡದಿರುವಾಗ, ಬಿಜೆಪಿ ನಾಯಕರು ಈ ವಿಷಯದ ಬಗ್ಗೆ ಹೇಗೆ ಮಾತನಾಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ. ನಮ್ಮ ಮಹಿಳಾ ಕುಸ್ತಿಪಟುಗಳ ವಿಷಯದಲ್ಲಿ ಬಿಜೆಪಿ ಏನನ್ನೂ ಮಾಡಿಲ್ಲ ಎಂದು ಅವರು ಸ್ವಾತಿ ಮಲಿವಾಲ್ ವಿಚಾರದಲ್ಲಿ ಮಾತನಾಡುತ್ತಿರುವ ಬಿಜೆಪಿ ವಿರುದ್ಧ ಕಿಡಿಕಾರಿದರು.

ಸೋಮವಾರ ಬೆಳಗ್ಗೆ ನವದೆಹಲಿಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ತೆರಳಿದ ಮಲಿವಾಲ್, ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಕೇಜ್ರಿವಾಲ್ ಅವರ ವೈಯಕ್ತಿಕ ಸಿಬ್ಬಂದಿಯೊಬ್ಬರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಆದರೆ, ಆಕೆ ಔಪಚಾರಿಕವಾಗಿ ದೂರು ದಾಖಲಿಸಿಲ್ಲ. ಮಲಿವಾಲ್ ಅವರ ಆರೋಪದ ನಂತರ, ಹಿರಿಯ ಎಎಪಿ ನಾಯಕ ಸಂಜಯ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಗಳನ್ನು ಒಪ್ಪಿಕೊಂಡಿದ್ದು, ಕೇಜ್ರಿವಾಲ್ ಈ ವಿಷಯದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಸಾರ್ವಜನಿಕವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೇಜ್ರಿವಾಲ್ ಅವರನ್ನು ಗುರಿಯಾಗಿಸಿ ಬಿಜೆಪಿ, “ಅವರು ಮೌನವಾಗಿದ್ದಾರೆ, ಗೂಂಡಾನಂತೆ ವರ್ತಿಸುತ್ತಿದ್ದಾರೆ” ಎಂದು ಆರೋಪಿಸಿದರು. ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ದೂರಿನಲ್ಲಿ ಎಎಪಿ ಮುಖ್ಯಸ್ಥರು ಪ್ರಮುಖ “ಅಪರಾಧಿ” ಎಂದು ಹೇಳಿದ್ದಾರೆ. ಈ ಬೆಳವಣಿಗೆಗಳ ನಡುವೆ, ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ತಂಡ ಇಂದು ಮುಂಜಾನೆ ಮಲಿವಾಲ್ ಅವರ ಮನೆಗೆ ತಲುಪಿದೆ. ಮಲಿವಾಲ್ ಅವರ ಆರೋಪದ ಮೇಲೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡ್ಲ್ಯೂ) ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರಿಗೆ ಸಮನ್ಸ್ ನೀಡಿದೆ.

Previous Post
ಚುನಾವಣಾ ಪ್ರಚಾರಕ್ಕಾಗಿ ಕನ್ಹಯ್ಯಾ ಕುಮಾರ್ ಕ್ರೌಡ್‌ಫಂಡಿಂಗ್
Next Post
ಕೋರ್ಟ್‌ ಗಮನಕ್ಕೆ ಬಂದ ನಂತರ ಇಡಿ ಬಂಧಿಸುವಂತಿಲ್ಲ: ಸುಪ್ರೀಂ

Recent News