ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ನಾಪತ್ತೆ

ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ನಾಪತ್ತೆ

ಅಹ್ಮದಬಾದ್ : ಗುಜರಾತ್‌ನ ಪೋರಬಂದರ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಸಹಾಯಕ್ಕಾಗಿ ತೆರಳಿದ್ದ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಸಮುದ್ರದಲ್ಲಿ ಮುಳುಗಿದ್ದು, ಇಬ್ಬರು ಪೈಲಟ್‌ಗಳು ಮತ್ತು ಡೈವರ್ ಸೇರಿದಂತೆ ಮೂವರು ನಾಪತ್ತೆಯಾಗಿದ್ದಾರೆ. ಭಾರತೀಯ ಕೋಸ್ಟ್ ಗಾರ್ಡ್​ ಹೆಲಿಕಾಪ್ಟರ್ ಅರಬ್ಬಿ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡುತ್ತಿದ್ದ ಸಮಯದಲ್ಲಿ ಮುಳುಗಿದೆ ಎನ್ನಲಾಗಿದೆ.

ಹೆಲಿಕಾಪ್ಟರ್‌ನಲ್ಲಿ ನಾಲ್ವರು ಜನರಿದ್ದು, ಒಬ್ಬ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಅರಬ್ಬಿ ಸಮುದ್ರದಲ್ಲಿ ಹೆಲಿಕಾಪ್ಟರ್ ಅವಶೇಷಗಳೂ ಪತ್ತೆಯಾಗಿವೆ. ರಕ್ಷಿಸಲ್ಪಟ್ಟ ವ್ಯಕ್ತಿಯೂ ಡೈವರ್​ ಆಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಅರಬ್ಬಿ ಸಮುದ್ರದಲ್ಲಿ ಸಿಲುಕಿರುವ ಹಡಗಿನಿಂದ ಸಹಾಯಕ್ಕಾಗಿ ಸಂದೇಶ ಕಳುಹಿಸಿದಾಗ ಈ ಅವಘಡ ಸಂಭವಿಸಿದೆ ಎಂದು ಕೋಸ್ಟ್ ಗಾರ್ಡ್ ಹೇಳಿದೆ.

ನಾಪತ್ತೆಯಾಗಿರುವ ಇಬ್ಬರು ಪೈಲಟ್‌ಗಳು ಮತ್ತು ಡೈವರ್‌ಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಕೋಸ್ಟ್ ಗಾರ್ಡ್ ನಾಲ್ಕು ಹಡಗುಗಳು ಮತ್ತು ಎರಡು ವಿಮಾನಗಳನ್ನು ಶೋಧ ಕಾರ್ಯಾಚರಣೆಗೆ ನಿಯೋಜಿಸಿದೆ. ಮೂವರೂ ಶೀಘ್ರದಲ್ಲೇ ಪತ್ತೆಯಾಗುವ ನಿರೀಕ್ಷೆಯಿದೆ. ಸದ್ಯ ಗುಜರಾತ್ ನಲ್ಲಿ ಭಾರೀ ಮಳೆ ಅನಾಹುತ ಸೃಷ್ಟಿಸಿದೆ. ಇದರಿಂದಾಗಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾರತೀಯ ಕೋಸ್ಟ್ ಗಾರ್ಡ್ ಪೋರಬಂದರ್ ಮತ್ತು ದ್ವಾರಕಾದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇಲ್ಲಿ 33 ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಜನರನ್ನು ಸ್ಥಳಾಂತರಿಸಲು ಹೆಲಿಕಾಪ್ಟರ್ ಹಡಗನ್ನು ಸಮೀಪಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ. ಕೋಟ್ ಗಾರ್ಡ್ ಶೋಧ ಕಾರ್ಯಾಚರಣೆಗಾಗಿ ನಾಲ್ಕು ಹಡಗುಗಳು ಮತ್ತು ಎರಡು ವಿಮಾನಗಳನ್ನು ನಿಯೋಜಿಸಿದೆ.

 

Previous Post
ಭದ್ರತಾ ಪಡೆಗಳಿಂದ ಎನ್‌ಕೌಂಟರ್ ; 9 ನಕ್ಸಲೀಯರ ಹತ್ಯೆ
Next Post
ಸಿಎಂ ಕೇಜ್ರಿವಾಲ್ ಸೇರಿ ಆರು ಮಂದಿಗೆ ಕೋರ್ಟ್ ಸಮನ್ಸ್

Recent News