ಸರ್ಕಾರದಿಂದ ನೀತಿ ಸಂಹಿತೆ ಉಲ್ಲಂಘನೆ- ಚುನಾವಣಾ ಆಯೋಗದಿಂದ ಚಾಟಿ

ಸರ್ಕಾರದಿಂದ ನೀತಿ ಸಂಹಿತೆ ಉಲ್ಲಂಘನೆಚುನಾವಣಾ ಆಯೋಗದಿಂದ ಚಾಟಿ

ಬೆಂಗಳೂರು: ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಜ್ಯ ಸರ್ಕಾರ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸಭೆ ಮತ್ತು ವಿಡಿಯೋ ಸಂವಾದ ನಡೆಸಿರುವುದಕ್ಕೆ ರಾಜ್ಯ ಚುನಾವಣಾ ಆಯೋಗ ಚಾಟಿ ಬೀಸಿದೆ.ಲೋಕಸಭಾ ಚುನಾವಣೆ ಹಾಗೂ ವಿಧಾನಪರಿಷತ್ ಚುನಾವಣೆ ಹಿನ್ನಲೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ.ಆದರೂ, ಇತ್ತೀಚಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಬಲಗಾಲದ ಕುರಿತು ಸಭೆ ನಡೆಸಿದ್ದರು.ಈ ಕುರಿತು ಮಾಹಿತಿ ಪಡೆದಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕಮಾರ್ ಮೀನಾ ಅವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ. ತುರ್ತು ವಿಚಾರಗಳನ್ನು ಹೊರತುಪಡಿಸಿ ಇನ್ನೂಳಿದ ವಿಚಾರಗಳ ಕುರಿತು ಸಭೆ ಮತ್ತು ವಿಡಿಯೋ ಸಂವಾದ ನಡೆಸಬಾರದು ಎಂದು ತಾಕೀತು ಮಾಡಿದ್ದಾರೆ. ತುರ್ತು ಅಗತ್ಯವಿದ್ದರೆ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅನುಮತಿ ಪಡೆದು ಸಭೆ ಹಾಗೂ ವಿಡಿಯೋ ಸಂವಾದ ನಡೆಸಬೇಕು ಎಂದು ಸೂಚಿಸಿದ್ದಾರೆ.

Previous Post
ಪಠ್ಯಪುಸ್ತಕದಲ್ಲಿ ಮುಖ್ಯ ಬದಲಾವಣೆ ಇಲ್ಲ: ಸಚಿವ ಮಧು ಬಂಗಾರಪ್ಪ
Next Post
ಕಾನೂನುಗಳನ್ನೇ ಮುಗಿಸಿಬಿಡಲಿರುವ ಮೋದಿ: ರಾಹುಲ್ ಗಾಂಧಿ

Recent News