ಸರ್ಕಾರಿ ಯೋಜನೆಗಳ ಪ್ರಚಾರ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಟಿಎಂಸಿ ದೂರು

ಸರ್ಕಾರಿ ಯೋಜನೆಗಳ ಪ್ರಚಾರ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಟಿಎಂಸಿ ದೂರು

ನವದೆಹಲಿ, ಮಾ. 19: ಪ್ರಚಾರದಲ್ಲಿ ಕೇಂದ್ರ ಸರ್ಕಾರದ ಅನುದಾನಗಳನ್ನು ಬಳಸಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ) ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಟಿಎಂಸಿ ರಾಜ್ಯಸಭಾ ಸದಸ್ಯ ಡೆರಿಕ್ ಒಬ್ರಿಯಾನ್, ವಾರಣಾಸಿ ಕ್ಷೇತ್ರದ ಅಭ್ಯರ್ಥಿಯು ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 16ರಂದು ಸರ್ಕಾರಿ ಕಾರ್ಯಕ್ರಮಗಳನ್ನು ಸಂದೇಶದ ಮೂಲಕ ಮತದಾರರಿಗೆ ತಲುಪಿಸಿದ್ದಾರೆ. ಇದು ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ನಂತರ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.

ಮೋದಿ ಅವರು ಉದ್ದೇಶಪೂರ್ವಕವಾಗಿ ಮಾರ್ಚ್‌ 15ರಂದು ಪತ್ರದ ಮೂಲಕ ಮತದಾರರಿಗೆ ಸಂದೇಶವನ್ನು ಬರೆದಿದ್ದಾರೆ ಎಂದು ಟಿಎಂಸಿ ನಾಯಕ ದೂರಿದ್ದಾರೆ. ಪ್ರಧಾನಮಂತ್ರಿ ಕಚೇರಿಯನ್ನು ಬಳಸಿಕೊಂಡು ಬಿಜೆಪಿಯು ಸರ್ಕಾರಿ ಬಿಕ್ಕಸದ ವೆಚ್ಚದಲ್ಲಿ ಭಾರತ ಸರ್ಕಾರದ ಹೆಸರಿನಲ್ಲಿ ಪತ್ರವನ್ನು ವಿತರಿಸಲಾಗಿದೆ. ದೊಡ್ಡ ಸಂಖ್ಯೆಯ ಪತ್ರಗಳ ಪ್ರಸರಣದಲ್ಲಿ ಬಿಜೆಪಿ ಹಾಗೂ ಬಿಜೆಪಿ ಪರವಾಗಿ ಮತದಾರರಿಗೆ ಮನವಿ ಮಾಡಲಾಗಿದೆ. ಇದು ಕೇಂದ್ರ ಚುನಾವಣಾ ಆಯೋಗದ ನಿಯಮವನ್ನು ಉಲ್ಲಂಘಿಸುತ್ತದೆ ಎಂದು ಓಬ್ರಿಯಾನ್ ದೂರಿನಲ್ಲಿ ತಿಳಿಸಿದ್ದಾರೆ.
ಭವಿಷ್ಯತ್ತಿನ ಪ್ರಚಾರ ಸಭೆಗಳಲ್ಲಿ ಸರ್ಕಾರಿ ಬೊಕ್ಕಸದ ವೆಚ್ಚದಲ್ಲಿ ಪತ್ರಗಳನ್ನು ರವಾನಿಸದಂತೆ ತಡೆಯಲು ಚುನಾವಣಾ ಆಯೋಗವು ಬಿಜೆಪಿ ಹಾಗೂ ಅವರ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂದು ಓಬ್ರಿಯಾನ್ ಆಗ್ರಹಿಸಿದ್ದಾರೆ. ಪ್ರಧಾನಮಂತ್ರಿ ಪತ್ರವನ್ನು ಮತದಾರರಿಗೆ ತಲುಪಿಸಿರುವ ವೆಚ್ಚವನ್ನು ಸಹ ಬಿಜೆಪಿ ಮತ್ತು ಮೋದಿ ಅವರ ಚುನಾವಣಾ ಆಯೋಗ ನಿಗದಿಪಡಿಸಿರುವ ಚುನಾವಣಾ ವೆಚ್ಚಕ್ಕೆ ಸೇರಿಸಬೇಕೆಂದು ಓಬ್ರಿಯಾನ್‌ ತಿಳಿಸಿದ್ದಾರೆ.
ಓಬ್ರಿಯಾನ್‌ ಅವರ ಆರೋಪವನ್ನು ಅಲ್ಲಗಳೆದಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸಮಿಕ್ ಬಟ್ಟಾಚಾರ್ಯ, ಪ್ರಧಾನಮಂತ್ರಿ ಕಚೇರಿ ಮಾದರಿ ನೀತಿ ಸಂಹಿತೆಯ ಯಾವುದೇ ಉಲ್ಲಂಘನೆಗಳನ್ನು ಮಾಡಿಲ್ಲ. ಅವರು ತಮ್ಮ ಸುಳ್ಳುಗಳನ್ನು ಇಟ್ಟುಕೊಂಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.

Previous Post
ತೆಲಂಗಾಣದ ನೂತನ ರಾಜ್ಯಪಾಲರಾಗಿ ಸಿಪಿ ರಾಧಾಕೃಷ್ಣನ್ ನೇಮಕ
Next Post
ಸಿಎಎಗೆ ತಡೆ ವಿಚಾರ: 3 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ

Recent News