ನವದೆಹಲಿ, ಮೇ 8: ನ್ಯಾಯಂಗ ಬಂಧನದಲ್ಲಿರುವ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಸಲ್ಲಿಸಿರುವ ಜಾಮೀನು ಅರ್ಜಿಗೆ ಪ್ರತಿಕ್ರಿಯಿಸಲು ಒಂದು ವಾರದ ಸಮಯ ಬೇಕು ಎಂದು ಇಡಿ ಪರ ವಕೀಲರು ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಜಾಮೀನು ಅರ್ಜಿಯ ವಿಚಾರಣೆ ವೇಳೆ ಇದೇ ಪ್ರಕರಣದ ಪ್ರತ್ಯೇಕ ಆರೋಪಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ವ್ಯಸ್ಥವಾಗಿರುವ ಹಿನ್ನಲೆ ಸಮಯ ಬೇಕು ಎಂದು ತಿಳಿಸಿದೆ. ಹೈಕೋರ್ಟ್‌ನಲ್ಲಿ ಮನೀಶ್ ಸಿಸೋಡಿಯಾ ಪರವಾಗಿ ವಾದ ಮಂಡಿಸಿದ ವಕೀಲ ವಿವೇಕ್ ಜೈನ್ ಇಡಿ-ಸಿಬಿಐ ಬೇಡಿಕೆಯನ್ನು ವಿರೋಧಿಸಿದರು. ಆದರೆ ಇದಕ್ಕೆ ಮನೀಶ್ ಸಿಸೋಡಿಯಾ ಪರ ವಕೀಲರು ವಿರೋಧಿಸಿದರು. ಸುಧೀರ್ಘ ಅವಧಿಯಿಂದ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದೆ, ಇನ್ನು ತನಿಖೆ ಅಂತ್ಯವಾಗಿಲ್ಲ ಎಂದು ಆರೋಪಿಸಿದರು.
ಅಂತಿಮವಾಗಿ ಹೈಕೋರ್ಟ್ ವಾರದ ಬದಲು ನಾಲ್ಕು ದಿನಗಳ ಗಡವು ನೀಡಿ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿದ್ದು ಮೇ 13 ಕ್ಕೆ ವಿಚಾರಣೆ ಮುಂದೂಡಲಾಗಿದೆ. ಎರಡನೇ ಸಾಮಾನ್ಯ ಜಾಮೀನು ಅರ್ಜಿಯನ್ನು ರೋಸ್ ಅವೆನ್ಯೂ ಕೋರ್ಟ್ ವಜಾ ಮಾಡಿದ ಹಿನ್ನಲೆ ಸಿಸೋಡಿಯಾ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿದ್ದಾರೆ.