ಸೀಟು ಹಂಚಿಕೆ ಬೆನ್ನಲೆ ದೆಹಲಿಯಲ್ಲಿ ಅಭ್ಯರ್ಥಿಗಳ ಹೆಸರು ಘೋಷಿಸಿದ ಆಪ್ ಗೆಲುವಿನ ಮಾನದಂಡ ಹಾಲಿ ಶಾಸಕರಿಗೆ ಮಣೆ

ಸೀಟು ಹಂಚಿಕೆ ಬೆನ್ನಲೆ ದೆಹಲಿಯಲ್ಲಿ ಅಭ್ಯರ್ಥಿಗಳ ಹೆಸರು ಘೋಷಿಸಿದ ಆಪ್ ಗೆಲುವಿನ ಮಾನದಂಡ ಹಾಲಿ ಶಾಸಕರಿಗೆ ಮಣೆ

ನವದೆಹಲಿ : ಮುಂಬರುವ ಲೋಕಸಭೆ ಚುನಾವಣೆಗೆ ಸೀಟು‌ ಹಂಚಿಕೆ ಅಂತಿಮವಾಗುತ್ತಿದ್ದಂತೆ ದೆಹಲಿಯಲ್ಲಿ ನಾಲ್ಕು ಕ್ಷೇತ್ರಗಳಿಗೆ ಆಪ್ ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಈ ಪೈಕಿ ಮೂವರು ಹಾಲಿ ಶಾಸಕರಿಗೆ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯ ಬಳಿಕ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.

ನವದೆಹಲಿ ಕ್ಷೇತ್ರಕ್ಕೆ ಮಾಳವೀಯ ನಗರ ಕ್ಷೇತ್ರದಿಂದ ಹಾಲಿ ಶಾಸಕರಾಗಿರುವ ಸೋಮನಾಥ್ ಭಾರ್ತಿ, ಪಶ್ಚಿಮ ಕ್ಷೇತ್ರಕ್ಕೆ ಮಹಾಬಲ್ ಮಿಶ್ರಾ. ಕೊಂಡ್ಲಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಕುಲದೀಪ್ ಕುಮಾರ್ ಅವರನ್ನು ಪೂರ್ವದಿಂದ, ತುಘಲಕಾಬಾದ್‌ನಿಂದ ಹಾಲಿ ಶಾಸಕರಾಗಿರುವ ಸಾಹಿರಾಮ್ ಅವರನ್ನು ದಕ್ಷಿಣ ದೆಹಲಿಯಿಂದ ಅಭ್ಯರ್ಥಿಗಳಾಗಿದೆ ಘೋಷಿಸಿದೆ.

2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ದೆಹಲಿಯ ಎಲ್ಲಾ ಏಳು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದಿದ್ದರಿಂದ ಈ ಬಾರಿ ಬಿಜೆಪಿ ಕಟ್ಟಿಹಾಕಲು ಇಂಡಿಯಾ ಮೈತ್ರಿಕೂಟದ ಭಾಗವಾಗಿ ಕಾಂಗ್ರೇಸ್ ಆಪ್ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೇಸ್ ಮೂರು ಸ್ಥಾನಗಳಲ್ಲಿ, ಆಪ್ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ‌.

ಹರ್ಯಾಣದ ಕುರುಕ್ಷೇತ್ರದಿಂದ ಸ್ಪರ್ಧಿಸಲು ಆಮ್ ಆದ್ಮಿ ಪಕ್ಷ ತನ್ನ ಒಬ್ಬ ಅಭ್ಯರ್ಥಿ ಸುಶೀಲ್ ಗುಪ್ತಾ ಅವರನ್ನು ಕಣಕ್ಕಿಳಿಸಿದೆ. ದೆಹಲಿಯ ಜೊತೆಗೆ ಎಎಪಿ ಮತ್ತು ಕಾಂಗ್ರೆಸ್ ಹರ್ಯಾಣ, ಗುಜರಾತ್, ಚಂಡೀಗಢ ಮತ್ತು ಗೋವಾದಲ್ಲಿ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿವೆ. ಆದಾಗ್ಯೂ, ಭಾರತ ಬ್ಲಾಕ್ ಮಿತ್ರಪಕ್ಷಗಳು ಪಂಜಾಬ್‌ನಲ್ಲಿ ಸೀಟು ಹಂಚಿಕೆ ಒಪ್ಪಂದವನ್ನು ರೂಪಿಸಲು ಸಾಧ್ಯವಾಗಲಿಲ್ಲ.

ಪಂಜಾಬ್‌ನ ಎಎಪಿ ಎಲ್ಲಾ 13 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಮೊದಲೇ ಹೇಳಿತ್ತು. ಪಂಜಾಬ್‌ನಲ್ಲಿ ಏಕಾಂಗಿಯಾಗಲಿರುವ ಆಪ್‌ನ ಮುಖಗಳ ಕುರಿತು ಮಾತನಾಡಿದ ಎಎಪಿ ನಾಯಕ ಮತ್ತು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಅವರು, ಪಂಜಾಬ್‌ನಲ್ಲಿ ಲೋಕಸಭಾ ಅಭ್ಯರ್ಥಿಗಳ (ಎಎಪಿ) ಹೆಸರನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

Previous Post
ಪತಂಜಲಿ ಆಯುರ್ವೇದ ಸಂಸ್ಥೆಗೆ ಸುಪ್ರೀಂಕೋರ್ಟ್ ತರಾಟೆ
Next Post
ಆಂಧ್ರ ಪ್ರದೇಶದಲ್ಲಿ 8 ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್

Recent News