ಸುನಕ್-ಸ್ಟಾರ್ಮರ್ ದೇಗುಲ ಭೇಟಿ: ಹಿಂದೂಗಳ ಮತಯಾಚನೆ

ಸುನಕ್-ಸ್ಟಾರ್ಮರ್ ದೇಗುಲ ಭೇಟಿ: ಹಿಂದೂಗಳ ಮತಯಾಚನೆ

ಲಂಡನ್‌: ಬ್ರಿಟನ್‌ನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಇಲ್ಲಿರುವ ಹಿಂದೂ ಮತದಾರರನ್ನು ಆಕರ್ಷಿಸಲು ರಾಜಕೀಯ ನಾಯಕರು ದೇವಸ್ಥಾನಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.

ಈ ವಿಚಾರದಲ್ಲಿ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ಮತ್ತು ವಿರೋಧ ಪಕ್ಷವಾದ ಲೇಬರ್ ಪಾರ್ಟಿಯ ನಾಯಕ ಕೀರ್ ಸ್ಟಾರ್ಮರ್ ಪೈಪೋಟಿಗೆ ಬಿದ್ದಿದ್ದಾರೆ.

ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರಕ್ಕೆ ಭೇಟಿ ನೀಡಿ ಹಿಂದೂಗಳ ಮೌಲ್ಯಗಳು ಹಾಗೂ ಕನ್ಸರ್ವೇಟಿವ್ ಪಕ್ಷದ ಮೌಲ್ಯಗಳು ಒಂದೇ ಎಂದು ಹೇಳಿ ‘ಸಮುದಾಯದಲ್ಲಿ ತಾನೂ ಒಬ್ಬ’ ಎನ್ನುವ ಭಾವನೆ ಮೂಡಿಸಲು ಪ್ರಯತ್ನಿಸಿದ್ದಾರೆ.

ಕೀರ್ ಸ್ಟಾರ್ಮರ್ ಕಿಂಗ್ಸ್‌ಬರಿಯ ಸ್ವಾಮಿನಾರಾಯಣ ದೇವಾಲಯಕ್ಕೆ ಭೇಟಿ ಕೊಟ್ಟು, ಭಾರತದೊಂದಿಗೆ ಉತ್ತಮ ಸಂಬಂಧ ರೂಪಿಸುವ ಭರವಸೆ ನೀಡಿದ್ದಾರೆ. ಜತೆಗೆ ‘ಬ್ರಿಟನ್‌ನಲ್ಲಿ ಹಿಂದೂಫೋಬಿಯಾಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳುವ ಮೂಲಕ ಹಿಂದೂಗಳನ್ನು ಮನಸ್ಸು ಗೆಲ್ಲಲು ಪ್ರಯತ್ನಿಸಿದ್ದಾರೆ.

2021ರ ಜನಗಣತಿಯ ಪ್ರಕಾರ, ಬ್ರಿಟನ್‌ನಲ್ಲಿ ಸುಮಾರು 10 ಲಕ್ಷ ಹಿಂದೂಗಳಿದ್ದು, ಮತದಾರರ ಪೈಕಿ ಗಮನಾರ್ಹ ಸಂಖ್ಯೆಯೆನಿಸಿಕೊಂಡಿದ್ದಾರೆ.

Previous Post
ಕತಾರ್‌ಗೆ ಸಚಿವ ಜೈಶಂಕರ್ ಭೇಟಿ: ದ್ವಿಪಕ್ಷೀಯ ಸಂಬಂಧ ವೃದ್ಧಿ ಭರವಸೆ
Next Post
ಕನ್ನಡ ಚಲನಚಿತ್ರಗಳ ಬೆಳವಣಿಗೆಗೆ ಸರ್ಕಾರದಿಂದ ಎಲ್ಲಾ ರೀತಿಯ ಸಹಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ

Recent News