Widespread outrage against social media influencer Rajat Dalal

ಸೋಶಿಯಲ್ ಮೀಡಿಯಾ ಇನ್ಫುಲೇನ್ಸರ್ ರಜತ್ ದಲಾಲ್ ವಿರುದ್ಧ ವ್ಯಾಪಕ‌ ಆಕ್ರೋಶ

ನವದೆಹಲಿ : ಜನನಿಬಿಡ ರಸ್ತೆಯಲ್ಲಿ ಎಸ್‌ಯುವಿ ಕಾರ್ ಬಳಸಿ ಬೈಕ್ ಸವಾರರ ಮೇಲೆ ಅಪಘಾತ ನಡೆಸಿದ ಸೋಶಿಯಲ್ ಮೀಡಿಯಾ ಇನ್ಫುಲೇನ್ಸರ್ ರಜತ್ ದಲಾಲ್ ವಿರುದ್ಧ ವ್ಯಾಪಕ‌ ಆಕ್ರೋಶ ವ್ಯಕ್ತವಾಗಿದೆ. ಎನ್‌ಎಚ್‌ಪಿಸಿ ಮೆಟ್ರೋ ನಿಲ್ದಾಣದ ಬಳಿ ಚಿತ್ರೀಕರಿಸಲಾದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿದೆ.  ವಿವಾದಾತ್ಮಕ ಮತ್ತು ಪ್ರಚೋದನಕಾರಿ ವಿಷಯಕ್ಕೆ ಹೆಸರುವಾಸಿಯಾಗಿರುವ ರಜತ್ ದಲಾಲ್ ಹೆದ್ದಾರಿಯಲ್ಲಿ ಗಂಟೆಗೆ 140 ಕಿಮೀ ವೇಗದಲ್ಲಿ ಕಾರ್ ಚಾಲನೆ ಮಾಡಿದ್ದಾರೆ. ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ಪಕ್ಕದಲ್ಲಿ ಕುಳಿತಿರುವ ಮಹಿಳೆಯೊಬ್ಬರು ಎಚ್ಚರಿಕೆ ನೀಡಿದರೂ, ದಲಾಲ್ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ. ವೀಡಿಯೊದಲ್ಲಿ ಮಹಿಳೆ ಗಾಬರಿಗೊಂಡು, ಸರ್, ಬೈಕ್ ಸವಾರ ಕಾರು ತಗುಲಿ ಕೆಳಗೆ ಬಿದ್ದನು, ದಯವಿಟ್ಟು ಹೀಗೆ ಮಾಡಬೇಡಿ ಎಂದರೆ ಅವರು ಕೆಳಗೆ ಬಿದ್ದರೇ ಬೀಳಲಿ ಬಿಡಿ, ಅದೇನು ದೊಡ್ಡ ವಿಷಯವಲ್ಲ. ಇದು ನನ್ನ ದಿನಚರಿ ಎಂದು ಹೇಳುತ್ತಾರೆ.  ಹಿಂದಿನ ಸೀಟಿನಲ್ಲಿ ಪ್ರಯಾಣಿಕನೊಬ್ಬ ಚಿತ್ರೀಕರಿಸಿದ ಆಘಾತಕಾರಿ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ರಜತ್ ದಲಾಲ್ ಬಂಧನಕ್ಕೆ ಒತ್ತಾಯ ಕೇಳಿ ಬಂದಿದೆ. ಅದಾಗ್ಯೂ ಪೊಲೀಸರು ಈವರೆಗೂ ಯಾವುದೇ ದೂರು ದಾಖಲಿಸಿಲ್ಲ. ಎಕ್ಸ್ ನಲ್ಲಿ ಈ ಬಗ್ಗೆ ಹೆಚ್ಚು ಚರ್ಚೆ ಆಗ್ತಿದ್ದಂತೆ ಮಾಹಿತಿ ನೀಡುವಂತೆ ಫರಿದಬಾದ್ ಪೊಲೀಸರು ಮಾಹಿತಿ ಕೋರಿದ್ದಾರೆ.

Previous Post
ನವೆಂಬರ್ 11 ರ ಬಳಿಕ ವಿಸ್ತಾರ ಫ್ಲೈಟ್ ಬುಕ್ಕಿಂಗ್ ಇಲ್ಲ
Next Post
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್​ಗೆ ‘ರಾಮ್ ಕೋವಿಡ್’ ಎಂದ ಕಂಗನಾ ರಣಾವತ್

Recent News