ಸ್ಪೀಕರ್ ಆಯ್ಕೆ ಕಸರತ್ತು, ಮೋದಿ ನಿರ್ಧಾರಕ್ಕೆ ಎನ್‌ಡಿಎ ನಾಯಕರ ಬೆಂಬಲ?

ಸ್ಪೀಕರ್ ಆಯ್ಕೆ ಕಸರತ್ತು, ಮೋದಿ ನಿರ್ಧಾರಕ್ಕೆ ಎನ್‌ಡಿಎ ನಾಯಕರ ಬೆಂಬಲ?

ನವದೆಹಲಿ : ಜೂನ್ 24 ರಿಂದ ಲೋಕಸಭೆಯ ಮೊದಲ ಅಧಿವೇಶದ ಆರಂಭವಾಗುತ್ತಿದ್ದು ಈ ನಡುವೆ ಸ್ಪೀಕರ್ ಆಯ್ಕೆ ಕಸರತ್ತು ಜೋರಾಗಿದೆ. ಸ್ಪೀಕರ್ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕರು ಮೈತ್ರಿ ನಾಯಕರ ಜೊತೆಗೆ ಮಾತುಕತೆ ನಡೆಸುತ್ತಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರಕ್ಕೆ ಬದ್ಧ ಎಂದು ಎನ್‌ಡಿಎ ನಾಯಕರು ತಿಳಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಸ್ಪೀಕರ್ ಹುದ್ದೆಯ ಅಭ್ಯರ್ಥಿ ಆಯ್ಕೆಗಾಗಿ ಸಲಹೆಗಳನ್ನು ಪಡೆಯಲು ಬಿಜೆಪಿ ಮಿತ್ರಪಕ್ಷಗಳ ಮಾತುಕತೆ ನಡೆಸಿತು. ಆದಾಗ್ಯೂ, ಹೆಚ್ಚಿನ ಮಿತ್ರಪಕ್ಷಗಳು ನಿರ್ದಿಷ್ಟ ವ್ಯಕ್ತಿ ಅಥವಾ ಹೆಸರನ್ನು ಆಯ್ಕೆ ಮಾಡಿಲ್ಲ. ನರೇಂದ್ರ ಮೋದಿ ಅವರ ನಿರ್ಧಾರಕ್ಕೆ ಎನ್‌ಡಿಎ ನಾಯಕರು ಸಮಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಿರಿಯ ಸಂಸದರನ್ನು ಒಳಗೊಂಡಿರುವ ಕೆಲವು ಮಿತ್ರಪಕ್ಷಗಳು ಒಮ್ಮತವನ್ನು ಪಡೆಯಬಹುದಾದ ಅಭ್ಯರ್ಥಿಯನ್ನು ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿಗೆ ಮನವಿ ಮಾಡಿದೆ ಎಂದು ತಿಳಿದು ಬಂದಿದೆ.

ಉಪಸಭಾಪತಿ ಸ್ಥಾನವನ್ನು ಮೈತ್ರಿಕೂಟದ ಪಾಲುದಾರರೊಬ್ಬರಿಗೆ ನೀಡಲು ಉತ್ಸುಕರಾಗಿದ್ದೇವೆ ಎಂದು ಬಿಜೆಪಿ ವರಿಷ್ಠರು ಮೈತ್ರಿ ಪಾಲುದಾರರಿಗೆ ತಿಳಿಸಿದ್ದಾರೆ. ಆದರೆ ಪ್ರತಿಪಕ್ಷಗಳು ಈ ಹುದ್ದೆ ಮೇಲೆ ಕಣ್ಣಿಟ್ಟಿದ್ದು ಹಕ್ಕು ಪ್ರತಿಪಾದಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಸಂಸತ್ತಿನ ವಿಶೇಷ ಅಧಿವೇಶನವು ಜೂನ್ 24 ರಂದು ಪ್ರಾರಂಭವಾಗಲಿದೆ. ಈ ಅಧಿವೇಶನವು ಪ್ರಾಥಮಿಕವಾಗಿ ಲೋಕಸಭೆಯಲ್ಲಿ ಸಂಸತ್ತಿನ ಎಲ್ಲಾ ಚುನಾಯಿತ ಸದಸ್ಯರಿಗೆ ಪ್ರಮಾಣ ವಚನ ಬೊಧಿಸಲಾಗುವುದು. ಜೂನ್ 26 ರಂದು ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದೆ. ಪ್ರಸ್ತುತ ಓಂ ಬಿರ್ಲಾ ಅವರು ಕಳೆದ ಐದು ವರ್ಷಗಳಿಂದ ಲೋಕಸಭಾ ಸ್ಪೀಕರ್ ಕಚೇರಿಯಲ್ಲಿದ್ದಾರೆ.

Previous Post
ರಾಹುಲ್ ಗಾಂಧಿ ಜನ್ಮದಿನ ಹಿನ್ನಲೆ ಯೂಥ್ ಕಾಂಗ್ರೇಸ್‌ನಿಂದ ನಿರ್ಗತಿಕರಿಗೆ ಕೂಲರ್ ವಿತರಣೆ
Next Post
ನಿಮ್ಮದು ಸರ್ಕಾರಿ ನಕ್ಸಲಿಸಂ; ಪಿಎಂ ಮೋದಿ, ಸಿಎಂ ಶಿಂಧೆ ವಿರುದ್ಧ ಉದ್ಧವ್ ಠಾಕ್ರೆ ಆಕ್ರೋಶ

Recent News