ಸ್ವಾತಂತ್ರ್ಯವು ಅತ್ಯಂತ ಮಹತ್ವದ್ದಾಗಿದೆ, ನಾವು ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಕೇಜ್ರಿವಾಲ್ ಪ್ರಕರಣದಲ್ಲಿ ಸುಪ್ರೀಕೋರ್ಟ್ ಅಭಿಪ್ರಾಯ
ನವದೆಹಲಿ : ಹೊಸ ಅಬಕಾರಿ ನೀತಿಯಲ್ಲಿ ತಮ್ಮ ಬಂಧನದ ಸಮಯವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆ ವೇಳೆಗೆ ಐದು ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದವಾಗಿ ಬರುವಂತೆ ಇಡಿ ಪರ ವಕೀಲರಿಗೆ ಸೂಚನೆ ನೀಡಿದೆ.
ಪ್ರಕರಣ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ, ಪ್ರಕರಣದಲ್ಲಿ ಕೇಜ್ರಿವಾಲ್ ಹೇಗೆ ಸಂಬಂಧ ಹೊಂದಿದ್ದಾರೆ. ಮನೀಶ್ ಸಿಸೋಡಿಯಾ ಪ್ರಕರಣದಲ್ಲಿ ಎರಡು ಭಾಗಗಳಿದೆ ಆ ಪೈಕಿ ಒಂದಿ ಅವರ ಪರವಾಗಿ ಮತ್ತೊಂದು ಅವರ ವಿರುದ್ಧವಾಗಿದೆ ಇದರ ಯಾವ ಭಾಗದಲ್ಲೊ ಅರವಿಂದ್ ಕೇಜ್ರಿವಾಲ್ ಇದ್ದಾರೆ ಎನ್ನುವುದು ಉತ್ತರಿಸಬೇಕು ಎಂದು ಹೇಳಿದೆ.
ಮುಂದುವರಿದು, ಜಾಮೀನಿಗೆ ಅರ್ಜಿ ಸಲ್ಲಿಸುವ ಬದಲು ಕೇಜ್ರಿವಾಲ್ ಬಂಧನ ಮತ್ತು ರಿಮಾಂಡ್ ವಿರುದ್ಧ ಬರುತ್ತಿರುವ ಕಾರಣ ಸೆಕ್ಷನ್ 19 PMLA ಅನ್ನು ಹೇಗೆ ಅರ್ಥೈಸಬೇಕು? ವಿಶೇಷವಾಗಿ ಸೆಕ್ಷನ್ 8 ತೀರ್ಪು ಪ್ರಕ್ರಿಯೆಗೆ 365 ದಿನಗಳ ಗರಿಷ್ಠ ಸಮಯದ ಮಿತಿಯನ್ನು ಸೂಚಿಸುತ್ತದೆ. ಸ್ವಾತಂತ್ರ್ಯವು ಅತ್ಯಂತ ಮಹತ್ವದ್ದಾಗಿದೆ, ನಾವು ಅದನ್ನು ನಿರಾಕರಿಸಲು ಸಾಧ್ಯವಿಲ್ಲ ಈ ಬಗ್ಗೆ ನಿಲುವೇನು? ಎಲ್ಲದಕ್ಕಿಂತ ಮುಖ್ಯವಾಗಿ ಚುನಾವಣೆ ಮುಂಚಿತವಾಗಿ ಅವರನ್ನು ಬಂಧಿಸಿದ್ದೇಕೆ ಎಂದು ಕೋರ್ಟ್ ಇಡಿಗೆ ಕೇಳಿದೆ.
ಇಡಿ ಪ್ರಶ್ನೆಗಳಿಗೂ ಮುನ್ನ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಕೇಜ್ರಿವಾಲ್ ಪರ ಎರಡು ಗಂಟೆಗೂ ಅಧಿಕ ಕಾಲ ಸುಧೀರ್ಘವಾಗಿ ವಾದ ಮಂಡಿಸಿದರು. ವಾದ ಆಲಿಸಿದ ಬಳಿಕ ಇಡಿ ಉತ್ತರದ ನಿರೀಕ್ಷೆಯಲ್ಲಿರುವ ಕೋರ್ಟ್ ಶುಕ್ರವಾರಕ್ಕೆ ವಿಚಾರಣೆ ಮುಂದೂಡಿದೆ.
ತಿಹಾರ್ ಜೈಲಿನಲ್ಲರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಪಂಜಾಬ್ ಸಿಎಂ ಭಗವಂತ್ ಮಾನ್ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾತನಾಡಿದ ಅವರು ಕೇಜ್ರಿವಾಲ್ ಆರೋಗ್ಯವಾಗಿದ್ದಾರೆ, ನಿಯಮಿತವಾಗಿ ಇನ್ಸೂಲಿನ್ ಪಡೆಯುತ್ತಿದ್ದಾರೆ. ಅವರು ಪಂಜಾಬ್ ನಲ್ಲಿ ನಡೆಯುತ್ತಿರುವ ಸರ್ಕಾರದ ಯೋಜನೆಗಳ ಮಾಹಿತಿ ಪಡೆದು ಮಾರ್ಗದರ್ಶನ ನೀಡಿದರು ಎಂದು ಹೇಳಿದರು.